ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ
Team Udayavani, Nov 21, 2021, 8:06 AM IST
ಮೇಷ: ವಾಹನ ಭೂಮಿ ಇತ್ಯಾದಿ ಆಸ್ತಿ ವಿಚಾರ ದಲ್ಲಿಯೂ, ಉದ್ಯೋಗ, ಸರಕಾರೀ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಧನಾರ್ಜನೆಗೆ ಕೊರತೆಯಾಗದು. ಗುರುಹಿರಿಯರಿಂದ ಉತ್ತಮ ಸ್ಥಾನಮಾನ ಸುಖ.
ವೃಷಭ: ಜವಾಬ್ದಾರಿಯುತ ಕಾರ್ಯ ವೈಖರಿಯಿಂದ ಸ್ಥಾನ ಗೌರವಾದಿ ಸುಖ ಪ್ರಶಂಸೆ. ಆರೋಗ್ಯ ವೃದ್ಧಿ. ಗೃಹೋಪವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖ ವೃದ್ಧಿ.
ಮಿಥುನ: ಆರೋಗ್ಯದ ಬಗ್ಗೆ ಗಮನವಿರಲಿ. ಅತಿಯಾದ ಕಾರ್ಯ ಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕವೆನಿಸೀತು. ಮಾತಿನಲ್ಲಿ ಸಹನೆ ಎಚ್ಚರವಿರಲಿ. ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ.
ಕರ್ಕ: ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ ತೋರೀತು. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ.
ಸಿಂಹ: ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಅನ್ಯರಿಗೆ ಸಹಾಯ ಮಾಡುವಾಗ ಸ್ಪಷ್ಟತೆ ಇರಲಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ.
ತುಲಾ: ಆರೋಗ್ಯ ವೃದ್ಧಿ. ಮನೋರಂಜನೆಯಿಂದ ಕೂಡಿದ ದಿನ. ಅನಿರೀಕ್ಷಿತ ಧನಾಗಮನ. ಹೆಚ್ಚಿನ ಲಾಭ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಸರಕಾರಿ ಉದ್ಯೋಗಗಳಲ್ಲಿ ಸಫಲತೆ. ದೂರದ ವ್ಯವಹಾರಗಳಲ್ಲಿ ನಿರೀಕ್ಷಿತ ಧನ ಲಾಭ. ಮಿತ್ರರ ಸಹಾಯ. ಗುರುಹಿರಿಯರ ಪ್ರೋತ್ಸಾಹ, ಆಶೀರ್ವಾದ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ.
ಧನು: ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದೇ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧನೆ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲಿ ದುಡುಕು ನಿರ್ಧಾರ ಮಾಡದಿರಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ.
ಮಕರ: ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಗೌರವ ಆದರಾದಿ ಸುಖ. ಅಧಿಕ ಧನಾರ್ಜನೆ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಖರ್ಚಿಗೆ ಅವಕಾಶ ನೀಡದಿರಿ.
ಕುಂಭ: ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ಪ್ರೋತ್ಸಾಹ. ದೂರದ ವ್ಯವಹಾರಗಳಿಂದ ಧನ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಸಹಕಾರ. ನಿರೀಕ್ಷಿತ ಗುರಿ ಸಾಧನೆ.
ಮೀನ: ಮಕ್ಕಳಿಂದ ಸಂತೋಷ. ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಗೃಹ ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಶ್ರೇಯಸ್ಸು. ಧನಾರ್ಜನೆಗೆ ಕೊರತೆಯಾಗದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.