ಸೋಮವಾರದ ನಿಮ್ಮ ಗ್ರಹಬಲ ಹೇಗಿದೆ?
Team Udayavani, Dec 7, 2020, 7:33 AM IST
ಮೇಷ: ಸಾಂಸಾರಿಕವಾಗಿ ಸಾಮರಸ್ಯ ನಿಮಗೆ ಸುಖ, ಸಂತೋಷ, ನೆಮ್ಮದಿಯನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಹೋಗದಿರಿ. ಒಳ್ಳೆಯ ಫಲಗಳು ಗೋಚರಿಸಲಿವೆ.
ವೃಷಭ: ಒಳಿತು ಕೆಡುಕು ಇವೆರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದು ಒಳಿತು. ಎಲ್ಲಾ ರೀತಿಯಲ್ಲಿ ಒಮ್ಮೆಲೇ ಮುನ್ನುಗ್ಗುವುದು ಬೇಡ. ಜೀವನವನ್ನು ಸದ್ಯದ ಸ್ಥಿತಿಯಲ್ಲಿ ಇದ್ದ ಹಾಗೇ ಎದುರಿಸಬೇಕಾದೀತು. ಕಿರು ಸಂಚಾರವಿದೆ.
ಮಿಥುನ: ಹೆಚ್ಚಿನ ಕೆಲಸ ಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ಯಶಸ್ಸು ತಂದು ಕೊಡಲಿವೆ. ಆತ್ಮವಿಶ್ವಾಸ ಹಾಗೂ ಪ್ರಯತ್ನಬಲ ನಿಮಗೆ ಪೂರಕವಾಗಿ ನಿಲ್ಲಲಿದೆ. ಹೊಸ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕಾಗುವುದು.
ಕರ್ಕ: ಪ್ರತಿಭಾ ಹಾಗೂ ಪ್ರಭಾವಶಾಲಿಗಳಾದ ನಿಮಗೆ ಅದೃಷ್ಟವು ಆಟ ಆಡಿಸಲಿದೆ. ಆದರೂ ಹೆದರದೆ ಧೈರ್ಯದಿಂದ ಎದುರಿಸಿದ್ದಲ್ಲಿ ನಿಮಗೆ ಯಶಸ್ಸಿನ ಅನುಭವವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ.
ಸಿಂಹ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರಲಿದೆ. ವಾಹನ ಖರೀದಿ ಹಾಗೂ ಅದರ ವಿಲೇವಾರಿಯಲ್ಲಿ ಲಾಭವನ್ನು ತಂದು ಕೊಡಲಿದೆ.
ಕನ್ಯಾ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫಲವು ಸಂತಸ ತರಲಿದೆ. ಉತ್ತಮ ಹಿತೈಷಿಗಳು ಮಿತ್ರ ವರ್ಗದವರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ.
ತುಲಾ: ಪ್ರಯತ್ನ ಮಾಡುವ ಮುನ್ನವೇ ಫಲದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟುಬಿಡಿರಿ. ಹಲವು ಕಾರಣಗಳಿಂದ ನಿಮ್ಮ ಆರೋಗ್ಯಕ್ಕೆ ಭಂಗ ಬರಲಿದೆ. ಶ್ರಮ ಪಟ್ಟರೂ ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆದಾವು.
ವೃಶ್ಚಿಕ: ಹಣಕಾಸಿನ ಹಾಗೂ ಆರೋಗ್ಯದ ವಿಚಾರದಲ್ಲಿ ನಿಗಾ ವಹಿಸುವುದು ಅಗತ್ಯವಿದೆ. ನಿಮ್ಮ ತಾಳ್ಮೆ ಸವಾಲಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣಾಗುವಿರಿ. ಯೋಗ್ಯ ಸಂಬಂಧಗಳು ಬರಲಿವೆ.
ಧನು: ನಿಮಗೆ ಈಗ ಸಮಯವು ಪ್ರಸನ್ನವಾಗಿದ್ದುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಆದರೂ ಅನಗತ್ಯ ದುಂದುವೆಚ್ಚ ಬೇಡ. ಹಿರಿಯರ ಸಲಹೆಗೆ ಕಿವಿಗೊಡಿರಿ.
ಮಕರ: ನೀವು ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಸುಳಿಯಲ್ಲಿ ಸಿಲುಕದಂತೆ ಜಾಗ್ರತೆ ಮಾಡಿರಿ. ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯ ಮೂಡಿಬಂದು ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಮಾಡಿರಿ.
ಕುಂಭ: ವೃತ್ತಿರಂಗದಲ್ಲಿ ಕೂಡ ಏರುಪೇರು ಕಂಡು ಬಂದು ಬೇಸರವಾಗಿಲಿದೆ. ಬಾಳ ಸಂಗಾತಿಗಳು ಪರಸ್ಪರ ಅರಿತು ಬಾಳಲಿದ್ದಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶ ಪ್ರಯಾಣವು ಕೂಡಿ ಬರಲಿದೆ. ಸಹನೆ ಬೇಕು.
ಮೀನ: ನಿಮ್ಮ ನಿರಾಶಾ ಮನೋಭಾವವನ್ನು ದೂರ ಮಾಡಿದರೆ ಉತ್ತಮ. ಆರ್ಥಿಕವಾಗಿ ಚೇತರಿಕೆ ಕಂಡು ಬಂದರೂ ಕನ್ನಡಿಯೊಳಗಿನ ಗಂಟಾಗಲಿದೆ. ನಿಧಾನವಾಗಿ ದೊರಕಲಿದೆ. ನಿಮ್ಮ ಪ್ರಯತ್ನ ಬಲದಿಂದ ಕಾರ್ಯ ಸಾಧನೆಯಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.