Horoscope: ಈ ರಾಶಿಯವರ ವ್ಯವಹಾರಕ್ಕೆ ಅನಿರೀಕ್ಷಿತವಾಗಿ ಸಹಾಯ ಒದಗಿಬರಲಿದೆ
Team Udayavani, May 27, 2024, 7:00 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಅಹಿತದ ಅನುಭವ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹಣದ ಬೆಳೆಗಳಿಗೆ ಯೋಗ್ಯ ಬೆಲೆ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ವ್ಯವಹಾರದ ಸಂಬಂಧ ಸಮೀಪದ ಊರಿಗೆ ಪ್ರಯಾಣ.
ವೃಷಭ: ವ್ಯವಹಾರಕ್ಕೆ ಅನಿರೀಕ್ಷಿತವಾಗಿ ಒದಗಿಬಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಖಾತೆಗಳ ಬದಲಾವಣೆ.ಕೆ ಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಅಸಹಾಯಕ ವೃದ್ಧರಿಗೆ ನೆರವು.
ಮಿಥುನ: ವೃದ್ಧಿಯಾದ ಆತ್ಮವಿಶ್ವಾಸ. ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ. ವಾಹನ ದುರಸ್ತಿಗೆ ಹಣ ಖರ್ಚು. ವಸ್ತ್ರ, ಉಡುಪು ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ. ಮಕ್ಕಳಿಗೆ ಸಂತೋಷ.
ಕರ್ಕಾಟಕ: ಉದ್ಯೋಗದಲ್ಲಿ ಸ್ಥಿರವಾಗುವ ಸಾಧ್ಯತೆ. ದೂರದಲ್ಲಿರುವ ಆಪ್ತರಿಂದ ಸಕಾಲಿಕ ಸಹಾಯ. ವ್ಯವಹಾರ ಸಂಬಂಧ ಸಂವಾದ ಫಲಪ್ರದ. ವಿದ್ಯಾರ್ಥಿಗಳಿಗೆ ರಜಾದಿನಗಳ ಸದುಪಯೋಗಕ್ಕೆ ಮಾರ್ಗದರ್ಶನ.
ಸಿಂಹ: ಸಮಯೋಚಿತ ಪ್ರಯತ್ನಗಳಿಂದ ಯಶಸ್ಸು. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ಹೃದಯಾಂತರಾಳದ ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಕಟ್ಟಡ ನಿರ್ಮಾಣಕರಿಗೆ ಕೆಲಸ ಮುಗಿಸುವ ಭರವಸೆ.
ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.ಹೊಲಿಗೆ, ಮರದ ಕೆಲಸ ಬಲ್ಲವರಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ. ಗೃಹಿಣಿಯರ ಸ್ಯೋದ್ಯೋಗ ಯೋಜನೆ ಪ್ರಗತಿ.
ತುಲಾ: ಉದ್ಯೋಗದಲ್ಲಿ ಯಥಾಸ್ಥಿತಿ.ಉತ್ಪನ್ನಗಳ ಗುಣಮಟ್ಟ ಸುಧಾರಣೆ ಮಕ್ಕಳ ವಿದ್ಯಾರ್ಜನೆ ಆಸಕ್ತಿ ವೃದ್ಧಿಯತ್ತ ಗಮನ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ. ವ್ಯವಹಾರದ ಸಂಬಂಧ ತುರ್ತು ಪ್ರಯಾಣ ಸಂಭವ.
ವೃಶ್ಚಿಕ: ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಗಳಿಸಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ. ನ್ಯಾಯಾಲಯ ಸಂಬಂಧಿ ವ್ಯವಹಾರಗಳಲ್ಲಿ ಜಯ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ ಸುಧಾರಣೆ.
ಧನು: ಅಕಸ್ಮಾತ್ ಸಹಾಯದಿಂದ ಸಮಸ್ಯೆ ಪರಿಹಾರ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿಗೆ ಪ್ರಯತ್ನ.ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ.
ಮಕರ: ಮಾತಿನಲ್ಲಿ ಸಂಯಮ ಇರಲಿ. ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ.ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ ಯಶಸ್ಸು.
ಕುಂಭ: ಸಹಾಯ ಮಾಡಿದ್ದರಿಂದ ಸಾರ್ಥಕತೆಯ ಭಾವ. ಕಿರಿಯರಿಗೆ ಮಾರ್ಗದರ್ಶನ, ಹಿರಿಯರಿಗೆ ಸಂದರ್ಭೋಚಿತ ಸಲಹೆ. ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ.
ಮೀನ: ಉದ್ಯೋಗದಲ್ಲಿ ಸಾಧನೆ ತೃಪ್ತಿ ದೊರೆಯಲ್ಲ, ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಬಾಕಿ ಕೆಲಸಗಳನ್ನು ಮುಗಿಸುವ ಪ್ರಯತ್ನ. ದಂಪತಿಗಳ ನಡುವೆ ಅನುರಾಗ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.