ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ
Team Udayavani, Sep 19, 2021, 7:46 AM IST
ಮೇಷ: ವಿದ್ಯಾರ್ಥಿಗಳಿಗೆ, ರಾಜಕೀಯ ನಾಯಕರಿಗೆ, ಧಾರ್ಮಿಕ ನಾಯಕರಿಗೆ ಶುಭಫಲ. ದೀರ್ಘಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ನೂತನ ಮಿತ್ರರ ಭೇಟಿ. ಸುಖ ಸಂತೋಷದಿಂದ ಕೂಡಿದ ದಿನ. ಆರ್ಥಿಕ ವಿಚಾರದಲ್ಲಿ ಸ್ತ್ರೀ ಸಹಾಯ.
ವೃಷಭ: ಆರೋಗ್ಯದ ಬಗ್ಗೆ ಸೂಕ್ತ ಕಾಳಜಿಯಿಂದ ವೃದ್ಧಿ. ರಾಜಕೀಯ ನಾಯಕರಿಗೆ ಆಹಾರೋದ್ಯಮ, ವಸ್ತ್ರ, ಆಭರಣ ವ್ಯವಹಾರಸ್ಥರಿಗೆ ಅಭಿವೃದ್ಧಿ. ನಿರೀಕ್ಷಿತ ಧನವೃದ್ಧಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸಹಾಯ. ದಾಂಪತ್ಯ ಸುಖವೃದ್ಧಿ.
ಮಿಥುನ: ಪಾಲುದಾರಿಕಾ ವ್ಯವಹಾರದಲ್ಲಿ ಸಮಾಧಾನ ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ. ಸಹೋದರರಿಂದ ಸುಖ. ಪಾನೀಯ ಆಹಾರೋದ್ಯಮ ಸಂಸ್ಥೆಗಳಿಗೆ ಅನುಕೂಲ.ಸಾಂಸಾರಿಕ ನೆಮ್ಮದಿಗೆ ತಾಳ್ಮೆ ಅಗತ್ಯ.
ಕರ್ಕ: ಉತ್ತಮ ವಾಕ್ ಶಕ್ತಿಯಿಂದ ನಿರೀಕ್ಷಿತ ಧನಾಗಮ. ಭೂಮಿ ವಾಹನಾದಿ ಸುಖ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ವಿದೇಶ ವ್ಯವಹಾರದಲ್ಲಿ ವಿಳಂಬ. ಆರೋಗ್ಯ ಗಮನಿಸಿ.
ಸಿಂಹ: ಕಾರ್ಯನಿಮಿತ್ತದೀರ್ಘಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ. ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ. ಗೃಹೋಪಕರಣ ವಸ್ತುಗಳಿಗೆ ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮಾದಿಗಳಿಗೆ ಧನ ವ್ಯಯಿಸಿದ ತೃಪ್ತಿ.ವಿದ್ಯಾರ್ಥಿಗಳಿಗೆ ಶ್ರೇಯಸ್ಸು.
ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಸಾಂಸಾರಿಕ ವಿಚಾರದಲ್ಲಿ ಘರ್ಷಣೆಗೆ ಅವಕಾಶ ನೀಡದೇ ಕಾರ್ಯ ಸಾಧಿಸಿಕೊಳ್ಳಿ. ಜಲೋತ್ಪನ್ನ ವಸ್ತುಗಳಲ್ಲಿಯೂ, ದೂರ ಪ್ರಯಾಣದ ಕಾರ್ಯಗಳಲ್ಲಿಯೂ ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ.
ತುಲಾ: ಅತೀ ಆಸೆ ಮಾಡದೇ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಉತ್ತಮ ಜನ ಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದಕಾರ್ಯ ಸಾಧಿಸಿದ ಸಮಾಧಾನ. ವಿದ್ಯಾರ್ಥಿಗಳಿಗೆ, ದಂಪತಿಗಳಿಗೆ ಶುಭಫಲ ದಿನ.
ವೃಶ್ಚಿಕ: ರಾಜಕೀಯನಾಯಕರಿಗೆಉತ್ತನಜನಮನ್ನಣೆ.ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಸಾಂಸಾರಿಕರಿಗೆ, ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿಗಳ ಸುಖ. ಅವಿವಾಹಿತರಿಗೆ ವಿವಾಹ ಭಾಗ್ಯ.
ಧನು: ಪಾಲುದಾರಿಕಾ ವ್ಯವಹಾರಸ್ಥರೂ, ದಂಪತಿಗಳು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನಕ್ಕೆ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಅನುಕೂಲಕರ.
ಮಕರ: ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯವೃದ್ಧಿ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ.ನೀರಿನಿಂದ ಉತ್ಪನ್ನ ವಸ್ತುಗಳಿಂದ, ಆಹಾರೋದ್ಯಮ, ಆಭರಣ, ವಸ್ತ್ರ ವ್ಯಾಪಾರಸ್ಥರಿಗೆ ಲಾಭ.
ಕುಂಭ: ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿಸಾಧಿಸಿರಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ. ಗಣಿ, ಭೂವ್ಯವಹಾರ, ಆಹಾರೋದ್ಯಮಕ್ಕೆಯಶಸ್ಸು.
ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ಅಭಿವೃದ್ಧಿದಾಯಕಧನಾರ್ಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.