ಗ್ರಹಬಲ: ಈ ರಾಶಿಯವರಿಗಿಂದು ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ
Team Udayavani, Jan 11, 2021, 7:55 AM IST
11-01-2021
ಮೇಷ: ಕಫ ದೋಷದಿಂದ ಯಾ ಉದರ ವ್ಯಾಧಿ ಯಾ ಅಜೀರ್ಣದ ಉಪದ್ರವದಿಂದ ನಿಮಗೆ ಆರೋಗ್ಯವು ಸರಿ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕೊರತೆ ಕಂಡುಬರಲಿದೆ. ಆದಾಯ ವೃದ್ಧಿ ಇದ್ದರೂ ಖರ್ಚು ಅಷ್ಟೇ ಕಂಡುಬರುವುದು.
ವೃಷಭ: ವಿಲಾಸೀ ಸಾಮಾಗ್ರಿಗಳ ಖರೀದಿ ಕಂಡುಬರುವುದು. ತರಕಾರಿ ವ್ಯಾಪಾರದವರಿಗೆ ಲಾಭ, ನಷ್ಟಗಳು ಸಮವಾಗಿರುವುದು. ಮತ್ಸೋದ್ಯಮದವರಿಗೆ ಪ್ರಗತಿ ಇದ್ದರೂ ವ್ಯಾಪಾರವು ಏಳುಬೀಳು ಕಂಡುಬರುವುದು.
ಮಿಥುನ: ಸುಖ, ಸಂತೋಷಗಳು ಇದ್ದು ಸಮೃದ್ಧಿ ಕಂಡುಬರುವುದು. ಯಾತ್ರಾಸ್ಥಳಗಳ ಭೇಟಿ ಮಾಡುವಿರಿ. ಕಫ ದೋಷವು ಕಂಡುಬರುವುದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವಿರಿ. ಮುಂಭಡ್ತಿ ಇದೆ.
ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕೆಲವು ಕೆಲಸಗಳು ಸಲೀಸಾಗಿ ನಡೆದುಹೋಗಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಗೆ ಸಹಕಾರ ಲಭಿಸಲಿದೆ. ಹಗಲಿರುಳು ದುಡಿದರೂ ಲಾಭಾಂಶ ಕಡಿಮೆ.
ಸಿಂಹ: ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ಕಂಡುಬರಲಿದೆ. ಕಾರ್ಯಬಾಹುಳ್ಯದಿಂದ ಚಿತ್ತಕ್ಷೋಭೆಯಾದೀತು. ಕೈಕೆಳಗಿನ ಕೆಲಸಗಾರರಿಂದ ಅಸಹಕಾರ ಕಂಡುಬಂದೀತು. ಹಣ್ಣು ಹಂಪಲು, ಸಿಹಿ ತಿಂಡಿ, ಪಾನೀಯದವರಿಗೆ ಲಾಭವಿದೆ.
ಕನ್ಯಾ: ಆಹಾರ ಧಾನ್ಯಗಳಿಂದ ಲಾಭಾಂಶ ಕಂಡುಬರುವುದು. ಕುಂಭಾರ, ಗುಡಿಕೈಗಾರಿಕೆಯವರಿಗೆ ಪ್ರೋತ್ಸಾಹ ದೊರಕಲಿದೆ. ಕಾಳು, ಸಾಂಬಾರು ಪದಾರ್ಥ ವ್ಯಾಪಾರಿಗಳಿಗೆ ಎಣಿಕೆಯಂತೆ ವ್ಯಾಪಾರ ನಡೆಯದು. ಶುಭವಿದೆ.
ತುಲಾ: ನೂತನ ಕಾರ್ಯಾರಂಭವು ವಿಘ್ನ ಭೀತಿಯಿಂದ ನಡೆದೀತು. ಆದರೆ ಧೈರ್ಯ, ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಚಿತ್ರೋದ್ಯಮ, ಸಂಗೀತ, ನರ್ತನ ಮುಂತಾದವುಗಳಿಗೆ ವಿಶೇಷ ಕೀರ್ತಿ, ಪುರಸ್ಕಾರ ಲಭಿಸಲಿದೆ.
ವೃಶ್ಚಿಕ: ಸಾಗರೋದ್ಯಮಿಗಳಿಗೆ ಸರಿಯಾದ ಲಾಭವಿರದು. ಕರಕುಶಲ ಕಲೆ, ಕಟ್ಟಡ ಸಾಮಾಗ್ರಿಗಳ ತಯಾರಿಕೆಗಳಿಗೆ ಹಾಗೂ ಯಂತ್ರ ಸ್ಥಾವರ ಕೆಲಸದವರಿಗೆ ಚೆನ್ನಾಗಿ ಆದಾಯ ಬರುವುದು. ಆರೋಗ್ಯ ಮಾತ್ರ ಹದಗೆಡಲಿದೆ ಜಾಗ್ರತೆ.
ಧನು: ಗಣಿ ಕೆಲಸಗಾರರಿಗೆ ಕಾರ್ಯದ ಒತ್ತಡ ಹೆಚ್ಚಲಿದೆ ಹೊರತು ಲಾಭವಿರದು. ಕಠಿಣ ಪರಿಶ್ರಮ ಕೈಗೊಂಡರೂ ಅಷ್ಟಕಷ್ಟೇ. ನ್ಯಾಯಾಲಯದಲ್ಲಿ ವಾದ ವಿವಾದಗಳು ಮುಗಿದಾವು. ಸಂಚಾರದಲ್ಲಿ ಜಾಗ್ರತೆ ಮಾಡಿರಿ.
ಮಕರ: ಪ್ರಯಾಣದಲ್ಲಿ ಆಯಾಸವು ಕಂಡುಬರಲಿದೆ. ಹಿರಿಯರಿಂದ ಅರ್ಥಿಕ ಲಾಭ ದೊರೆತು ಸಮಾಧಾನವಾಗಲಿದೆ. ಮನದನ್ನೆಯ ಮಾತು ಹಿತ ತರಲಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬಂದು ತಲೆಕೆಟ್ಟೀತು.
ಕುಂಭ: ಮನೆಯಲ್ಲಿ ತಂದೆಯ ಆರೋಗ್ಯ ಸುಧಾರಣೆಗಾಗಿ ಖರ್ಚು ಕಂಡುಬಂದೀತು. ಮಕ್ಕಳ ವಿದ್ಯೆಗಾಗಿ ಖರ್ಚು ತೋರಿಬರಲಿದೆ. ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ. ಪ್ರಯಾಣ ಕಂಡುಬಂದೀತು.
ಮೀನ: ರಕ್ಷಣೆ ಹಾಗೂ ಶಿಕ್ಷಣಾ ವರ್ಗದವರಿಗೆ ಕ್ಲೇಶ ಹೆಚ್ಚಲಿದೆ. ಎಣಿಕೆಯಂತೆ ಕಾರ್ಯಸಾಧನೆ ಇರುವುದಿಲ್ಲ. ಆರೋಗ್ಯವು ಸಾಮಾನ್ಯವಾಗಿರುವುದು. ಕಾರ್ಯಸಿದ್ಧಿ ಇರುವುದು. ಗೃಹದಲ್ಲಿ ಸಂತೋಷದ ಸಮಾರಂಭವಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಸಪ್ತಾಹದ ಕೊನೆಯ ದಿನ ಉತ್ತಮ ಫಲಗಳು, ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ
Daily Horoscope: ಶುಭಫಲಗಳೇ ಅಧಿಕವಾಗಿರುವ ದಿನ, ಉದ್ಯೋಗದಲ್ಲಿ ವೇತನ ಏರಿಕೆಯ ಸಾಧ್ಯತೆ
Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.