ನಿಮ್ಮ ಗ್ರಹ ಬಲ:ಈ ರಾಶಿಯವರಿಂದು ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ
Team Udayavani, Jan 12, 2021, 10:47 AM IST
12-01-2021
ಮೇಷ: ಅತೀ ಮಹತ್ವದ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ಸಾಧನೆ ಮಾಡುವಿರಿ. ಪ್ರಯಾಣ, ಪ್ರವಾಸಾದಿಗಳಿಂದ ಸಂಭ್ರಮ ಪಡುವಿರಿ. ಆಯಕ್ಕಿಂತ ವ್ಯಯ ಅಧಿಕವಿರುವುದು.
ವೃಷಭ: ವರ್ಗಾವಣೆಯ ಕುರುಹು ವೃತ್ತಿಪರರಿಗೆ ಕಾಣಿಸಲಿದೆ. ಶಿಕ್ಷಣ ಕ್ಷೇತ್ರದವರಿಗೆ ತಲೆಚಿಟ್ಟು ಹಿಡಿವ ಹಾಗೆ ಕೆಲಸವಿರುತ್ತದೆ. ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ. ಮುನ್ನಡೆಯಿರಿ.
ಮಿಥುನ: ಮಂಗಳ ಕಾರ್ಯದಲ್ಲಿ ಭಾಗಿಗಳಾಗುವಿರಿ. ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ, ವೃತ್ತಿ ನಿರತರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರಲಿದೆ. ಸರಕಾರಿ ಕಾರ್ಯ ಸಿಗುವ ಯೋಗವಿದೆ. ಎಲ್ಲಾ ಕಾರ್ಯದಲ್ಲಿ ಜಯವಿದೆ.
ಕರ್ಕ: ಸಂತಾನಾಪೇಕ್ಷಿಗಳಿಗೆ ಉತ್ತಮ ಯೋಗವು ಬಂದೀತು. ಗೃಹ ನಿರ್ಮಾಣದಂತಹ ಕೆಲಸ ಆರಂಭಿಸಲಿದ್ದೀರಿ. ನಿವೇಶನ ಖರೀದಿಗೆ ಇದು ಸಕಾಲ. ಧನವ್ಯಯ ಅತಿಯಾಗಿದ್ದರೂ ಇಷ್ಟಾರ್ಥ ಪ್ರಾಪ್ತಿಯಾಗಲಿದೆ. ಶುಭವಿರುವುದು.
ಸಿಂಹ: ವ್ಯವಹಾರದಲ್ಲಿ ಲಾಭವಿದೆ. ಆದರೂ ಧನಹಾನಿಗೆ ಹಲವು ಕಾರಣಗಳಿರುತ್ತವೆ. ಗುರಿಯತ್ತ ಮನಸಿಟ್ಟು ಕಾರ್ಯ ಕೈಗೊಂಡರೆ ಗೆಲುವು ಖಚಿತವಾಗಿರುತ್ತದೆ. ಆಪ್ತರ ಸಲಹೆಗೆ ಮನ ಕೊಡಿರಿ. ದುಃಖ ಹಂಚಿಕೊಳ್ಳಿರಿ.
ಕನ್ಯಾ: ಯೋಜನೆ ಹಾಕಿ ಕೆಲಸ ಸಾಧಿಸಿದ ಮೇಲೆಯೇ ಪ್ರಕಟಗೊಳ್ಳುವ ಮನೋವೃತ್ತಿಯವರಾದ ನೀವಿಂದು ಸ್ವಲ್ಪ ದಾರಿ ಬೇರೆ ಮಾಡಬೇಕಾದೀತು. ಸಂಪಾದನೆಯು ಚೆನ್ನಾಗಿದ್ದು ಲಾಭಾಂಶವೂ ಸಂಗ್ರಹವೂ ವೃದ್ಧಿಯಾಗಲಿದೆ.
ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸೂಕ್ತ ವ್ಯವಸ್ಥೆಯಾಗಿ ಸಿಗಲಿದೆ. ವೃತ್ತಿಕ್ಷೇತ್ರದಲ್ಲಿ ಕಿರುಕುಳ ಕಂಡುಬಂದೀತು. ಪಿತ್ತಾಧಿಕ್ಯದಿಂದ ಆರೋಗ್ಯ ಹಾನಿಯಾಗಲಿದೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ದೊರಕದೆ ಉನ್ನತ ವಿದ್ಯಾಭ್ಯಾಸದಲ್ಲಿ ಕೊರತೆ ಕಾಣಿಸಲಿದೆ. ದಿನಸಿ ವ್ಯಾಪಾರ, ಕೃಷಿ ಉತ್ಪನ್ನದಲ್ಲಿ ಲಾಭಾಂಶ ಕಡಿಮೆಯಾಗುವ ಸಂಭವವಿದೆ. ಚಿಂತೆ ಮಾಡದಿರಿ.
ಧನು: ಹೋಟೇಲ್, ವಸತಿಗೃಹ, ಕಲಾಕ್ಷೇತ್ರಗಳ ಪ್ರಗತಿ ನಿಧಾನವಾಗಲಿದೆ. ದಿನವಹಿ ಸಂಭಾವನೆ ಪಡೆವ ನೌಕರರಿಗೆ ವೃತ್ತಿ ಸ್ಥಿರತೆ ಕಂಡುಬರಲಿದೆ. ವಂಚನಾ ಜಾಲಕ್ಕೆ ಸಿಲುಕದಿರಿ. ಧನ ವಿನಿಯೋಗವಿದೆ.
ಮಕರ: ಪತ್ನಿಯ ಅನಾರೋಗ್ಯ ನಿಮ್ಮ ತಲೆಗೆಡಿಸಲಿದೆ. ಪರಸ್ಪರ ಅನುಭವದ ಕೊರತೆಯಿಂದ ಅರ್ಧಕ್ಕೆ ನಿಂತೀತು. ಅಪಾದನೆಗಳು ಕಂಡುಬಂದೀತು. ಆದಾಯವು ಉತ್ತಮವಿದ್ದರೂ ತಾಪತ್ರಯ ತಪ್ಪದು.
ಕುಂಭ :ಬಂಧು ಭಾಂದವರ ಪ್ರೋತ್ಸಾಹ ದೊರಕಲಿದೆ. ಗಂಡಹೆಂಡತಿಯಲ್ಲಿ ವಿರಸವಿದ್ದರೂ ಸುಖಾಂತ್ಯ ಸುಗಮ ವೆನಿಸೀತು. ದೇವತಾರಾಧನೆಯಿಂದ ಶುಭಫಲ ಹೆಚ್ಚಿಸಿಕೊಳ್ಳಿರಿ. ಜನಾಕ್ರೋಶ ಭೀತಿಯ ವಾತಾವರಣವಿರುತ್ತದೆ.
ಮೀನ: ಅಲೆದಾಟಗಳು ಅಧಿಕವಾಗಿದ್ದು ಆರೋಗ್ಯವು ಹದಗೆಡಲಿದೆ. ಆಂತರಿಕ ಕಲಹ, ಗೃಹಕೃತ್ಯ, ಮಂಗಲ ಕಾರ್ಯ, ಪ್ರವಾಸ, ಆಭರಣ ಖರೀದಿ ಹೀಗೆ ಹಲವು ತರದ ಖರ್ಚುವೆಚ್ಚಗಳು. ತಲೆಬಿಸಿ ಮಾಡಲಿದೆ. ಶುಭವಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.