![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 21, 2021, 7:52 AM IST
ಮೇಷ: ಘರ್ಷಣೆಗೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಲಭ್ಯ. ಧನಾಗಮನ ಅತ್ಯುತ್ತಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿ.
ವೃಷಭ: ಧಾರ್ಮಿಕ ಕ್ಷೇತ್ರ ಸಂದರ್ಶನ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಸಾಂಸಾರಿಕ ಸುಖ ಮಧ್ಯಮ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.
ಮಿಥುನ: ನಿರೀಕ್ಷೆಯಂತೆ ಉತ್ತಮ ವಾಕ್‌ಚತುರತೆ ಯಿಂದ ಹೆಚ್ಚಿದ ಧನಲಾಭ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಪ್ರೋತ್ಸಾಹ ಸಹಕಾರ. ವಿದ್ಯಾರ್ಜನೆಯಲ್ಲಿ ತಲ್ಲೀನತೆ.
ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ನೆಮ್ಮದಿ ಲಭಿಸೀತು. ಗುರು ಹಿರಿಯರಲ್ಲಿ ಚರ್ಚೆಗೆ ಆಸ್ಪದ ನೀಡದಿರಿ.
ಸಿಂಹ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವಹಾರ ದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.
ಕನ್ಯಾ: ಸಜ್ಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಹೆಚ್ಚಿದ ವರಮಾನ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಸಾಂಸಾರಿಕ ಸುಖ ವೃದ್ಧಿ.
ತುಲಾ : ಉತ್ತಮ ಆರೋಗ್ಯ. ಸ್ಥಿತಿಗತಿಗಳ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದೀರ್ಘ ಪ್ರಯಾಣ ಸಂಭವ. ಮಕ್ಕಳಿಂದ ವಿದ್ಯಾರ್ಥಿಗಳಿಂದ ಸಂತೋಷ. ಹಣಕಾಸಿನ ವಿಚಾರದಲ್ಲಿ ಪ್ರಗತಿ.
ವೃಶ್ಚಿಕ: ದೀರ್ಘ ಪ್ರಯಾಣದಲ್ಲಿ ವಿಳಂಬ ತೋರೀತು. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಉಪಕಾರ ಮಾಡುವಾಗ ತಿಳಿದು ನಿರ್ಣಯಿಸಿ. ಗೃಹ, ವಾಹನ, ಆಸ್ತಿ ಸಂಬಂಧ ಖರ್ಚು ತೋರೀತು. ಬಂಧುಮಿತ್ರರಿಂದ ಮಧ್ಯಮ ಸುಖ.
ಧನು: ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಸುಮ್ಮನೆ ಬೇರೆಯವರ ವಿಚಾರದಲ್ಲಿ ಭಾಗವಹಿಸದಿರಿ. ಹಣಕಾಸಿನ ವಿಚಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದ ತೃಪ್ತಿ.
ಮಕರ: ಅತಿಯಾದ ನಿಷ್ಠೆ ಶ್ರಮ ವಹಿಸಿದರೂ ದೇಹಾರೋಗ್ಯ ಗಮನಿಸಿ. ಒಳ್ಳೆ ಹೆಸರು ಸಂಪಾದಿಸುವ ಸಮಯ. ಮಕ್ಕಳಿಂದ ಸಂತೋಷ ವೃದ್ಧಿ. ಗೃಹ, ವಾಹನ, ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.
ಕುಂಭ: ಅಧ್ಯಯನದಲ್ಲಿ ತಲ್ಲೀನತೆ. ಸಂದಭೋìಚಿತ ಉಪಾಯ, ಪ್ರತಿಭೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಧನಾಗಮ ಉತ್ತಮ. ಬಂಧುಮಿತ್ರರ ಸಹಕಾರ. ಗುರುಹಿರಿಯ ರಿಂದ ಪ್ರೋತ್ಸಾಹ ಹಾಗೂ ಉತ್ತಮ ಮಾರ್ಗದರ್ಶನ.
ಮೀನ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪೈಪೋಟಿ ತೋರೀತು. ಧೈರ್ಯ ಶೌರ್ಯ ದಿಂದ ಪ್ರಗತಿ. ಆರ್ಥಿಕ ವಿಚಾರದಲ್ಲಿ ಗಣನೀಯ ಪ್ರಗತಿ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.