ರಾಶಿ ಭವಿಷ್ಯ: ಈ ರಾಶಿಯವರು ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸಬೇಕಾಗಬಹುದು!
Team Udayavani, Dec 5, 2020, 8:02 AM IST
05-12-2020
ಮೇಷ: ಸಾಂಸಾರಿಕವಾಗಿ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಚಟುವಟಿಕೆಯಿಂದ ಸಂಭ್ರಮಿಸುವಂತಾದೀತು. ದಿನಾಂತ್ಯ ಕಿರು ಸಂಚಾರ ಯೋಗ.
ವೃಷಭ: ಕಷ್ಟಗಳನ್ನು ಎದುರಿಸುವ ಮಂದಿಗೆ ಯಶಸ್ಸಿನ ಕಾಲವಿದು. ಆದರೂ ಹೊಂದಾಣಿಕೆಯ ಅಗತ್ಯವಿದೆ. ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗೃತರಾಗಬೇಕು. ಕಿರು ಸಂಚಾರ ಬಂದೀತು.
ಮಿಥುನ: ಸಾಹಿತಿ, ಕಲಾವಿದರಿಗೆ ಸೂಕ್ತ ಸ್ಥಾನಮಾನ, ಗೌರವಧನಗಳು ಪ್ರಾಪ್ತಿಯಾದಾವು. ಉದ್ಯಮರಂಗದಲ್ಲಿ ಅನೇಕ ಲಾಭದಾಯಕ ಕೆಲಸಕಾರ್ಯಗಳಿಗೆ ಚಾಲನೆ ದೊರಕಲಿದೆ. ಸಹನೆ, ತಾಳ್ಮೆಯನ್ನು ಅಳವಡಿಸಿಕೊಳ್ಳುವುದು.
ಕರ್ಕ: ಗುರು ಪೂರ್ತಿ ಬಲದಾಯಕ ಬಂದ ಅವಕಾಶಗಳನ್ನು ಸದುಪಯೋಗಿ ಸದಿದ್ದರೆ ತಪ್ಪು ನಿಮ್ಮದಾಗಲಿದೆ. ದೈವೀಕ ಕೆಲಸಕಾರ್ಯಗಳು ನಿಮಗೆ ಅನುಗ್ರಹ ಕಾರಕವಾಗುತ್ತದೆ. ಧರ್ಮಪತ್ನಿಯ ಆರೋಗ್ಯದ ಜಾಗ್ರತೆ ಮಾಡಿರಿ.
ಸಿಂಹ: ಅನೇಕ ರೀತಿಯಲ್ಲಿ ಕಿರಿಕಿರಿಗಳು ತೋರಿಬಂದರೂ ನಿಮ್ಮ ತಾಳ್ಮೆ ಸಮಾಧಾನಗಳು ನಿಮಗೆ ಪೂರಕವಾಗುತ್ತದೆ. ಆರ್ಥಿಕವಾಗಿ ಸಮತೋಲನವನ್ನು ಕಾಯ್ದುಕೊಳ್ಳುವ ಪರಿಸ್ಥಿತಿಯು ನಿಮ್ಮದಾದೀತು. ವಿದ್ಯಾರ್ಥಿಗಳಿಗೆ ಅದೃಷ್ಟವಿದೆ.
ಕನ್ಯಾ: ವೃತ್ತಿಯಲ್ಲಿ ಆಗಾಗ ತೋರಿಬರುವ ಅಡೆತಡೆಗಳನ್ನು ಸರಿದಾರಿಗೆ ತರಬೇಕಾದೀತು. ವ್ಯಾಪಾರ, ವ್ಯವಹಾರಗಳ ಯಾವುದೇ ಒಪ್ಪಂದ, ಲೆಕ್ಕಪತ್ರಗಳ ಹೆಚ್ಚಿನ ಜಾಗ್ರತೆ ಮಾಡಿರಿ. ತಪ್ಪುಗಳು ಘಟಿಸದಂತೆ ಇರುವುದು.
ತುಲಾ: ಆರ್ಥಿಕ ಲಾಭವನ್ನು ಮಾನಸಿಕ ಸಮಾಧಾನ ವನ್ನು ಭಂಗ ಮಾಡಲಿದ್ದಾನೆ. ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಬಂದೀತು.
ವೃಶ್ಚಿಕ: ಹೆಚ್ಚಿನ ಗ್ರಹಗಳ ಪತ್ರಿಕೂಲತೆ ಆಗಾಗ ತೋರಿ ಬಂದು ಮಾನಸಿಕ ಕಿರಿಕಿರಿ, ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಅನಿರೀಕ್ಷಿತ ರೂಪದಲ್ಲಿ ಕಂಡುಬಂದೀತು. ಅಧಿಕ ರೂಪದ ಖರ್ಚುವೆಚ್ಚಗಳಿಂದ ನಿಮಗೆ ಆತಂಕ ಬಂದೀತು.
ಧನು: ಸಾಂಸಾರಿಕ ಜೀವನವನ್ನು ಆದಷ್ಟು ತಾಳ್ಮೆ- ಸಮಾಧಾನಗಳಿಂದ ನಡೆಸಿಕೊಂಡು ಹೋಗಬೇಕಾದೀತು. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ಸಾಧ್ಯವಿದ್ದರೂ ಅಧಿಕ ರೂಪದಲ್ಲಿ ಧನವ್ಯಯ ಕಂಡೀತು. ಶುಭವಿದೆ.
ಮಕರ: ಮಿಶ್ರಫಲಗಳಿಂದ ಶುಭ-ಅಶುಭ ಫಲಗಳನ್ನು ಹೊಂದಲಿದ್ದೀರಿ. ಕಾರ್ಯ ಕ್ಷೇತ್ರದ ಜಂಜಾಟದಿಂದ ದೂರವಿದ್ದಷ್ಟೂ ಉತ್ತಮ. ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸುವಿರಿ. ಬೇಸರಿಸದಿರಿ.
ಕುಂಭ: ಚಿಕ್ಕಪುಟ್ಟ ಸಮಸ್ಯೆಗಳು ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ, ಉದ್ವೇಗ, ಕೋಪ-ತಾಪಗಳು ಹೆಚ್ಚಿಸಲಿವೆ. ಸಾಂಸಾರಿಕವಾಗಿ ಕಿರಿಕಿರಿಗಳು ಒಮ್ಮೊಮ್ಮೆ ಎಲ್ಲಾ ಬಿಟ್ಟು ಓಡಿ ಹೋಗೋಣ ಎಂಬಷ್ಟು ರಗಳೆಗಳನ್ನು ಸೃಷ್ಟಿಸಲಿದೆ.
ಮೀನ: ಗೃಹದಲ್ಲಿ ಸಾಂಸಾರಿಕವಾಗಿ ಹಾಗೂ ಕೌಟುಂಬಿಕವಾಗಿ ಶಾಂತಿ, ಸಮಾಧಾನ, ಸೌಹಾರ್ದಗಳೆಲ್ಲಾ ಸಾಧ್ಯವಿದೆ. ವಿದ್ಯಾರ್ಥಿವರ್ಗದವರಿಗೆ ಉದಾಸೀನತೆ ತೋರಿಬಂದರೂ ಮುನ್ನಡೆಗೆ ಅಭ್ಯಾಸಬಲ, ಪ್ರಯತ್ನ ಹಾಗೂ ಆತ್ಮವಿಶ್ವಾಸದ ಅಗತ್ಯವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.