ರಾಯರ ವಾರ ನಿಮ್ಮ ಗ್ರಹ ಬಲ ಹೇಗಿದೆ ನೋಡಿ : ಇಲ್ಲಿದೆ ನಿಮ್ಮ ರಾಶಿಫಲ
Team Udayavani, May 13, 2021, 7:23 AM IST
ಮೇಷ: ನಿಮ್ಮ ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು. ಅವರ ಹೊಣೆಗೇಡಿತನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಎಚ್ಚರದಿಂದಿರಿ. ಅನಿರೀಕ್ಷಿತ ದೂರ ಸಂಚಾರದ ಸಾಧ್ಯತೆ ಇದ್ದು ಕಾರ್ಯಾನುಕೂಲಕ್ಕೆ ಪೂರಕವಾಗುತ್ತದೆ.
ವೃಷಭ: ಸಾಮಾಜಿಕ ಚಟುವಟಿಕೆಗಳಲ್ಲಿ ಮುನ್ನಡೆಯು ಕಂಡುಬಂದೀತು. ಆರೋಗ್ಯದ ಕಡೆ ಗಮನ ನೀಡಿರಿ. ಸಾಂಸಾರಿಕ ಜೀವನವು ಸಮಾಧಾನಕರವಾದರೂ ಹೊಂದಾಣಿಕೆ ಅಗತ್ಯವಿರುತ್ತದೆ. ಹಿರಿಯರ ಸಲಹೆಗೆ ಸ್ಪಂದಿಸಿರಿ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಆಪ್ತರ ಸಲಹೆಗಳನ್ನು ಸ್ವೀಕರಿಸಿದರೆ ಒಳಿತು. ಕಠಿಣ ಪರಿಶ್ರಮ ಆತ್ಮವಿಶ್ವಾಸಕ್ಕೆ ಸರಿಯಾದ ರೀತಿಯಲ್ಲಿ ದುಡಿಮೆಗೆ ತಕ್ಕ ಪ್ರತಿಫಲ ದೊರಕುವುದು. ಸಹೋದ್ಯೋಗಿಗಳೊಡನೆ ಗುಣಾತ್ಮಕ ವರ್ತನೆ ತೋರಿಸಿರಿ.
ಕರ್ಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ, ಮಾನಸಿಕ ದೃಢತೆ ಕರಗಬಹುದು. ಕೌಟುಂಬಿಕವಾಗಿ ಸಂಬಂಧಗಳು ಕೆಟ್ಟು ಹೋಗಬಹುದು. ಹೆಚ್ಚಿನ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುವುದು.
ಸಿಂಹ: ಆರ್ಥಿಕವಾಗಿ ಹೆಚ್ಚಿನ ಸಮಸ್ಯೆಗಳು ಇರಲಾರದು. ನಿಮ್ಮ ಯೋಚನೆಗಳನ್ನು ಹೇಗೆ ಮುಂದಿಡುತ್ತೀರಿ ಎಂಬುದರ ಮೇಲೆ ಬಹುತೇಕ ವಿಷಯಗಳು ಅವಲಂಬಿತವಾಗಲಿದೆ. ಮಾನಸಿಕ ಚಿಂತನೆಗಳು ಪದೇ ಪದೇ ಬದಲಾಗಬಹುದು.
ಕನ್ಯಾ: ನಿಮ್ಮ ಸಾಮರ್ಥ್ಯದ ಅತಿರೇಕದಿಂದ ಪಶ್ಚಾತ್ತಾಪ ಪಡುವ ಸಂಭವ ಬಂದೀತು. ಆರ್ಥಿಕ ಬಿಕ್ಕಟ್ಟು ಆಗಾಗ ತೋರಿಬಂದರೂ ಧನದಾಯ ನಿರಂತರವಾದೀತು. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಗಳು ಇತರರ ಗಮನ ಸೆಳೆಯಲಿದೆ.
ತುಲಾ: ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ತೋರಿ ಬಂದಾವು. ಲೆಕ್ಕಾಚಾರವನ್ನು ಸರಿಯಾಗಿಟ್ಟುಕೊಳ್ಳಿರಿ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು. ಹಂತಹಂತವಾಗಿ ಮಾನಸಿಕ ಒತ್ತಡಗಳು ಕಡಿಮೆಯಾಗಲಿದೆ.
ವೃಶ್ಚಿಕ: ವೃತ್ತಿರಂಗದಲ್ಲಿ ಸಾಕಷ್ಟು ಸವಾಲುಗಳು ನಿಮ್ಮ ಮುಂದಿವೆ. ನಿಮ್ಮತನವನ್ನು ತೋರಿಸುವಂತಹ ಕೆಲಸ ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು ನಿಶ್ಚಿತ. ಅಪರಿಚಿತರ ಆಗಮನವಿದೆ.
ಧನು: ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡಲಿದ್ದಾರೆ. ತಾಳ್ಮೆಯನ್ನು ತಂದುಕೊಳ್ಳುವುದು ಅಗತ್ಯವಿದೆ. ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಿರಿ. ಹಾಗೆಂದು ಅತೀ ಉತ್ಸಾಹವನ್ನು ಅದುಮಿಟ್ಟುಕೊಳ್ಳಿರಿ.
ಮಕರ: ಕಾರ್ಯಕ್ಷೇತ್ರದಲ್ಲಿ ವಿರೋಧಿ ಹಾಗೂ ಪೈಪೋಟಿಯನ್ನು ಸೃಷ್ಟಿಸಬಹುದು. ಆರ್ಥಿಕವಾಗಿ ಹೆಚ್ಚಿನ ಉನ್ನತಿ ಇದ್ದು ಹಣಕಾಸಿನ ಬಗ್ಗೆ ಸಮತೋಲನವನ್ನು ಕಾಯ್ದು ಕೊಳ್ಳಿರಿ. ಯಾವುದೇ ವಿಚಾರದಲ್ಲಿ ಸಂಘರ್ಷಕ್ಕೆ ಇಳಿಯದಿರಿ.
ಕುಂಭ: ಪ್ರಣಯ ಪ್ರಸಂಗದಲ್ಲಿ ಅಡೆತಡೆಗಳು ತೋರಿ ಬಂದಾವು. ಅನಿರೀಕ್ಷಿತವಾಗಿ ಆಪ್ತರೊಬ್ಬರಿಗೆ ಆರ್ಥಿಕ ನೆರವು ನೀಡಬೇಕಾದೀತು. ಇದರ ಬಗ್ಗೆ ಚಿಂತೆ ಅನಾವಶ್ಯಕ. ಕೌಟುಂಬಿಕವಾಗಿ ಬಂಧುಮಿತ್ರರ ಆಗಮನವಾದೀತು.
ಮೀನ: ಹಣಕಾಸಿನ ವಿಚಾರದಲ್ಲಿ ಅತೀ ಜಾಗ್ರತೆ ಮಾಡಬೇಕಾದೀತು. ನಿಮಗೆ ಮಹತ್ವದ ದಿನಗಳಿವು. ಪ್ರೀತಿ ಪಾತ್ರರೊಂದಿಗೆ ಆತ್ಮೀಯವಾಗಿ ಕಳೆಯುವಂತಾದೀತು. ವೃತ್ತಿರಂಗದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.