ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ನಿಮ್ಮ ಮಿತ್ರರಿಂದಲೇ ನಿಮಗೆ ಮೋಸ ಕಂಡುಬರಲಿದೆ!
Team Udayavani, Feb 5, 2021, 7:44 AM IST
05-02-2021
ಮೇಷ: ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಕಿರಿಕಿರಿ, ಜಟಾಪಟಿಗಳಾದಾವು. ಉದ್ಯೋಗ, ವ್ಯವಹಾರದಲ್ಲಿ ಭರದಿಂದ ಅಭಿವೃದ್ಧಿ ಕಾಣುವುದು. ಇಷ್ಟ ಕಾರ್ಯವು ಸಿದ್ಧಿಯಾದೀತು. ಸರಕಾರಿ ಕೆಲಸಗಳು ಸಫಲವಾದೀತು.
ವೃಷಭ: ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ. ಶತ್ರುಗಳು ಮಿತ್ರರಾಗುವರು. ವಾದವಿವಾದದಲ್ಲಿ ಗೆಲುವನ್ನು ಕಾಣುವಿರಿ. ದಾನಧರ್ಮ, ಪರೋಪಕಾರದಲ್ಲಿ ಮನಸ್ಸು ಹಾರಾಡುವುದು. ವ್ಯಾಪಾರವು ಭರದಿಂದ ಸಾಗಲಿದೆ.
ಮಿಥುನ: ಶುಭ ಅಶುಭ ಫಲಗಳಿಂದ ಸುಖದುಃಖದ ಸಮ್ಮಿಲನವಾಗಲಿದೆ. ಭೂಮಿಯಿಂದ ಉತ್ತಮ ಫಲ ಪ್ರಾಪ್ತಿ ಇರುತ್ತದೆ. ಗಣ್ಯ ವ್ಯಕ್ತಿಗಳಿಂದ ಯಾ ಸಂಘ-ಸಂಸ್ಥೆಗಳಿಂದ ನಿಮಗೆ ಗೌರವವು ದೊರಕಲಿದೆ.
ಕರ್ಕ: ವ್ಯಾಪಾರ, ವ್ಯವಹಾರದಲ್ಲಿ ಸಾಧಾರಣ ಧನಲಾಭವು ಆಗಲಿದೆ. ಎಣ್ಣೆಕಾಳು ಹಾಗೂ ಕಪ್ಪು ಬಣ್ಣದ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭ ಸಿಗಲಿದೆ. ವಾದವಿವಾದದಲ್ಲಿ ಗೆಲುವಿದೆ. ಮಿತ್ರರಿಂದ ಸಹಕಾರ ಸಿಗಲಿದೆ.
ಸಿಂಹ: ಅಧಿಕಾರಿಗಳ ಮನಸ್ಸನ್ನು ಗೆಲ್ಲುವುದರಿಂದ ಸಮಾಧಾನವಾಗಲಿದೆ. ಆದರೂ ಅದರೊಂದಿಗೆ ಅವರ ಕಿರುಕುಳವೂ ಕಂಡುಬರಲಿದೆ. ಪ್ರಮೋಶನ್ ಹಿಂದೆ ಹೋಗಲಿದೆ. ನಿಮ್ಮ ಕರ್ತವ್ಯದಲ್ಲಿ ಏನೂ ಚ್ಯುತಿ ಬಾರದಂತೆ ಇರಿ.
ಕನ್ಯಾ: ನಿಮ್ಮ ಮಿತ್ರರಿಂದಲೇ ನಿಮಗೆ ಮೋಸ ಕಂಡುಬರಲಿದೆ. ವ್ಯಾಪಾರ, ಉದ್ಯಮಗಳು ಭರದಿಂದ ಸಾಗಲಿದೆ. ಇಷ್ಟ ಕಾರ್ಯವು ಸಿದ್ಧಿಯಾಗಲಿದೆ. ಲಾಭ ಕಡಿಮೆ ಖರ್ಚು ಹೆಚ್ಚು ಇರಲಿದೆ. ಹಣದ ಅಡಚಣೆ ಉಂಟು.
ತುಲಾ: ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿರಿ. ಹೆಚ್ಚು ಪರಿಶ್ರಮ ವಹಿಸಿ ಅಭ್ಯಾಸ ಮಾಡಿದರೆ ಹೆಚ್ಚಿನ ಪ್ರತಿಫಲ ದೊರೆಯುವುದು. ಉತ್ತಮ ಧನಲಾಭ ಕಂಡು ಬರಲಿದೆ. ಖರ್ಚಿನ ಪ್ರಮಾಣವು ಹೆಚ್ಚಿದೆ.
ವೃಶ್ಚಿಕ: ನಿಮ್ಮ ಪ್ರಾಪಂಚಿಕ ಜೀವನವು ಸುಖಕರವಾಗಲಿದೆ. ಬಂಧುಗಳು ಪ್ರೀತಿ ವಿಶ್ವಾಸದಿಂದ ನಡೆಯುವರು. ವಿರೋಧಿಗಳಿಂದ ಉಪದ್ರವವು ಕಂಡುಬರಲಿದೆ. ತಾಳ್ಮೆ ಸಹನೆಯ ಅವಶ್ಯಕತೆಯು ಕಂಡು ಬರಲಿದೆ.
ಧನು: ನಿಮ್ಮ ಕೌಟುಂಬಿಕ ಜೀವನವು ಸಮಾಧಾನಕರವಾಗಲಿದೆ. ಆದರೂ ಆಗಾಗ ಸ್ವಲ್ಪ ಕಿರಿಕಿರಿಯು ಕಾಡಲಿದೆ. ವಾದವಿವಾದಗಳಿಂದ ದೂರ ಇದ್ದರೆ ಉತ್ತಮ. ವ್ಯಾಪಾರ, ವ್ಯವಹಾರವು ಅಲ್ಪ ಪ್ರಮಾಣದಲ್ಲಿ ಕುಂಟುತ್ತಾ ಸಾಗಲಿದೆ.
ಮಕರ: ಅಧಿಕ ಖರ್ಚು, ಹಣದ ಅಡಚಣೆಯು ಕಂಡು ಬರವುದು. ಯಾರೊಂದಿಗೂ ಹೇಳಿಕೊಳ್ಳಲಾಗದ ಸ್ಥಿತಿ ನಿಮ್ಮದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಡಚಣೆಯು ಕಂಡು ಬರುವುದು. ಕೌಟುಂಬಿಕ ಜೀವನದಲ್ಲಿ ಸೌಖ್ಯವೂ ಸಂತೋಷ ಇರುವುದು.
ಕುಂಭ: ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ಅಡ್ಡಿ ಆತಂಕಗಳು ಮುಂದುವರಿಯಲಿದೆ. ಹಣಕಾಸಿನ ಅಡಚಣೆಯು ಹೆಚ್ಚಾಗಲಿದೆ. ಎಲ್ಲಾ ಕೆಲಸಗಳಲ್ಲಿ ಆತಂಕಗಳು, ಹಲವಾರು ಚಿಂತೆಗಳು, ಕುಟುಂಬದಲ್ಲಿ ಅಸಮಾಧಾನವು ಕಂಡುಬರುವುದು.
ಮೀನ: ಆ ಆಗಾಗ ಅಸಮಾಧಾನದ ಘಟನೆಗಳಿಂದ ಹೆಂಡತಿ, ಮಕ್ಕಳೊಂದಿಗೆ ವಿರಸ ಕಂಡುಬರಲಿದೆ. ಅತಿಯಾದ ಬೇಸರದಿಂದ ಆರೋಗ್ಯದಲ್ಲಿ ಏರುಪೇರಾದೀತು. ಬಂಧುಗಳಿಂದ ಅಸಹಕಾರ ಮೂಡಿಬರಲಿದೆ. ಸಂಚಾರವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.