![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 24, 2021, 7:52 AM IST
24-01-2021
ಮೇಷ: ಬಂಧುವರ್ಗದವರಿಂದ ಸಹಾಯ ಯಾಚನೆ ಕಂಡುಬರಲಿದೆ. ನಿಮಗೆ ಪ್ರಾಣ ಸಂಕಟ. ಇತ್ತಲಾಗಿ ಕೂಡಲೂ ಅಲ್ಲ ಬಿಡಲೂ ಅಲ್ಲ. ಅ ಕಾರಣವಾಗಿ ದ್ವೇಷದಿಂದ ಮಾನಸಿಕ ವ್ಯಥೆಯು ತಲೆದೋರೀತು.
ವೃಷಭ: ವೃತ್ತಿ ನಿರತರಿಗೆ ಸಂಪತ್ತು ಅಭಿವೃದ್ಧಿಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಕಂಡುಬಂದರೂ ಸ್ಥಾನಮಾನಕ್ಕೆ ಕುಂದಿಲ್ಲ. ಉದ್ಯಮ ಕ್ಷೇತ್ರದಲ್ಲಿ ಋಣಭಾರ, ಸ್ಪರ್ಧಾತ್ಮಕ ಮನೋಭಾವ ಕಾಣಲಿದೆ.
ಮಿಥುನ: ಸಣ್ಣಪುಟ್ಟ ಅಡಚಣೆಯಿಂದಾಗಿ, ಕೈಗೊಂಡ ಕಾರ್ಯ ವಿಳಂಬವಾದೀತು. ಸಂತತಿ ಭಾಗ್ಯದಿಂದ ಸಂತಸವಾಗಲಿದೆ. ಚಿನ್ನಾಭರಣದ ಖರೀದಿ ನಡೆದೀತು. ಪಿತ್ತೋಷ್ಣ ಬಾಧೆಯು ಕಂಡು ಬರುವುದು.
ಕರ್ಕ: ಸಾತ್ವಿಕತೆ ಹಾಗೂ ನಿಮ್ಮ ಔದಾರ್ಯ ಗುಣಕ್ಕೆ ಪ್ರಶಂಸೆ ದೊರಕಲಿದೆ. ಆದರೂ ಖರ್ಚುವೆಚ್ಚವು ಅಧಿಕ ಕಂಡುಬರಲಿದೆ. ವಾಹನ ಖರೀದಿಗಿದು ಉತ್ತಮ ಕಾಲವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ.
ಸಿಂಹ: ಹಿರಿಯರೊಂದಿಗೆ ಗಹನವಾದ ಚರ್ಚೆ ನಡೆದೀತು. ನೀವು ನಿಮ್ಮನ್ನು ಹಲವು ಕಾರ್ಯಗಳಿಗೆ ತೊಡಗಿಸಿಕೊಂಡಿರುವುದರಿಂದ ವ್ಯವಧಾನವೇ ಇರದು. ಪ್ರತಿಭಾ ಪುರಸ್ಕಾರವು ದೊರಕಲಿದೆ. ಶುಭವಿದೆ.
ಕನ್ಯಾ: ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಸ್ಥಾನಮಾನಕ್ಕೆ ಚ್ಯುತಿ ಬಾರದು. ಸಹೋದ್ಯೋಗಿಗಳೊಂದಿಗೆ ಸಮಾಧಾನಚಿತ್ತದಿಂದಿರಿ. ವಿಶೇಷ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಸಂತಸವಿದೆ.
ತುಲಾ: ಬ್ಯಾಂಕ್ ವ್ಯವಹಾರದಲ್ಲಿ ಅಭಿಮಾನ ಭಂಗವಾಗಲಿದೆ. ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬಂದೀತು. ಇಚ್ಛಿತ ಸ್ಥಾನ ಪ್ರಾಪ್ತಿಯಿಂದ ವಂಚಿತರಾಗುವ ಭಯ. ಪ್ರಯಾಣ ಕಡಿಮೆ ಮಾಡಿರಿ. ಉದರ ಸಂಬಂಧಿ ತೊಂದರೆ ಬಂದೀತು.
ವೃಶ್ಚಿಕ: ವ್ಯಾಪಾರ, ವ್ಯವಹಾರದಲ್ಲಿ ಸಮೃದ್ಧಿಯ ಕಾಲವಿದು. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮೊರೆ ಹೋಗಿರಿ. ನವ ವಿವಾಹಿತರಿಗೆ ಪುತ್ರಪ್ರಾಪ್ತಿ ಕಾಲವಿದು. ತಂದೆ ಮಕ್ಕಳೊಳಗೆ ಪ್ರೀತಿ ವಿಶ್ವಾಸ ಹೆಚ್ಚಲಿದೆ.
ಧನು: ಕೌಟುಂಬಿಕವಾಗಿ ಎಲ್ಲರ ವಿಶ್ವಾಸ ಗಳಿಸುವಿರಿ. ನೆಮ್ಮದಿ ಕಡಿಮೆಯಾದೀತು. ತಾಳ್ಮೆ ವಹಿಸಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ವ್ಯವಹರಿಸಿರಿ. ಧನಾತ್ಮಕ ಚಿಂತನೆಗಳು ಕೈಗೂಡಲಿದೆ. ಸಹನೆ ಬೇಕು.
ಮಕರ: ಋಣಭಾರದಿಂದ ಮುಗ್ಗರಿಸದಿರಿ. ಗೃಹ, ನಿವೇಶನ ಖರೀದಿಗಾಗಿ ಖರ್ಚು ಬರಲಿದೆ. ಕುಟುಂಬದಲ್ಲಿ ಕಲಹ, ವ್ಯರ್ಥ ಕಾಲಹರಣ ಮಾಡದಿರಿ. ಕಮಿಶನ್ ವೃತ್ತಿಯವರಿಗೆ ಆದಾಯದ ವರ್ಧನೆಯಿದೆ.
ಕುಂಭ: ಕಟ್ಟಡ ರಚನೆ ಹಾಗೂ ಅದರ ಸಾಮಾಗ್ರಿಗಳ ವ್ಯವಹಾರದವರಿಗೆ ಆದಾಯದ ವೃದ್ಧಿ ಕಾಣಿಸಲಿದೆ. ಸಂಶೋಧನಾ ಪ್ರವೃತ್ತಿಗಳಲ್ಲಿ ಜನಪ್ರಿಯತೆ ಮನ್ನಣೆ ಗಳಿಸಲಿದ್ದೀರಿ. ಗೃಹದಲ್ಲಿ ಸಂತೋಷಕೂಟವಿದ್ದೀತು.
ಮೀನ: ವೇತನ ಪರಿಷ್ಕರಣೆಗೆ ಕಾರ್ಯವಿಳಂಬ ವಾಗಲಿದೆ. ವ್ಯವಹಾರ ಯಾ ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇರುವುದು. ಆದರೂ ಹಣ ಕೈಗೆ ಬರದು. ಆಸ್ತಿ ವಿಚಾರದಲ್ಲಿ ಸಹೋದರರೊಳಗೆ ಕಲಹ ಕಂಡೀತು.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.