ಸೋಮವಾರದ ರಾಶಿ ಫಲ : ಈ ರಾಶಿಯವರಿಗೆ ಸಂಪತ್ತಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ
Team Udayavani, Oct 17, 2022, 7:20 AM IST
ಮೇಷ: ವಿದ್ಯಾರ್ಥಿಗಳಿಗೆ, ರಾಜಕೀಯ ನಾಯಕರಿಗೆ ಶುಭ ಫಲ. ದೀರ್ಘ ಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ನೂತನ ಮಿತ್ರರ ಭೇಟಿ. ಸುಖ ಸಂತೋಷದಿಂದ ಕೂಡಿದ ದಿನ. ಆರ್ಥಿಕ ವಿಚಾರದಲ್ಲಿ ಸ್ತ್ರೀ ಸಹಾಯ.
ವೃಷಭ: ಆರೋಗ್ಯದ ಬಗ್ಗೆ ಸೂಕ್ತ ಕಾಳಜಿಯಿಂದ ವೃದ್ಧಿ. ರಾಜಕೀಯ ನಾಯಕರಿಗೆ ಆಹಾರೋದ್ಯಮ, ವಸ್ತ್ರ, ಆಭರಣ, ವ್ಯವಹಾರಸ್ಥರಿಗೆ ಅಭಿವೃದ್ಧಿ. ನಿರೀಕ್ಷಿತ ಧನವೃದ್ಧಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸಹಾಯ. ದಾಂಪತ್ಯ ಸುಖ ವೃದ್ಧಿ.
ಮಿಥುನ: ಪಾಲುದಾರಿಕಾ ವ್ಯವಹಾರದಲ್ಲಿ ಸಮಾದಾನ ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ. ಸಹೋದರರಿಂದ ಸುಖ. ಪಾನೀಯ ಆಹಾರೋದ್ಯಮ ಸಂಸ್ಥೆಗಳಿಗೆ ಅನುಕೂಲ. ಅಧ್ಯಯನನಿರತರಿಗೆ ಸೂಕ್ತ ಸಹಾಯ ಲಭ್ಯ. ಸಾಂಸಾರಿಕ ನೆಮ್ಮದಿಗೆ ತಾಳ್ಮೆ ಅಗತ್ಯ.
ಕರ್ಕ: ಆರೋಗ್ಯ ಗಮನಿಸಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ,ಉತ್ತಮ ವಾಕ್ ಶಕ್ತಿಯಿಂದ ನಿರೀಕ್ಷಿತ ಧನಾಗಮ. ಭೂಮಿ ವಾಹನಾದಿ ಸುಖ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ವಿದೇಶ ವ್ಯವಹಾರದಲ್ಲಿ ವಿಳಂಬ.
ಸಿಂಹ: ಕಾರ್ಯ ನಿಮಿತ್ತ ದೀರ್ಘ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ. ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ. ಗೃಹೋಪಕರಣ ವಸ್ತುಗಳಿಗೆ ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮಾದಿಗಳಿಗೆ ಧನ ವ್ಯಯಿಸಿದ ತೃಪ್ತಿ. ವಿದ್ಯಾರ್ಥಿಗಳಿಗೆ ಅಭಿವೃದ್ಧಿಯ ಸಮಯ.
ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಸಾಂಸಾರಿಕ ವಿಚಾರದಲ್ಲಿ ಘರ್ಷಣೆಗೆ ಅವಕಾಶ ನೀಡದೇ ಕಾರ್ಯ ಸಾಧಿಸಿಕೊಳ್ಳಿ. ಜಲೋತ್ಪನ್ನ ವಸ್ತುಗಳಲ್ಲಿಯೂ ದೂರ ಪ್ರಯಾಣದ ಕಾರ್ಯಗಳಲ್ಲಿಯೂ ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯಸಿದ್ಧಿ.
ತುಲಾ: ಸ್ತ್ರೀಪುರುಷರಿಗೆ ಪರಸ್ಪರರಿಂದ ಸಹಕಾರ ಅನುಕೂಲತೆ. ಗೌರವದಿಂದ ಕೂಡಿದ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅನಿರೀಕ್ಷಿತ ಹಾಗೂ ಗೌಪ್ಯತೆಯಿಂದ ಕೂಡಿದ ಕಾರ್ಯವೈಖರಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದಿನ.
ವೃಶ್ಚಿಕ: ಧನಾಗಮ ವಿಚಾರದಲ್ಲಿ ಏರಿಳಿತವಿದ್ದರೂ ಸ್ಥಾನಕ್ಕೆ ಚ್ಯುತಿಯಾಗದು. ಸ್ವಪ್ರಯತ್ನ ಸಹೋದರ ಸಹಾಯದಿಂದಲೂ ಕಾರ್ಯರಂಗದಲ್ಲಿ ಉತ್ತಮ ಫಲಿತಾಂಶ. ದೇಹದಲ್ಲಿ ಕಟಿ ಪ್ರದೇಶ ಸೊಂಟದ ಆರೋಗ್ಯದಲ್ಲಿ ಗಮನವಿರಲಿ.
ಧನು: ಆರೋಗ್ಯದಲ್ಲಿ ವೃದ್ಧಿ. ಸಹೋದರಾದಿ ಸಹಾಯ. ಉತ್ತಮ ಧನಾರ್ಜನೆ. ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ. ಮಕ್ಕಳಲ್ಲಿ ನಾಯಕತ್ವ ಗುಣ ವೃದ್ಧಿಯಿಂದ ಹಿರಿಯರಿಗೆ ಸಂತೋಷ. ಪ್ರಯಾಣ. ದೇವತಾ ಕಾರ್ಯ ವಿಳಂಬ.
ಮಕರ: ಸಂಪತ್ತಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ. ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ. ದೇವತಾ ಕೆಲಸ ಕಾರ್ಯಗಳಿಗೆ ಪ್ರಯಾಣ. ಆರೋಗ್ಯ ವೃದ್ಧಿ.
ಕುಂಭ: ಅನಿರೀಕ್ಷಿತ ಧನಲಾಭ. ಮಿತ್ರರಿಂದಲೂ ಸಹೋದರರಿಂದಲೂ ಸುಖ. ಮಕ್ಕಳು ವಿದ್ಯಾರ್ಥಿಗಳ ವಿಚಾರದಲ್ಲಿ ಸಂತೋಷದ ಪರಿಸ್ಥಿತಿ. ಆಹಾರೋದ್ಯಮ ಉದ್ಯಮದವರಿಗೆ ಅಭಿವೃದ್ಧಿ. ಜಲೋತ್ಪನ್ನ ವಸ್ತುಗಳ ವ್ಯವಹಾರಸ್ಥರಿಗೆ ಉತ್ತಮ ದಿನ.
ಮೀನ: ಆರೋಗ್ಯ ಉತ್ತಮ. ಉದ್ಯೋಗದಲ್ಲಿ ನಿರೀಕ್ಷಿತ ಗೌರವ ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಏರಿಳಿತದ ಅನುಭವ. ಧಾರ್ಮಿಕ ಕಾರ್ಯಗಳಿಗೆ ಮಿತವ್ಯಯ. ಸಣ್ಣ ಪ್ರಯಾಣ. ಮಕ್ಕಳಿಂದ ಸುಖ. ಸಹೋದರರಲ್ಲಿ ಪ್ರೀತಿಯಿಂದ ವ್ಯವಹರಿಸಿ ಕಾರ್ಯ ಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.