![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 4, 2021, 7:47 AM IST
04-02-2021
ಮೇಷ: ವಿದ್ಯಾರ್ಥಿಗಳಿಗೆ ಮನಸ್ಸಿನ ಎಣಿಕೆಯಂತೆ ಯಶಸ್ಸಿದೆ. ಗುರುವಿನ ಪ್ರತಿಕೂಲತೆಯಿಂದ ವರ್ಗಾವಣೆಯ ಸಾಧ್ಯತೆ ಇರುತ್ತದೆ. ಸ್ಥಾನಭ್ರಂಶ ಯೋಗವಿದೆ. ಕಫ, ವಾತ ದೋಷದಿಂದ ಆರೋಗ್ಯ ಕೆಟ್ಟಿತು.
ವೃಷಭ: ಪಾಲುದಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯಕವಾಗಿರುತ್ತದೆ. ರಾಜಕೀಯದವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ಥಾನಮಾನದ ಲಾಭ ತಂದುಕೊಡಲಿದೆ. ನೂತನ ದಂಪತಿಗಳಿಗೆ ಶುಭ ಸಮಾಚಾರ ಇರುತ್ತದೆ.
ಮಿಥುನ: ಸಾಮಾಜಿಕವಾಗಿ ಸ್ಥಾನವರ್ಧನೆಗ ಅವಕಾಶವನ್ನು ಬಳಸಿಕೊಂಡಲ್ಲಿ ನಿಮ್ಮ ದುಡಿಮೆಯು ಸಾರ್ಥಕವಾಗಲಿದೆ. ಪುಣ್ಯಕ್ಷೇತ್ರಗಳ ಸಂದರ್ಶನದ ಯೋಗ ಬಂದೀತು. ಆಕಸ್ಮಿಕ ಧನಲಾಭದ ಯೋಗವಿದೆ.
ಕರ್ಕ: ಪಾಲುಗಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದು ಉತ್ತಮವಲ್ಲ. ಆಗಾಗ ಧನಹಾನಿ ಇದ್ದರೂ ಸುಖಭಾಗ್ಯದ ವರ್ಧನೆಯಿಂದ ಫಲವೂ, ಹರ್ಷವೂ ಹೆಚ್ಚಾದೀತು. ಸಂಚಾರ ಯೋಗವಿದೆ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನವು, ಗೌರವೂ, ಪುರಸ್ಕಾರವೂ ತೋರಿಬರಲಿದೆ. ಕೆಲಸಕಾರ್ಯಗಳ ಒತ್ತಡದಿಂದ ಮನಸ್ಸಿನ ನೆಮ್ಮದಿ ಕೆಟ್ಟು ಹೋದೀತು. ದೇಹಾಯಾಸವು ತೋರಿಬಂದೀತು. ಧೈರ್ಯದಿಂದಿರಿ.
ಕನ್ಯಾ: ಉಗ್ರ ಕೋಪಿಗಳಾದರೂ ಸಮಾಧಾನಿಗಳಾಗುವರು. ಸಂಕುಚಿತ ಪ್ರವೃತ್ತಿಯವರಾದರೂ ಸಂದರ್ಭ ಬಂದಲ್ಲಿ ಯಾವ ತ್ಯಾಗಕ್ಕೂ ಸಿದ್ಧರು. ನಿಮ್ಮ ಮನಸ್ಸನ್ನು ಸ್ವತ್ಛವಾಗಿಟ್ಟುಕೊಳ್ಳಿರಿ. ಪ್ರಯಾಣ ಕಂಡುಬರಲಿದೆ.
ತುಲಾ: ಬಂದ ಅವಕಾಶವನ್ನು ಸದುಪಯೋಗಿಸಿ ಕೊಂಡಲ್ಲಿ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳ ಬಹುದು. ಅತಿಯಾದ ಆಸೆಗಳನ್ನು ಇಟ್ಟುಕೊಳ್ಳದಿರಿ. ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರಾದೀತು.
ವೃಶ್ಚಿಕ: ಅಧಿಕಾರಿ ಜನರಿಂದ ಕಷ್ಟನಷ್ಟಗಳು, ಸ್ಥಾನಮಾನಗಳಿಗೆ ಹಾನಿಯಾದೀತು. ಹಿತಶತ್ರುಗಳಿಂದ ಭಾದೆ ತೋರಿಬರಲಿದೆ. ಪ್ರಯತ್ನಬಲದಿಂದಲೇ ಮುಂದುವರಿಯ ಬೇಕಾದೀತು. ಉದ್ಯೋಗ ದಲ್ಲಿ ಭಡ್ತಿ ಕಂಡುಬರಲಿದೆ.
ಧನು: ಸುಖದುಃಖ ಸಮಾನ ರೀತಿಯಲ್ಲಿರುತ್ತದೆ.ಆದರೂ ಪ್ರಯತ್ನಬಲದಿಂದ ಮುಂದುವರಿದು ಬಂದರೆಒಳ್ಳೆಯ ಫಲ ಪ್ರಾಪ್ತಿಯಾಗಲಿದೆ. ಪತ್ನಿಗೂ ಒಳ್ಳೆಯ ಕೆಲಸವು ಸಿಗಬಹುದು. ದ್ವಂದ್ವ ನೀತಿ ಬೇಡ.
ಮಕರ: ಗೃಹದಲ್ಲಿ ಸಂಭ್ರಮಕ್ಕಾಗಿ ಖರ್ಚುವೆಚ್ಚಗಳು ತೋರಿಬಂದಾವು. ಸಂತಾನಭಾಗ್ಯದ ಕುರುಹು ಕಂಡುಬರಲಿದೆ. ವೃಥಾ ತಿರುಗಾಟ ಬೇಡ. ಅಧಿಕ ಖರ್ಚು, ಆರೋಗ್ಯ ಹಾನಿಯಾದೀತು. ಎಚ್ಚರಿಕೆ ವಹಿಸುವುದು.
ಕುಂಭ: ದಾಕ್ಷಿಣ್ಯ ಪ್ರವೃತ್ತಿ ಇದ್ದರೂ ಕಠಿಣ ನಿರ್ಧಾರ ನಿಮ್ಮನ್ನು ಮುಂದು ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಕೋಪಗೊಳ್ಳುವ ನೀವು ಅದನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಅತೀ ನಿರೀಕ್ಷೆ ಮಾಡದಿರಿ. ಬೇಸರವಾದೀತು.
ಮೀನ: ಆರ್ಥಿಕವಾಗಿ ಹೆಚ್ಚಿನ ಕೊರತೆ ಇಲ್ಲದಿದ್ದರೂ ಅಧಿಕ ಖರ್ಚು ನಿಮಗೆ ದಿಗ್ಭ್ರಮೆ ಹುಟ್ಟಿಸಲಿದೆ. ಆರೋಗ್ಯ ಸ್ಥಿತಿಯಲ್ಲಿ ಏರುಪೇರುಯಿದೆ. ಮನೆಯ ಕೆಲಸಕಾರ್ಯಗಳಲ್ಲಿ ಅಡಚಣೆ ತೋರಿ ಬರುವುದು.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.