Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ
Team Udayavani, Jan 13, 2025, 7:37 AM IST
ಮೇಷ: ಹೊಸ ಸಪ್ತಾಹ ಸ್ವಲ್ಪ ಮಂದಗತಿಯಲ್ಲಿ ಆರಂಭ. ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ. ಸ್ಥಗಿತವಾಗಿದ್ದ ಉತ್ಪಾದನಾ ಚಟುವಟಿಕೆ ಗಳಿಗೆ ಚಾಲನೆ. ಬಂಧುವರ್ಗದಲ್ಲಿ ವಿವಾಹದ ಸಿದ್ಧತೆ. ಮಕ್ಕಳ ಅಧ್ಯಯನಾಸಕ್ತಿ ಪೋಷಣೆಗೆ ಸಹಾಯ.
ವೃಷಭ: ಸಂಪಾದನೆಯ ಅನ್ಯಮಾರ್ಗಗಳ ಅನ್ವೇಷಣೆ. ಉದ್ಯೋಗ ಸ್ಥಾನದಲ್ಲಿ ಸಹಕಾರ ವೃದ್ಧಿ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ.
ಮಿಥುನ: ಪ್ರತಿಭಾವಂತರಿಗೆ ಹೊಸ ಅವಕಾಶಗಳು ಮತ್ತು ಹೊಣೆಗಾರಿಕೆಗಳು. ಉದ್ಯಮಿಗಳ ಪಾಲಿಗೆ ಸವಾಲುಗಳ ದಿನ. ಕೃಷಿ ಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಧ್ಯಾನ, ಸ್ವಾಧ್ಯಾಯದಲ್ಲಿ ಆಸಕ್ತಿ.
ಕರ್ಕಾಟಕ: ಮನಸ್ಸಿನ ನೈರ್ಮಲ್ಯಕ್ಕಾಗಿ ಧ್ಯಾನ, ಜಪಗಳಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಆಮಿಷಗಳ ಬಗೆಗೆ ಎಚ್ಚರ. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮಕ್ಕೆ ಶುಭಕಾಲ ಸನ್ನಿಹಿತ.
ಸಿಂಹ: ಸಪ್ತಾಹ ಆರಂಭವಾಗುತ್ತಿದ್ದಂತೆ ಕೆಲಸದ ಒತ್ತಡ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಕೈತುಂಬಾ ಕೆಲಸ.
ಕನ್ಯಾ: ಹೊಸ ಅನುಭವಗಳಿಂದ ಜೀವನಾಸಕ್ತಿ ಜಾಗೃತ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ವ್ಯಾಪಾರ ಬೆಳವಣಿಗೆ. ವೃತ್ತಿ ಪರಿಣತಿ ಸುಧಾರಣೆಗೆ ಅನುಭವಸ್ಥರ ಮಾರ್ಗದರ್ಶನ. ಬಂಧುವರ್ಗದಲ್ಲಿ ವಿವಾಹ ಮಾತು ಕತೆ. ಹಿರಿಯರು, ಮಕ್ಕಳಿಗೆ ಸಂಭ್ರಮ.
ತುಲಾ: ನಿರಂತರ ಸಾಧನೆಯಿಂದ ಚಿತ್ತಸ್ಥೈರ್ಯ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ. ಕಸೂತಿ, ಕರ ಕೌಶಲದ ಕೆಲಸಗಾರರಿಗೆ ಬೇಡಿಕೆ. ಮಕ್ಕಳ ಬಹು ಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ.
ವೃಶ್ಚಿಕ: ಸಪ್ತಾಹದ ಆರಂಭದಲ್ಲೇ ನಿಶ್ಚಿಂತೆಯ ಮನಃಸ್ಥಿತಿ. ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ. ಗೃಹೋದ್ಯಮ ಉತ್ಪನ್ನಗಳ ಆಕರ್ಷಣೆ ವೃದ್ಧಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತ ಶ್ರವಣದಲ್ಲಿ ಆಸಕ್ತಿ.
ಧನು: ನಿಮ್ಮ ಕ್ರಿಯಾಶೀಲತೆಗೆ ಸವಾಲಾಗುವಷ್ಟು ಕೆಲಸಗಳ ಹೊರೆ. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಯಥೋಚಿತ ಮಾರ್ಗದರ್ಶನ.
ಮಕರ: ಏಕಕಾಲದಲ್ಲಿ ಸಂಸಾರ, ಉದ್ಯೋಗ ಇವೆರಡರ ನಿರ್ವಹಣೆಯ ಸವಾಲು. ಅಧ್ಯಾಪಕ ವರ್ಗಕ್ಕೆ ಕೆಲಸದ ಒತ್ತಡ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಬಂಧುಗಳೊಡನೆ ದೇವಾಲಯ ಭೇಟಿ.
ಕುಂಭ: ಕಾರ್ಯರಂಗದ ಕರೆಗಳಿಗೆ ಸ್ಪಂದನ. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ಸೋದರ ಸಂಬಂಧಿಯ ಮನೆಯಲ್ಲಿ ದೇವತಾಕಾರ್ಯ.
ಮೀನ: ವಾರದ ಮೊದಲ ದಿನ ಕೆಲಸಗಳ ಒತ್ತಡ. ಹೊಸ ಜನಸೇವಾ ಕಾರ್ಯಗಳಿಗೆ ಪೀಠಿಕೆ. ನಿರ್ಮಾಣ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ಕಷ್ಟದಲ್ಲಿರುವ ಬಂಧುವಿಗೆ ಸಹಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
MUST WATCH
ಹೊಸ ಸೇರ್ಪಡೆ
Bengaluru: ಟ್ರಕ್ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು
Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು
Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ
Bengaluru: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.