ಗುರುವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Sep 15, 2022, 7:11 AM IST
ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ನಿಮ್ಮದಾಗುವುದು. ಉದ್ಯೋಗದಲ್ಲಿ ಶ್ರಮ ಅಧಿಕ. ಧನಾರ್ಜನೆಗೆ ಕೊರತೆ ಇರದು. ಗೃಹೋಪಕರಣ ವಸ್ತು ಸಂಗ್ರಹದಲ್ಲಿ ಅನುಕೂಲ ಪರಿಸ್ಥಿತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ.
ವೃಷಭ: ಬರಹಗಾರರಿಗೆ, ಆಹಾರೋದ್ಯಮಿಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ ಸಮಯ. ದೂರ ಪ್ರದೇಶದ ಭೂ ಕಟ್ಟಡ ವಾಹನಾದಿ ವಿಚಾರದಲ್ಲಿ ಬದಲಾವಣೆ. ಉನ್ನತ ಅಧಿಕಾರಕ್ಕಾಗಿ ಶ್ರಮ. ದಾಂಪತ್ಯ ಸುಖಕರ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯ ಸಾಧನೆ.
ಮಿಥುನ: ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ. ಸ್ಥಿರವಾದ ಧನ ಸಂಪತ್ತು. ಆರೋಗ್ಯ ಗಮನಹರಿಸಿ. ಸಾಂಸಾರಿಕ ವಿಚಾರದಲ್ಲಿ ಸಮಾದಾನದಿಂದ ಕಾರ್ಯ ನಿರ್ವಹಿಸಿ. ಪ್ರಯಾಣ ಲಾಭಕರ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶ.
ಕರ್ಕ: ಆರೋಗ್ಯದ ಬಗ್ಗೆ ಗಮನಿಸಿ. ಅಧಿಕ ದೈಹಿಕ ಶ್ರಮ. ಧನಾರ್ಜನೆ. ಮಿತ್ರರ ವಿಚಾರ, ಅಧ್ಯಯನ ವಿಚಾರ, ಉದ್ಯೋಗ, ಸ್ಥಾನ ಗೌರವ ವಿಚಾರದಲ್ಲಿ ಅಭಿವೃದ್ಧಿ. ಮಾತನಾಡುವಾಗ ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರೊಂದಿಗೆ ಸಂಯಮದಿಂದ ವ್ಯವಹರಿಸಿ.
ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಸಹೋದರಾದಿಗಳಿಂದಲೂ ಕಾರ್ಮಿಕ ವರ್ಗದವರಿಂದಲೂ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಒದಗುವುದು. ಧನಾರ್ಜನೆಗೆ ಕೊರತೆ ಆಗದು. ಪರರ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ.
ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯ ನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ವಿದ್ಯಾರ್ಥಿಗಳು ಶ್ರಮ ವಹಿಸಿದರೆ ಉತ್ತಮ ಫಲ. ದಾಂಪತ್ಯದಲ್ಲಿ ಪರಸ್ಪರರ ಸಹಕಾರ ಪ್ರೋತ್ಸಾಹ ಅಗತ್ಯ. ಧಾರ್ಮಿಕ ಕಾರ್ಯದಲ್ಲಿ ತಲ್ಲೀನತೆ.
ತುಲಾ: ಸುಖ ಸಂತೋಷದಿಂದ ಕೂಡಿದ ದಿನ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದಲೂ ಜವಾಬ್ದಾರಿಯಿಂದಲೂ ಕೂಡಿದ ಕಾರ್ಯ ವೈಖರಿ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆಯಾಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದಿರಿ.
ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್ ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಗೆ ಸರ್ವವಿಧದ ಸೌಲಭ್ಯ ಪ್ರಾಪ್ತಿ. ಬಂಧುಮಿತ್ರರಲ್ಲಿ ಸಂಯಮದಿಂದ ವರ್ತಿಸಿ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧುಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೋನ್ಯತೆಗೆ ಕೊರತೆಯಾಗದಂತೆ ವ್ಯವಹರಿಸಿ. ಮಕ್ಕಳ ಸುಖ ಸಂತೋಷ ವೃದ್ಧಿ.
ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿ ಗಳಿಂದಲೂ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರ ಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನ ವ್ಯಯ. ದಾಂಪತ್ಯ ತೃಪ್ತಿಕರ.
ಮೀನ: ಆರೋಗ್ಯ ವೃದ್ಧಿ. ದೀರ್ಘ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧುಮಿತ್ರರಲ್ಲಿ ಸಂಯಮದಿಂದ ವರ್ತಿಸಿ. ಆರೋಗ್ಯ ಗಮನಿಸಿ. ಗುರುಹಿರಿಯರ ಆಶೀರ್ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.