ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jul 22, 2022, 7:09 AM IST
ಮೇಷ:
ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಗುರುಹಿರಿಯರ, ಮೇಲಧಿಕಾರಿಗಳ ಸಹಕಾರ ಪ್ರೋತ್ಸಾಹದಿಂದ ಗಣನೀಯ ಅಭಿವೃದ್ಧಿ. ದೀರ್ಘ ಪ್ರಯಾಣ ಸಂಭವ. ಸ್ಥಾನ ಗೌರವಾದಿ ಪ್ರಾಪ್ತಿ.
ವೃಷಭ:
ಸುದೃಢ ಆರೋಗ್ಯ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಸ್ಥಾನಮಾನ ಕೀರ್ತಿ ಯಶಸ್ಸು ಲಭ್ಯ. ಹಣಕಾಸಿನ ವಿಚಾರದಲ್ಲಿ ಪರರ ಅವಲಂಬನೆ. ವಿದೇಶ ಮೂಲದ ಸಂಪಾದನೆ. ಎಚ್ಚರಿಕೆಯಿಂದ ಅನ್ಯರ ಸಹಾಯ ಪಡೆಯಿರಿ.
ಮಿಥುನ:
ಉತ್ತಮ ಆರೋಗ್ಯ. ಉತ್ತಮ ವಾಕ್ ಚತುರತೆಯಿಂದ ಪಾಲುದಾರರ ಸಹಕಾರ ದಿಂದ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಮಿತ್ರರಿಂದ ಸಹಕಾರ. ಸಾಂಸಾರಿಕ ಸಣ್ಣ ಪ್ರಯಾಣ.
ಕರ್ಕ:
ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಪಾಲುದಾರರ ಸಹಕಾರ ಅನಿವಾರ್ಯವಾದೀತು. ಸ್ಥಿರ ಆಸ್ತಿಗಳಿಂದ ಧನವೃದ್ಧಿ. ಬಂಧುಗಳಿಂದ ಸಹಕಾರ. ದಂಪತಿಗಳಿಗೆ ಪರಸ್ಪರರಿಂದ ಲಾಭ.
ಸಿಂಹ:
ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರ ವಿಚಾರದಲ್ಲಿ ಅಧಿಕ ಜವಾಬ್ದಾರಿ ಹಾಗೂ ಪರಿಶ್ರಮ ಅಗತ್ಯ. ಗೌರವಯುತ ಹಣ ಸಂಪಾದನೆ. ಅನ್ಯರ ಸಹಾಯ ನಿರೀಕ್ಷಿಸದಿರಿ. ದಾಂಪತ್ಯ ಸಾಮರಸ್ಯಕ್ಕೆ ಹೆಚ್ಚಿದ ಶ್ರಮ. ವಿದ್ಯಾರ್ಥಿಗಳಿಗೆ ಪ್ರಗತಿ.
ಕನ್ಯಾ:
ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರ ದಲ್ಲಿ ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಹಣಕಾಸಿನ ವಿಚಾರದಲ್ಲಿ ಅನಗತ್ಯ ತೊಂದರೆ ಆಗದಂತೆ ಗಮನಿಸಿ. ಸ್ವಪ್ರಯತ್ನಕ್ಕೆ ಆದ್ಯತೆ ನೀಡಿ. ಗುರುಹಿರಿಯರ ಸ್ಪಷ್ಟ ಮಾರ್ಗದರ್ಶನ ಲಭ್ಯ.
ತುಲಾ:
ಆರೋಗ್ಯ ಸ್ಥಿರ. ಸಂಪತ್ತು ವೃದ್ಧಿ, ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ. ನಿರೀಕ್ಷಿತ ಸ್ಥಾನ ಸುಖ. ಸಾಂಸಾರಿಕ ಸುಖದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಉತ್ತಮ ಬದಲಾವಣೆಯ ಸಮಯ.
ವೃಶ್ಚಿಕ:
ನಿರೀಕ್ಷಿತ ಸ್ಥಾನ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾನ್ವಿತ ಅಭಿ ವೃದ್ಧಿ. ಸ್ಥಿರವಾದ ಅಭಿವೃದ್ಧಿದಾಯಕ ಧನ ಸಂಪಾ ದನೆ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಒದಗುವ ಸಮಯ.
ಧನು:
ಆರೋಗ್ಯ ವೃದ್ಧಿ. ಗುರುಹಿರಿಯರ ಸಹಕಾರ, ಮಾರ್ಗದರ್ಶನದಿಂದ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಉತ್ತಮ ಧನ ವೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಕಾರ್ಯ ಸಫಲತೆ. ದಾಂಪತ್ಯದಲ್ಲಿ ಸಹನೆ, ತಾಳ್ಮೆ ಇರಲಿ.
ಮಕರ:
ಆರೋಗ್ಯ ಉತ್ತಮ. ಉತ್ತಮ ಧನಾರ್ಜನೆ ಇದ್ದರೂ ಅನಗತ್ಯ ಖರ್ಚು ಆಗದಂತೆ ಗಮನಹರಿಸಿ. ಸಹೋದ್ಯೋಗಿಗಳಿಂದ ನಿರೀಕ್ಷಿತ ಸಹಕಾರ ಲಭ್ಯ. ಪತ್ರ ವ್ಯವಹಾರ, ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ.
ಕುಂಭ:
ದೂರ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ನಾನಾ ರೀತಿಯ ಅವಕಾಶ ಒದಗಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಗುರುಹಿರಿಯರ ಪ್ರೋತ್ಸಾಹ ಸಿಗುವುದು. ದಾಂಪತ್ಯ ಸುಖ ತೃಪ್ತಿದಾಯಕ. ಧಾರ್ಮಿಕ ಕ್ಷೇತ್ರ ದರ್ಶನ.
ಮೀನ:
ಆರೋಗ್ಯದಲ್ಲಿ ಸುಧಾರಣೆ. ಸಾಹಸ ಶ್ರಮದಿಂದ ಕೂಡಿದ ಧನಾರ್ಜನೆ. ಪತ್ರ ವ್ಯವಹಾರ ವಿಚಾರಗಳಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ದಾಂಪತ್ಯ ಸಾಂಸಾರಿಕ ಸುಖ ತೃಪ್ತಿದಾಯಕ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಾಯ ಸಲಹೆ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.