ಗುರುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ
Team Udayavani, Oct 7, 2021, 8:08 AM IST
ಮೇಷ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನೇತೃತ್ವ ವಹಿಸಿದ ತೃಪ್ತಿ. ಹಿರಿಯರ ಗುರುಗಳ ಪ್ರೀತಿ ಸಂಪಾದನೆ. ಗಣ್ಯರ ಭೇಟಿ ಸ್ಥಾನಮಾನ ವೃದ್ಧಿ. ಧನ ಸಂಪತ್ತಿನಲ್ಲಿ ವಿಚಾರದಲ್ಲಿ ಸಂತೋಷ. ಬಂಧುಮಿತ್ರರಲ್ಲಿ ಬೇಸರ ಮಾಡದಿರಿ.
ವೃಷಭ: ಗೃಹ ವಾಹನಾದಿ ಆಸ್ತಿ ವಿಚಾರದಲ್ಲಿ ಆಸಕ್ತಿ. ದೂರದವ್ಯವಹಾರಗಳಲ್ಲಿ ಪ್ರಗತಿ. ಮಾತಿನಲ್ಲಿ ದಾಕ್ಷಿಣ್ಯ ತೋರದೇ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣದಿಂದದೇ ಹಾಯಾಸ .
ಮಿಥುನ: ಆತುರತೆಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಸುಖ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಉತ್ತಮಬದಲಾವಣೆ. ಸಹೋದ್ಯೋಗಿಗಳಿಂದ ಸಹಕಾರಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ.
ಕರ್ಕ: ಸಣ್ಣ ಹಾಗೂ ದೀರ್ಘ ಪ್ರಯಾಣದಿಂದ ಅನುಕೂಲ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರಗಳಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಗೃಹ ಸಂಬಂಧಿತ ಖರ್ಚು. ಮಕ್ಕಳಿಂದ ಸುಖ.
ಸಿಂಹ: ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದಅಭಿವೃದ್ಧಿ.ಬರಬೇಕಾದಸಂಪತ್ತುಪ್ರಾಪ್ತಿ. ಸಾಲ ನೀಡದಿರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ.
ಕನ್ಯಾ: ಹೆಚ್ಚಿದ ಪ್ರರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಆಸಡ್ಡೆ ಮಾಡದಿರಿ. ಸಾಂಸಾರಿಕ ಸುಖ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರುವ ಸಮಯ.
ತುಲಾ: ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲವಾರು ಮಾರ್ಗಗಳು ಎದುರಾಗುವುವು.
ವೃಶ್ಚಿಕ: ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆ.
ಧನು: ಆರೋಗ್ಯದಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಭೂಮಿ ಆಸ್ತಿ ವ್ಯವಹಾರದಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ಕುಟುಂಬಿಕರ ಉತ್ತಮ ಸಹಕಾರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ.
ಮಕರ: ಉತ್ತಮ ಆರೋಗ್ಯ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನಾರ್ಜನೆಗೆ ಸರಿಯಾಗಿ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಸಫಲತೆ.
ಕುಂಭ : ಆರೋಗ್ಯವೃದ್ಧಿ.ಉದ್ಯೋಗವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಧನಸಂಪತ್ತು ಪ್ರಾಪ್ತಿ. ಧಾರ್ಮಿಕಕ್ಷೇತ್ರಗಳ ಸಂದರ್ಶನ. ಗೃಹೋಪ ವಸ್ತುಗಳ ಸಂಗ್ರಹ. ದೀರ್ಘ ಪ್ರಯಾಣದಿಂದ ದೇಹಾಯಾಸ ತೋರೀತು.
ಮೀನ: ಸುದೃಢ ಆರೋಗ್ಯ. ಮಾತಿನಲ್ಲಿ ತಾಳ್ಮೆ ಹಿಡಿತವಿರಲಿ, ಅನಗತ್ಯ ಚರ್ಚೆಗೆ ಒಳಗಾಗಿ ಆರ್ಥಿಕ ನಷ್ಟಕ್ಕೆ ಒಳಗಾಗದಿರಿ. ಪಾಲುದಾರಿಕಾ ಕ್ಷೇತ್ರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಸವಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.