ಶನಿವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 27, 2022, 7:24 AM IST
ಮೇಷ: ಪ್ರಜ್ಞೆ ಪ್ರತಿಭೆ ಬುದ್ಧಿವಂತಿಕೆ ಸಂದರ್ಭೋಚಿತ ನಡೆ ನುಡಿಯಿಂದ ನಾಯಕತ್ವ ಗುಣ ವೃದ್ಧಿ. ಅಧ್ಯಯನ ನಿಮಿತ್ತ ಪ್ರಯಾಣ ಯಶಸ್ಸು ಲಭ್ಯ. ಗುರು ಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಧನ ಸಂಪತ್ತಿನಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ.
ವೃಷಭ: ಉತ್ತಮ ವಾಕ್ ಚತುರತೆ. ಸಾಹಸದಿಂದ ಕೂಡಿದ ಧನಾರ್ಜನೆ. ಗೃಹ ಆಸ್ತಿ ಕಟ್ಟಡ ವಿಚಾರಗಳಲ್ಲಿ ಧನವ್ಯಯ. ಮಿತ್ರರ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ಸಂಪಾದನೆ.
ಮಿಥುನ: ಆಚಾರ ವಿಚಾರದಲ್ಲಿ ಮಗ್ನತೆ. ಅಧ್ಯಯನ ಅಧ್ಯಾಪನದಲ್ಲಿ ಗಣನೀಯ ಪ್ರಗತಿ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಧನ ಸಂಪತ್ತು ವೃದ್ಧಿ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆಯಿಂದ ಮಹತ್ಕಾರ್ಯ ಸಫಲತೆ.
ಕರ್ಕ: ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಗುರು ಹಿರಿಯರ ಆರೋಗ್ಯ ಗಮನಿಸಿ. ಗೃಹ ಸಂಭಂಧೀ ವಿಚಾರಗಳಲ್ಲಿ ಧನ ವ್ಯಯ. ದಾಂಪತ್ಯ ಸುಖ ವೃದ್ಧಿ. ನೂತನ ಮಿತ್ರರ ಭೇಟಿ.
ಸಿಂಹ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಗೌರವಾದಿ ವೃದ್ಧಿ. ಮಕ್ಕಳಿಂದ ಸಂತೋಷ. ಗುರುಹಿರಿಯರ ಪ್ರೋತ್ಸಾಹ. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಸಲಹೆ ಮಾರ್ಗದರ್ಶನ ನೀಡುವ ಅವಕಾಶ. ದಾಂಪತ್ಯ ಸುಖ ಮದ್ಯಮ.
ಕನ್ಯಾ: ಉತ್ತಮ ಆಲೋಚನೆಯಿಂದ ಕೂಡಿದ ಮಾತುಗಾರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಗುರುಹಿರಿಯರ ಸಹಾಯ ಸಹಕಾರ ಲಭ್ಯ. ಆರೋಗ್ಯ ವೃದ್ಧಿ. ದಾಂಪತ್ಯ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ತುಲಾ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕಲ ವಿಧದ ಲಾಭ. ದಾಂಪತ್ಯ ಸುಖಾದಿಗಳು ವೃದ್ಧಿ. ಸ್ತ್ರೀ ಪುರುಷರಿಗೆ ಪರಸ್ಪರರ ಸಹಕಾರ. ಉತ್ತಮ ಧನ ಸಂಚಯನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗೃಹದಲ್ಲಿ ಚರ್ಚೆಗೆ ಅವಕಾಶ ನೀಡದಿರಿ.
ವೃಶ್ಚಿಕ: ಆರೋಗ್ಯ ವೃದ್ಧಿ. ಅನಿರೀಕ್ಷಿತ ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಸಹಕಾರ ಪ್ರೋತ್ಸಾಹಾದಿ ಲಾಭ. ಮಾನಸಿಕ ತೃಪ್ತಿ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ಧನು: ಉತ್ತಮ ದೈಹಿಕ ಮಾನಸಿಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ವಿವೇಕತೆ ಶ್ರಮದಿಂದ ಅಭಿವೃದ್ಧಿ. ಧನಾರ್ಜನೆಗೆ ಕೊರತೆ ಕಾಣದು. ಪಾಲುದಾರರಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿ ಗಳಿಗೆ ಪ್ರಯಾಣ ಸಂಭವ. ಹಿರಿಯರ ಆರೋಗ್ಯ ಗಮನಿಸಿ.
ಮಕರ: ದೈರ್ಯ ಪರಾಕ್ರಮ ಸ್ಥಿರ ಬುದ್ಧಿಯಿಂದ ಕೂಡಿದ ಕಾರ್ಯ ವೈಖರಿ. ಬಂಧು ಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ ಏರಿಳಿವಾದರೂ ಲಾಭಾಂಶ ವೃದ್ಧಿ. ಪರವೂರ ಸಹೋದ್ಯೋಗಿಗಳಿಂದ ಸಹಕಾರ ವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ.
ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಅಧಿಕ ಧನಲಾಭ. ಸಾಂಸಾರಿಕ ಸುಖ ತೃಪ್ತಿ ದಾಯಕ. ಧಾರ್ಮಿಕ ಸ್ಥಳಗಳ ಸಂದರ್ಶನ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳ ಲಾಭ. ಮಕ್ಕಳಿಂದಲೂ ದಾಂಪತ್ಯದಲ್ಲೂ ಸಂತೋಷ.
ಮೀನ: ಆರೋಗ್ಯ ವೃದ್ಧಿ. ದೈನಂದಿನ ಉದ್ಯೋಗ ವ್ಯವಹಾರಗಳಲ್ಲಿ ಸುದೃಢತೆ. ಸ್ಥಾನಮಾನ ಗೌರವ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ದೀರ್ಘ ಪ್ರಯಾಣ ಸಂಭವ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖದಲ್ಲಿ ಸಂಮೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.