![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 15, 2020, 8:39 AM IST
15-12-2020
ಮೇಷ: ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ತಂದು ಕೊಟ್ಟಾವು. ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ತೋರಿಬಂದು ಹಿನ್ನಡೆ ತಂದೀತು.
ವೃಷಭ: ಸಮರ್ಥ ಕಾರ್ಯನಿರ್ವಹಣೆ, ಸಾಮಾಜಿಕ ಮೆಚ್ಚುಗೆಗೆ ಪಾತ್ರವಾದೀತು. ಕಾರ್ಯರಂಗದಲ್ಲಿ ಉತ್ಸಾಹದಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿದರೆ ಉತ್ತಮವಾಗಲಿದೆ.
ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಕಡಿಮೆಯಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ರಖಂ ವ್ಯಾಪಾರಿಗಳಿಗೆ ಲಾಭದಾಯಕ ಆದಾಯ ತಂದು ಕೊಡಲಿದೆ. ಆಗಾಗ ದೇಹಾಯಾಸದಿಂದ ಔಷಧೋಪಚಾರದ ಅಗತ್ಯವಿದೆ.
ಕರ್ಕ: ಅಲ್ಪ ಪ್ರಯತ್ನಬಲಕ್ಕೆ ಪರಿಣಾಮ ಒಳ್ಳೆಯದು ಸಿಗಲಿದೆ. ಕೌಟುಂಬಿಕವಾಗಿ ಆಗಾಗ ನೆರೆಹೊರೆಯವರ ಕಿರಿಕಿರಿ, ಚಾಡಿ ಮಾತುಗಳಿಂದ ತಲೆಕೆಡಿಸೀತು. ಸಾಂಸಾರಿಕವಾಗಿ ಮಡದಿ ಮಕ್ಕಳ ಸಹಕಾರ ನೆಮ್ಮದಿ ತರಲಿದೆ.
ಸಿಂಹ: ವೈಯಕ್ತಿಕವಾಗಿ ಮಾಡಿದ ತಪ್ಪುಗಳ ವಿಮರ್ಶೆ ಮಾಡಬೇಕಾದೀತು. ಅತೀ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಗ್ರಹಗಳ ಪ್ರತಿಕೂಲತೆಗಳಿಂದ ಆಗಾಗ ಹೆಚ್ಚಿನ ಕಾರ್ಯಗಳಿಗೆ ಹಿನ್ನಡೆ ತೋರಿಬರುವುದು.
ಕನ್ಯಾ: ಗುರುವಿನ ಪ್ರತಿಕೂಲತೆಯಿಂದ ಆಗಾಗ ನಾನಾ ರೀತಿಯಲ್ಲಿ ಪರಿಣಾಮ ಬೀರಲಿದೆ. ಮುಖ್ಯವಾಗಿ ಮಾನಸಿಕ ಗೊಂದಲಗಳ ಬಗ್ಗೆ ಕಾಳಜಿ ವಹಿಸಬೇಕಾದೀತು. ಪ್ರತಿಷ್ಠೆಗಾಗಿ ನಾನಾ ರೀತಿಯಲ್ಲಿ ಹಣ ವ್ಯಯ ಕಂಡು ಬರಲಿದೆ.
ತುಲಾ: ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಿತು. ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಕಿರಿಕಿರಿಯೆನಿಸಲಿದೆ. ವೃಥಾ ಮಾನಾಪಮಾನಗಳಿಗೆ ನೀವು ಬಲಿಯಾಗಲಿದ್ದೀರಿ.
ವೃಶ್ಚಿಕ: ದೈವಾನುಗ್ರಹ ಪಡೆದ ನೀವು ಭಾಗ್ಯಶಾಲಿಗಳೇ ಸೈ. ಉದಾಸೀನತೆ ತೋರದೆ ಅಹಂಭಾವ ಬಿಟ್ಟು ನೈತಿಕ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಲಾಭದ ಸೂಚನೆ ತಂದೀತು.
ಧನು: ಇದ್ದುದರಲ್ಲೇ ಪರಿವರ್ತನೆ ತೋರಿಬರಲಿದೆ. ಧೈರ್ಯದಿಂದ ಮುನ್ನುಗ್ಗಿ ಕಾರ್ಯಸಾಧಿಸಲು ನೋಡಿರಿ. ಅದರಲ್ಲಿ ಯಶಸ್ಸು ನಿಮಗೆ ದೊರಕಲಿದೆ. ರಾಜಕೀಯ ಕ್ಷೇತ್ರದವರಿಗೆ ಹರಸಾಹಸದಿಂದ ಸ್ಥಾನಮಾನ ದೊರಕಲಿದೆ.
ಮಕರ: ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿದಾಯಕವಾಗಿ, ನಿಮ್ಮ ಹೂಡಿಕೆ ಗಳು ಲಾಭದಾಯಕವಾಗಲಿದೆ. ಆದರೂ ಆಲೋಚನೆ ಮಾಡಿ ಮುಂದುವರಿದಲ್ಲಿ ಯಶಸ್ಸು ದೊರಕಲಿದೆ. ಅವಕಾಶಗಳಿಗೆ ಸ್ಪಂದಿಸಿರಿ.
ಕುಂಭ: ಸಂದಿಗ್ಧಕ್ಕೊಳಗಾದ ವಾತಾವರಣ ಆಗಾಗ ಆತಂಕಕ್ಕೆ ಕಾರಣವಾದರೂ ನಿಮ್ಮ ಮನೋಬಲ ನಿಮ್ಮನ್ನು ಕಾಪಾಡಲಿದೆ. ವ್ಯಾಪಾರಸ್ಥರು, ಸ್ವಂತ ದುಡಿಮೆಯವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿರುತ್ತದೆ.
ಮೀನ: ಗುರುವಿನ ಅನುಗ್ರಹದಿಂದಾಗಿ ಸಾಮಾಜಿಕ ರಂಗದಲ್ಲಿ ಗೌರವ ದೊರಕಲಿದೆ. ಹಾಗೂ ವೃತ್ತಿರಂಗದಲ್ಲಿ ನೆಮ್ಮದಿಯ ಜತೆಗೆ ಹೊಸ ಅವಕಾಶಗಳು ಒದಗಿ ಬರಲಿವೆ. ಕಿರಿಕಿರಿ ಇದ್ದರೂ ನೆಮ್ಮದಿಯಿಂದ ಸಂತಸವಿದೆ.
ಎನ್.ಎಸ್ ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.