ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶತ್ರುಪೀಡೆಯಿಂದಾಗಿ ಪದೇ ಪದೇ ಕಾರ್ಯ ಹಾನಿಯಾದೀತು!
Team Udayavani, Jan 25, 2021, 7:54 AM IST
25-01-2021
ಮೇಷ: ಗೃಹದಲ್ಲಿ ಅಶಾಂತಿ ಕಂಡು ಬಂದರೂ ಎಲ್ಲದಕ್ಕೂ ಮೌನವೇ ಲೇಸು ಎಂಬ ಸೂತ್ರ ಪಾಲಿಸಿರಿ. ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿ ಇದ್ದರೂ ಸಾಲದು ಎಂಬ ಅತೃಪ್ತ ಮನೋಭಾವವು ಕಂಡುಬರುವುದು.
ವೃಷಭ: ಹೊಸ ಹೊಸ ಮಾರ್ಗಗಳು ಆದಾಯಕ್ಕೆ ಕಂಡುಬಂದಾವು. ಆರೋಗ್ಯದಲ್ಲಿ ಏರುಪೇರಿನಿಂದ ಅಷ್ಟೇ ಖರ್ಚುವೆಚ್ಚಗಳು ಕಂಡುಬಂದಾವು. ಅತೀ ಅವಸರದಿಂದ ಅಚಾತುರ್ಯದಿಂದ ದುಷ್ಪರಿಣಾಮಗಳು ಕಂಡುಬಂದಾವು.
ಮಿಥುನ: ಅಧಿಕ ರಕ್ತದೊತ್ತಡದಿಂದ ದೇಹದಲ್ಲಿ ಬಾಧೆ ಕಂಡುಬಂದೀತು. ಆತ್ಮಶಕ್ತಿ ವರ್ಧಿಸಿಕೊಳ್ಳಿರಿ. ಸಂಯಮದಿಂದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ. ಅನೇಕ ವಿಧದ ಕಿರಿಕಿರಿಗಳು ಪತ್ನಿಯಿಂದ ಬರುವುದು.
ಕರ್ಕ: ವಿದ್ಯಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅಲಕ್ಷ್ಯದಿಂದ ಹಿಂದೆ ಬಿದ್ದಿರುವುದು ಕಂಡುಬರುವುದು. ಕಿವಿಚುಚ್ಚುವ ಮಾತಿನಿಂದ ಮೈತ್ರಿಯಲ್ಲಿ ಬಿರುಕು ಕಾಣಿಸಲಿದೆ. ಕಾರ್ಯಕ್ಷೇತ್ರದಲ್ಲಿ ಮುಂಭಡ್ತಿಯ ಯೋಗವಿದೆ.
ಸಿಂಹ: ವ್ಯಾಪಾರಿಗಳಿಗೆ ಹೆಚ್ಚಿನ ಕರ ವಸೂಲಾತಿ ಸಂಭವವಿದೆ. ಕಟ್ಟಡದ ಕಾಮಗಾರಿಯವರಿಗೆ ಇದ್ದುದರಲ್ಲೇ ತೃಪ್ತಿ ಪಡಬೇಕಾದೀತು. ಆರೋಗ್ಯದಲ್ಲಿ ಉಷ್ಣವಾಯು ಪೀಡೆಯು ಸಾಕಷ್ಟು ತೊಂದರೆ ಕೊಡಲಿದೆ. ಶುಭವಿರುವುದು.
ಕನ್ಯಾ: ವ್ಯಾಪಾರಿ ವರ್ಗಕ್ಕೆ ಉತ್ತಮ ಅಭಿವೃದ್ಧಿ ಇದೆ. ನೂತನ ಬಂಧು ಹಾಗೂ ಮಿತ್ರರ ಆಗಮನದಿಂದ ಸಂತಸ. ಸ್ಥಾನ ಪ್ರಾಪ್ತಿಗಾಗಿ ತಡಕಾಟವಿದ್ದೀತು. ಮಾರ್ಗಾಯಾಸದಿಂದ ಕಾಲಹರಣವಾದೀತು. ಮಕ್ಕಳ ವಿದ್ಯೆಗಾಗಿ ಖರ್ಚು.
ತುಲಾ: ಸಂಪಾದನೆಯನ್ನು ವರ್ಧಿಸಿಕೊಂಡರೆ ವೆಚ್ಚ ಅದನ್ನು ಮೀರಿ ಇದ್ದೀತು. ದೈವಬಲದ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿರಿ. ಸುಖಕ್ಕೆ ಎರವಾಗುವ ಯಾವ ಯೋಜನೆಗಳೂ ಕಷ್ಟದಿಂದಲೇ ಗುರಿ ಮುಟ್ಟಲಿದೆ. ಶುಭವಿದೆ.
ವೃಶ್ಚಿಕ: ಶತ್ರುಪೀಡೆಯಿಂದಾಗಿ ಪದೇ ಪದೇ ಕಾರ್ಯಹಾನಿಯಾದೀತು. ಹಾಳು ವ್ಯಸನದ ಗೀಳಿಗೆ ಬೀಳದಿರಿ. ವೈವಾಹಿಕ ಮಾತುಕತೆಗೆ ಪ್ರಾರಂಭ ದೊರಕಲಿದೆ. ವಿದ್ಯಾರ್ಜನೆಯಲ್ಲೂ ಯಶೋಲಾಭ ಕಂಡು ಬರಲಾರದು.
ಧನು: ಸರಕಾರಿ ಕಾರ್ಯದ ಸಿದ್ಧಿಯಾಗಲಿದೆ. ನ್ಯಾಯಾಲಯದ ಕೆಲಸಗಳೂ ಸಫಲವಾಗಲಿದೆ. ಮಕ್ಕಳ ಆರೋಗ್ಯ ಹದಗೆಡಲಿದ್ದು ಚಿಕಿತ್ಸೆಯಲ್ಲಿ ಕಳವಳವಾದೀತು. ಅನಾವಶ್ಯಕ ಪ್ರಯಾಣಗಳು ಕಂಡುಬಂದು ಖರ್ಚಾಗಲಿದೆ.
ಮಕರ:ವ್ಯಾಪಾರಿ ವರ್ಗಕ್ಕೆ ಉತ್ತಮ ಪ್ರಗತಿಯಿದೆ. ಗೃಹ ನಿರ್ಮಾಣದಂತಹ ಕೆಲಸ ಆರಂಭಿಸುವಿರಿ. ನಿವೇಶನ ಖರೀದಿಗಿದು ಸಕಾಲ. ಧನವ್ಯಯ ಅತಿಯಾದರೂ ಇಷ್ಟಾರ್ಥ ಸಿದ್ಧಿಯಾಗಲಿದೆ. ನೆರೆಕರೆಯಲ್ಲಿ ಮನಸ್ತಾಪ ಕಂಡುಬರಲಿದೆ.
ಕುಂಭ: ಸರ್ವತೋಮುಖ ಅಭಿವೃದ್ಧಿಗೆ ಕಠಿಣ ಪರಿಶ್ರಮವು ಬೇಕಾದೀತು. ಮಧ್ಯದಲ್ಲಿ ಶತ್ರುಪೀಡೆಯಿಂದ ಮನಕ್ಲೇಶ ತಂದೀತು. ಆಪ್ತರ ಸಲಹೆಗೆ ಗಮನಕೊಡಿರಿ. ದುಃಖ ಹಂಚಿಕೊಳ್ಳಿರಿ. ಆರೋಗ್ಯದಲ್ಲಿ ಏರುಪೇರು.
ಮೀನ: ಯೋಜನೆಗೆ ಕೈಹಾಕಿ ಕೆಲಸ ಸಾಧಿಸಿದ ಮೇಲೆಯೇ ಪ್ರಕಟಗೊಳ್ಳುವ ಮನೋವೃತ್ತಿಯವರಾದ ನೀವಿಂದು ಸ್ವಲ್ಪ ದಾರಿ ಬೇರೆ ಮಾಡಬೇಕಾದೀತು. ಚೆನ್ನಾದ ಸಂಪಾದನೆ ಇದ್ದರೂ ದುಡ್ಡು ಕೈಗೆ ಬಾರದು. ಗರಿಷ್ಠ ಖರ್ಚು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.