Daily horoscope: ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಪದೋನ್ನತಿಯೊಂದಿಗೆ ವೇತನ ಏರಿಕೆಯಾಗಲಿದೆ
Team Udayavani, Nov 1, 2023, 7:02 AM IST
ಮೇಷ: ಮಾನಾಪಮಾನಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.ಪ್ರಯತ್ನಕ್ಕೆ ತಕ್ಕ ಪ್ರತಿಫಲ.ಹೆಚ್ಚು ಕೆಲಸಕ್ಕೆ ಉತ್ತೇಜನ. ಸ್ವಂತ ಉದ್ಯಮದಲ್ಲಿ ಹೊಸ ಬಗೆಯ ಪೈಪೋಟಿ. ಮನೆಗೆ ಅತಿಥಿಗಳ ಆಗಮನ.
ವೃಷಭ: ಆರೋಗ್ಯ ವೃದ್ಧಿ.ಉದ್ಯೋಗದಲ್ಲಿ ಪದೋನ್ನತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಶುಭವಾರ್ತೆ. ಉದ್ಯಮಿಗಳಿಗೆ ಉತ್ಪಾದನೆ ಹೆಚ್ಚಳ ಹಾಗೂ ಗುಣಮಟ್ಟ ಸುಧಾರಣೆಗೆ ಪೂರಕ ವಾತಾವರಣ. ದೂರದಲ್ಲಿರುವ ನೆಂಟರ ಆಗಮನ.
ಮಿಥುನ: ಅಕಾರಣವಾಗಿ ಸ್ವಜನರ ಕೋಪಕ್ಕೆ ಗುರಿಯಾಗುವ ಯೋಗ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಮೇಲಧಿಕಾರಿಗಳಿಗೆ ತಪ್ಪು ಸಂದೇಶ ರವಾನೆ. ಗಣೇಶ, ಶಿವ, ದುರ್ಗೆಯರ ಸೇವೆಯಿಂದ ಸಮಾಧಾನ. ಸ್ವಂತ ಉದ್ಯಮದಲ್ಲಿ ಸಾಮಾನ್ಯ ಪ್ರಗತಿ.
ಕರ್ಕಾಟಕ: ಇಷ್ಟ ದೇವತಾರ್ಚನೆಯ ಮೂಲಕ ಕಷ್ಟಗಳು ದೂರ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಪರಿಶ್ರಮಕ್ಕೆ ಮನ್ನಣೆ. ಸ್ವಂತ ಉದ್ಯಮದಲ್ಲಿ ಉತ್ಪಾದನೆ ವೃದ್ಧಿಗೆ ಹೊಸಬಗೆಯ ಪ್ರಯತ್ನ. ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫಲ. ಮನೆಮಂದಿಗೆ ಉಲ್ಲಾಸದ ವಾತಾವರಣ.
ಸಿಂಹ: ನಿಧಾನವಾದರೂ ಏರುಗತಿಯಲ್ಲಿ ಸಾಧನೆ. ಉದ್ಯೋಗದಲ್ಲಿ ಪದೋನ್ನತಿಯೊಂದಿಗೆ ವೇತನ ಏರಿಕೆ. ಹೊಸ ಪರಿಚಯಸ್ಥರಿಂದ ವ್ಯಾಪಾರ ವೃದ್ಧಿಗೆ ಸಹಾಯ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ಗೃಹ ಖರೀದಿಗೆ ಸಮಾಲೋಚನೆ.
ಕನ್ಯಾ: ಆತಂಕದ ಕ್ಷಣಗಳಿಂದ ಬಿಡುಗಡೆ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಸಹಾಯ. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಬಂಧುಗಳ ಮನೆಯಲ್ಲಿ ವ್ಯವಹಾರ ಮಾತುಕತೆಯಲ್ಲಿ ಭಾಗಿ.
ತುಲಾ: ನಿಶ್ಚಿಂತರಾಗಿರಲು ಕಲಿಯಿರಿ. ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ.ಸ್ವಂತ ಉದ್ಯಮ ವಿಸ್ತರಣೆಗೆ ವಿತ್ತ ಸಂಸ್ಥೆಯಿಂದ ಅಪೇಕ್ಷಿತ ನೆರವು ಲಭ್ಯ.
ವೃಶ್ಚಿಕ: ಸಂಕಟಗಳು ದೂರವಾಗಿ ನೆಮ್ಮದಿಯನ್ನು ಅನುಭವಿಸುವ ದಿನ. ಉದ್ಯೋಗ ಸ್ಥಾನದಲ್ಲಿ ಗೌರವ ಪ್ರಾಪ್ತಿ. ಪ್ರತಿಭೆಗೆ ಗೌರವ.ಸ್ವಂತ ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ. ಹೊಸ ಪಾಲುದಾರರ ಸೇರ್ಪಡೆಗೆ ಚಿಂತನೆ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.
ಧನು: ಸಂಗಾತಿಯ ಆರೋಗ್ಯ ವೃದ್ಧಿ. ನೆರೆಮನೆಯವರಿಂದ ಆವಶ್ಯಕತೆಗೆ ತಕ್ಕಂತೆ ಸಹಾಯ. ಉದ್ಯೋಗ ಸ್ಥಾನದಲ್ಲಿ ಎಲ್ಲರ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಕುಟುಂಬದ ಕ್ಷೇಮಕ್ಕಾಗಿ ಮಾಡಿದ ತ್ಯಾಗಕ್ಕೆ ಯೋಗ್ಯರಿಂದ ಕೃತಜ್ಞತೆ.
ಮಕರ: ಕುಟುಂಬದ ಕ್ಷೇಮಕ್ಕಾಗಿ ಕೈಗೊಂಡಿ ರುವ ಯೋಜನೆಯಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಗೌರವ. ಮಕ್ಕಳ ಕ್ಷೇಮಚಿಂತನೆ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನೂತನ ನಿವೇಶನ ಖರೀದಿ ಮಾತುಕತೆ ಸಫಲ.
ಕುಂಭ: ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಕುಟುಂಬದ ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ಕಾರ್ಯವ್ಯಾಪ್ತಿ ವಿಸ್ತರಣೆ. ಗಳಿಕೆಯ ಸದ್ವಿನಿಯೋಗಕ್ಕೆ ಚಿಂತನೆ. ಉದ್ಯೋಗದ ಸ್ಥಾನ ಬದಲಾವಣೆ. ದೂರದಲ್ಲಿರುವ ಬಂಧುಗಳ ಅನಿರೀಕ್ಷಿತ ಭೇಟಿ.
ಮೀನ: ಶುಭಫಲಗಳ ದಿನ. ಉದ್ಯೋಗ ನಿರಾತಂಕ ಮುನ್ನಡೆ. ಸರಕಾರಿ ಕಚೇರಿಗಳಲ್ಲಿ ಕಾರ್ಯ ತುಸು ವಿಳಂಬವಾದರೂ ಅನುಕೂಲಕರವಾಗಿ ಸ್ಪಂದನ. ಕುಟುಂಬದ ಪ್ರಮುಖ ಸದಸ್ಯರೊಬ್ಬರಿಗೆ ವೈಯಕ್ಕಿಕ ಉನ್ನತಿ ಸಾಧನೆಗೆ ಮಾರ್ಗದರ್ಶನ.ಅನ್ಯಸಮಾಜದ ವ್ಯಕ್ತಿಯಿಂದ ಅನಿರೀಕ್ಷಿತ ಸಹಾಯ. ಸಮಾಜದ ಧಾರ್ಮಿಕ ಕೇಂದ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ. ವಾಸಸ್ಥಾನ ಅಭಿವೃದ್ಧಿಗೆ ಕಾಲ ಸನ್ನಿಹಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.