ಈ ರಾಶಿಯವರಿಗೆ ಎಣಿಕೆಗಿಂತ ಮಿಗಿಲಾದ ಧನಸಂಪತ್ತು ಕೈಸೇರಲಿದೆ: ಹೇಗಿದೆ ಇಂದಿನ ಗ್ರಹಬಲ ?
Team Udayavani, Dec 13, 2020, 7:27 AM IST
ಮೇಷ: ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನೆರವೇರಿ ಇಷ್ಟ ಸಿದ್ಧಿಯನ್ನುಂಟು ಮಾಡಲಿದೆ. ಜೊತೆಗೆ ಪಿತೃಧನ ಪ್ರಚೋದನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಎಣಿಕೆಗಿಂತ ಮಿಗಿಲಾದ ಧನಸಂಪತ್ತು ನಿಮ್ಮ ಕೈಸೇರಲಿದೆ.
ವೃಷಭ: ಆರೋಗ್ಯ ಸುಧಾರಣೆಗಾಗಿ ಆಸ್ಪತ್ರೆಯ ಅಲೆದಾಟ ಹಾಗೂ ಖರ್ಚು ತಂದೀತು. ಮಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಖರ್ಚು ತಂದೀತು. ಕಲಾಜಗತ್ತಿನವರಿಗೆ ಇದ್ದುದರಲ್ಲಿ ತೃಪ್ತಿ ಪಡುವ ಅವಕಾಶವು ಬರಲಿದೆ.
ಮಿಥುನ: ಕೃಷಿ, ತೋಟಗಾರಿಕೆ ಹಾಗೂ ಹೈನು ಮುಂತಾದ ಕ್ಷೇತ್ರಗಳಲ್ಲಿ ಇದ್ದವರಿಗೆ ಆದಾಯ ವೃದ್ಧಿ ಇರುತ್ತದೆ. ನೂತನ ವಸ್ತ್ರಾಭರಣಗಳ ಖರೀದಿಯಿಂದ ಹಿಗ್ಗು. ಆದರೆ ಗಂಡಸರ ಕೈಯಲ್ಲಿ ಕಾಸು ಖಾಲಿಯಾದೀತು. ಜೋಕೆ.
ಕರ್ಕ: ಸಾಮಾನ್ಯವಾದ ರೀತಿಯಲ್ಲಿ ಜೀವನ ನಡೆಸುವ ನಿಮಗೆ ಅತೀ ದುರಾಸೆ ಇರದು. ಹಾಗಾಗಿ ನಿಮ್ಮ ಜೀವನ ನೆಮ್ಮದಿ ಹಾಗೂ ಸಮಾಧಾನದಿಂದ ಕೂಡಿರುತ್ತದೆ. ಇದನ್ನು ಉಳಿಸಿಕೊಂಡು ಬನ್ನಿರಿ. ಆರೋಗ್ಯವು ಉತ್ತಮ.
ಸಿಂಹ: ಗಳಿಸಿದುದಕ್ಕಿಂತ ಕೊಟ್ಟು ಕಳೆದುಕೊಳ್ಳುವುದೇ ಹೆಚ್ಚು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ದೇಹಪೀಡೆ, ಮಕ್ಕಳಿಂದ ಚಿಂತೆ, ಬಂಧುದ್ವೇಷಾದಿಗಳು ನಿಮ್ಮ ನೆಮ್ಮದಿಯನ್ನು ಕಲಕಲಿದೆ. ದೇವರ ಭಕ್ತಿ ಇದಕ್ಕೆ ಪರಿಹಾರ.
ಕನ್ಯಾ: ಒಳಜಗಳ, ಮುಸುಕಿನ ಗುದ್ದಾಟ ಕಂಡುಬರಬಹುದು. ನೆರೆಹೊರೆಯವರ ಹಿತ-ಶತ್ರುಗಳ ಕಾಟದಿಂದ ಮನಸ್ಸು ಉದ್ವಿಗ್ನವಾದೀತು. ಆದಾಯಕ್ಕಿಂತ ವ್ಯಯವೇ ಹೆಚ್ಚಾದೀತು. ಅಧಿಕ ಖರ್ಚು ಕಂಡುಬರಲಿದೆ.
ತುಲಾ: ಮನೆಯಲ್ಲಿ ಸ್ತ್ರೀ ಸೌಖ್ಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ಮೆಚ್ಚಿಗೆ ಗಳಿಸಿಯಾರು. ನೂತನ ಕಟ್ಟಡ ಶಿಲಾನ್ಯಾಸಕ್ಕೆ ತಯಾರಿ ನಡೆಯಲಿದೆ. ವರ್ಗಾವಣೆ ಇರುವ ವೃತ್ತಿಯವರಿಗೆ ಪರವೂರಿಗೆ ಎತ್ತಂಗಡಿಯಾದೀತು. ಶುಭವಿದೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ಪಿತ್ತೋಷ್ಣದಿಂದ ಆರೋಗ್ಯವು ಕೊಂಚ ಹದಗೆಟ್ಟಿàತು. ಹಗಲಿರುಳು ದುಡಿತದ ಅನುಭವ ಹಾಗೂ ಆಯಾಸವು ಕಂಡುಬಂದೀತು. ಜಾಗ್ರತೆ ಇರಲಿ.
ಧನು: ಕೊಟ್ಟ ಸಾಲ ಮರಳಿ ಬಾರದು. ಅದರಿಂದ ನಿಮಗೆ ಚಿಂತೆ ಹೆಚ್ಚಾದೀತು. ನೀವು ನಿರೀಕ್ಷಿಸಿದ ಉದ್ಯೋಗವು ದೊರಕದೆ ಬೇಸರವಾದೀತು. ಜಲವೃತ್ತಿಯವರಿಗೆ ಸಾಕಷ್ಟ ಶ್ರಮವಿದ್ದರೂ ಸೂಕ್ತ ಪ್ರತಿಫಲ ದೊರಕದು.
ಮಕರ: ಮಡದಿಯ ಮನೋಬಯಕೆಯ ಪೂರೈಕೆ ನಿಮಗೆ ಕಿರಿಕಿರಿ ತಂದೀತು. ವಾಹನ ಖರೀದಿಯ ಕೆಲಸ ನಡೆದೀತು. ಹಿರಿಯರ ಮನಸ್ಸನ್ನು ನೋಯಿಸದಿದ್ದರೆ ಉತ್ತಮ. ಮನಸ್ಸಿನಲ್ಲಿ ಶಾಂತಿ ಸಮಾಧಾನ ನೆಲೆಸಲಿದೆ.
ಕುಂಭ: ಸೋದರ ವರ್ಗದ ಆಸ್ತಿ, ಮನೆ, ಸೊತ್ತುಗಳ ವಿಚಾರವಾಗಿ ತರಲೆ ತೆಗೆದಾಗ ಅಹಿತಕಾರಿ ವಚನಗಳು ದೀರ್ಘಕಾಲ ವ್ಯಥೆಯನ್ನು ಉಂಟು ಮಾಡಲಿದೆ. ಮನೆಯಲ್ಲಿಹಿರಿಯರ ಅನಾರೋಗ್ಯವು ತಲೆಬಿಸಿ ತಂದೀತು.
ಮೀನ: ಸಣ್ಣ ಸಣ್ಣ ಪ್ರಮಾದಗಳೂ ಬೃಹತ್ತಾಗಿ ಪರಿಣಮಿಸಬಹುದು. ಎಚ್ಚರಿಕೆಯ ಹೆಜ್ಜೆಗಳನ್ನಿಡಿರಿ. ಸರಕಾರಿ ಅಧಿಕಾರಿಗಳಿಗೆ ತುಂಬಾ ಉದ್ವೇಗದ ಕೆಲಸವು ಕಂಡುಬರುವುದು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.