ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಹಳೆ ಶತ್ರುಗಳು ಪುನಃ ಕಾಡುವರು!
Team Udayavani, Jan 20, 2021, 7:58 AM IST
20-01-2021
ಮೇಷ: ಸಂಬಂಧಗಳ ಏಳುಬೀಳುಗಳಲ್ಲೂ ಸಂಗಾತಿಯ ಕೈವಾಡವಿರುತ್ತದೆ. ಪತ್ನಿಗೆ ಸ್ವಲ್ಪ ಸಮಾಧಾನದಲ್ಲಿ ಬುದ್ದಿವಾದ ಹೇಳಿದರೆ ಉತ್ತಮ. ಅರಿತುಕೊಂಡಾರು.
ವೃಷಭ: ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಸಿಟ್ಟಿಗೆದ್ದು ನಿಮ್ಮನ್ನು ನಿರ್ಲಕ್ಷಿಸಬಹುದು. ಕ್ಷಣಕಾಲಕ್ಕೆ ಮಾತ್ರ ನಿಮ್ಮ ಸಹೋದ್ಯೋಗಿಗಳು ನಿಮಗೆ ಉತ್ತಮ ಸಹಕಾರ ನೀಡುವರು. ಅಕ್ಕಪಕ್ಕದವರ ಕಿರಿಕಿರಿ ಬೇಸರ ತಂದೀತು.
ಮಿಥುನ: ಹಳೆ ಶತ್ರುಗಳು ನಿಮ್ಮನ್ನು ಪುನಃಹ ಕಾಡುವರು. ನೀವು ಅವರಿಂದ ದೂರವಿರಲು ಪ್ರಯತ್ನಿಸಿದಷ್ಟು ಅವರು ನಿಮ್ಮನ್ನು ಸೆಳೆಯಲಿದ್ದಾರೆ. ಹಳಸಿದ ಸಂಬಂಧವನ್ನು ಪುನಃಹ ಜೋಡಣೆ ಮಾಡಲು ಪ್ರಯತ್ನಿಸುವುದು.
ಕರ್ಕ: ನಿಮ್ಮ ಮನಸ್ಸಿನ ಭಾವನೆಯನ್ನು ಅಂದಾಜಿಸಿ ನಿರ್ಧಾರವನ್ನು ತಿಳಿಸಿದರೆ ಇತರರಿಗೆ ಸಮಾಧಾನವಾದೀತು. ತಟ್ಟನೆ ಉತ್ತರ ಕೊಡುವ ನಿಮ್ಮ ಸ್ವಭಾವವನ್ನು ಬದಲಿಸಿರಿ. ವೃತ್ತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಇಲ್ಲ.
ಸಿಂಹ: ಸುಮ್ಮನೆ ಕುಳಿತು ಕಾಲಕಳೆಯೋಕೆ ನಿಮ್ಮಿಂದ ಆಗದು. ಇತರ ಚಟುವಟಿಕೆಗಳತ್ತ ನಿಮ್ಮ ಮನಸ್ಸು ಹೊರಳಬಹುದು. ಹಳೇ ಮಿತ್ರರಿಂದ ಶುಭ ಸಮಾಚಾರ ಕೇಳಲಿದ್ದೀರಿ. ನಿಮ್ಮ ನಿಷ್ಠೆ ಹಾಗೂ ನಿಯತ್ತು ಕಾಪಾಡಲಿದೆ.
ಕನ್ಯಾ: ವಿನಾಕಾರಣ ದೂರ ಇರುವುದು, ಯಾವುದೋ ಊರಿಗೆ ಹೊರಟು ಹೋಗುವುದು, ಮೊದಲಾದ ಅಭ್ಯಾಸಗಳು ನಿಮ್ಮ ಮಧ್ಯೆ ಬಿರುಕಿಗೆ ಕಾರಣವಾದೀತು. ಸಹನೆಯಿಂದ ಇದ್ದರೆ ಜೀವನವು ಸ್ವರ್ಗವಾದೀತು. ಇಲ್ಲದಿದ್ದಲ್ಲಿ ನರಕ.
ತುಲಾ: ನಿಮ್ಮ ಕನಸಿನ ರಾಣಿಯನ್ನು ಸದ್ಯದಲ್ಲೇ ಭೇಟಿಯಾಗಲಿದ್ದೀರಿ. ವಿವಾಹಿತರು ಸಾಂಸಾರಿಕ ಸಂಘರ್ಷಗಳಲ್ಲಿ ವಿಜೇತರಾಗುತ್ತಾರೆ. ಅತೀ ಅವಸರದ ತೀರ್ಮಾನಗಳಿಂದ ದೂರವಿರುವುದು ನಿಮಗೆ ಉತ್ತಮ. ಶುಭವಿರುತ್ತದೆ.
ವೃಶ್ಚಿಕ: ನೀವು ಹಿಂದೆ ಮಾಡಿದ ತಪ್ಪು ಆಯ್ಕೆಗಳು ಈಗಲೂ ನಿಮ್ಮನ್ನು ಕಾಡುತ್ತಿರುತ್ತದೆ. ಮನೆಮಂದಿಯೊಡನೆ ಗಂಭೀರವಾಗಿ ಚಿಂತಿಸಿ ಮುನ್ನಡೆಯುವುದು. ನಿಮ್ಮ ಸಂಬಂಧಿಕರ ಸಮಸ್ಯೆಗಳನ್ನು ಸರಿಮಾಡುವುದೇ ನಿಮ್ಮ ಕೆಲಸ.
ಧನು: ನೀವೀಗ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವಿರಿ. ಆದರೆ ಅದರಿಂದ ನೀವು ಸಂಕಷ್ಟ ಗೊಳಗಾಗುವಿರಿ. ಗೆಳೆಯರ ಪ್ರೀತಿಯ ಮಾತು ಬದ್ಧತೆ ಮತ್ತು ಶಿಫಾರಸುಗಳಲ್ಲೂ ವಂಚನೆಯ ನೆರಳು ಕಾಣಬಹುದು. ಶುಭವಿದೆ.
ಮಕರ: ನಿಮ್ಮ ಸಂಸಾರದ ಏಳುಬೀಳುಗಳನ್ನು ಸರಿಪಡಿಸುವುದರಲ್ಲೇ ನಿಮ್ಮ ಸಮಯ ವ್ಯರ್ಥವಾಗಲಿದೆ. ಮೂರನೆಯವರನ್ನು ನಿಮ್ಮೊಂದಿಗೆ ಬೆರೆಯಲು ಬಿಡಬೇಡಿರಿ. ಮೌನವೇ ಎಲ್ಲಕ್ಕೂ ಮದ್ದು. ಸಹನೆ ಕಳೆದುಕೊಳ್ಳದಿರಿ.
ಕುಂಭ: ನಿಮಗೆ ಬೇಕಾಗಿರುವುದು ಒಂದು ಅರ್ಥಪೂರ್ಣ ಸಂಸಾರ. ಮನೆಯವರ ಹಾಗೂ ಸಂಬಂಧಿಕರ ಒತ್ತಾಯಕ್ಕೆ ಮಣಿದು ಯಾರನ್ನೂ ಒಪ್ಪಿಕೊಳ್ಳದಿರಿ. ಇಂಥಾ ವಿಚಾರಗಳಲ್ಲಿ ಕಾದು ನೋಡುವುದು ಜಾಣತನ. ವ್ಯವಹರಿಸುವುದು ಉತ್ತಮ.
ಮೀನ: ಭಾವುಕ ಸನ್ನಿವೇಶವು ಎದುರಾಗಲಿದೆ. ದೂರದರ್ಶಿತ್ವ ಕಳಕೊಳ್ಳದಿರಿ. ಸಹನೆಯ ಅಗತ್ಯವಿದೆ. ಮಾತುಮಾತಿಗೆ ಸಿಡುಕಿ ಭಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಕಾಯ್ದುಕೊಳ್ಳುವದು. ಆತ್ಮವಿಶ್ವಾಸ ಅಗತ್ಯವಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.