ಶನಿವಾರದ ರಾಶಿಫಲ : ಯಾರಿಗೆ ಶುಭ ಯಾರಿಗೆ ಲಾಭ
Team Udayavani, Aug 7, 2021, 7:33 AM IST
ಮೇಷ: ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಸಹೋದ್ಯೋಗಿಗಳ ಸಹಕಾರ. ಗೌರವದಿಂದ ಕೂಡಿದ ಧನಾರ್ಜನೆ. ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ವೃದ್ಧಿ.
ವೃಷಭ: ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷದಿಂದ ಕೂಡಿದ ಪರಿಸ್ಥಿತಿ. ದೀರ್ಘ ಪ್ರಯಾಣ ಯೋಗ. ದಾಂಪತ್ಯದಲ್ಲಿ ಉತ್ತಮ ಸಾಮರಸ್ಯ ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಒದಗುವ ಧನಾರ್ಜನೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಮಿಥುನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ . ಅಧಿಕ ಧನಾಗಮ. ಕುಟುಂಬದವರ ಸಹಕಾರ ಪ್ರೋತ್ಸಾಹದಿಂದ ಉದ್ಯೋಗ ವ್ಯವಹಾರಗಳಲ್ಲಿ ಶ್ರೇಯಸ್ಸು. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ.
ಕರ್ಕ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರಿಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ . ಗುರುಹಿರಿಯರ ಸ್ಥಿತಿ ಉತ್ತಮ. ಸಂತೋಷದಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ.
ಸಿಂಹ: ಆರೋಗ್ಯ ಸ್ಥಿರ. ಪ್ರಯಾಣದಿಂದ ದೇಹಾಯಾಸ ತೋರೀತು. ಸಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಜಾಗ್ರತೆಯಿಂದ ಸಫಲತೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ.
ಕನ್ಯಾ: ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಉತ್ತಮ ಧನ ಸಂಪಾದನೆಯ ಸುಖ. ಪಾಲು ದಾರಿಕಾ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಅವಿವಾಹಿತರಿಗೆ ವಿವಾಹ ಯೋಗ ಸಿದ್ಧಿ . ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ.
ತುಲಾ: ಉದ್ಯೋಗ ವ್ಯವಹಾರದಲ್ಲಿ ಸಹಚರರೊಂದಿಗೆ ಸಮಾಧಾನ ತಾಳ್ಮೆ ಅಗತ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಸಂತಸ. ಗುರುಹಿರಿಯರ ಜವಾಬ್ದಾರಿ ನಡೆ. ನಿರಂತರ ಧನಾರ್ಜನೆ. ಆರೋಗ್ಯ ಉತ್ತಮ.
ವೃಶ್ಚಿಕ: ಸಾಂಸಾರಿಕ ಸಂತೋಷ ವೃದ್ಧಿ . ಪರಸ್ಪರ ಸಹಕಾರ. ಮಕ್ಕಳ ವಿಚಾರದಲ್ಲಿ ಧನವ್ಯಯ. ದೇವತಾ ಕಾರ್ಯಗಳಿಗೆ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಸುಸ್ಥಿರ ಆರೋಗ್ಯ. ಗೃಹೋಪವಸ್ತುಗಳ ಸಂಗ್ರಹ.
ಧನು: ನಿಯಮ ಶಿಸ್ತಿನಿಂದ ಕೂಡಿದ ಜೀವನಶೈಲಿ ಸಾಂಸಾರಿಕ ಸುಖದಲ್ಲಿ ಹೆಚ್ಚಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ನಾಯಕತ್ವ ಗುಣ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಮ್ಮೆಪಡುವಂತಹ ಸಂದರ್ಭ.
ಮಕರ: ಆರೋಗ್ಯದಲ್ಲಿ ಸುಧಾರಣೆ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಧನಾರ್ಜನೆ. ಉದ್ಯೋಗ ವಿಚಾರ ಸಂಬಂಧಿ ಪ್ರಯಾಣ ಸಂಭವ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಗುರುಹಿರಿಯರ ಉತ್ತಮ ಪರಿಸ್ಥಿತಿ. ಸಾಂಸಾರಿಕ ಸುಖ ಮಧ್ಯಮ.
ಕುಂಭ: ಆರೋಗ್ಯದ ಬಗ್ಗೆ ಗಮನಹರಿಸಿ. ಸರಿಯಾದ ಶಿಸ್ತು ಅಗತ್ಯ. ಉದಾಸೀನ ಮಾಡದಿರಿ. ಧನಾಗಮನಕ್ಕೆ ಕೊರತೆ ಇರದು. ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯ ಪ್ರವೃತ್ತರಾಗಿರಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಮೀನ: ಉತ್ತಮ ಅಭಿವೃದ್ಧಿದಾಯಕ ದೈಹಿಕ ಸ್ಥಿತಿ. ದೀರ್ಘ ಪ್ರಯಾಣದಿಂದ ನಿರೀಕ್ಷಿತ ಕಾರ್ಯದಲ್ಲಿ ಸಫಲತೆ. ನೂತನ ಮಿತ್ರರ ಸಮಾಗಮ. ಅಧಿಕ ಧನ ಸಂಪತ್ತಿನ ವೃದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.