ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಅರಿತು ಬಾಳುವ ಪತ್ನಿ ದೊರೆತು ಸಂತಸವಾಗಲಿದೆ
Team Udayavani, Dec 18, 2020, 8:30 AM IST
18-12-2020
ಮೇಷ: ಆರ್ಥಿಕವಾಗಿ ಏಳಿಗೆ ಕಂಡು ಬಂದರೂ ಖರ್ಚುವೆಚ್ಚವು ಅಷ್ಟೇ ರೂಪದಲ್ಲಿ ಕಂಡು ಬರುವುದು. ಮನೆಯಲ್ಲಿ ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಕಂಡು ಬಂದೀತು. ಮನೆಯ ರಿಪೇರಿ ಖರ್ಚು ಬಂದೀತು.
ವೃಷಭ: ನಿಮ್ಮ ಆರೋಗ್ಯವು ಸುಧಾರಿಸುತ್ತಾ ಹೋಗಲಿದೆ. ಆದರೂ ಆಗಾಗ ವೈದ್ಯರ ಸಲಹೆಯು ಅಗತ್ಯವಿರುತ್ತದೆ. ಖರ್ಚುವೆಚ್ಚಗಳು ಅಧಿಕವಿರುತ್ತದೆ. ಮಕ್ಕಳ ವಿಷಯದಲ್ಲಿ ತುಂಬಾ ಚಿಂತೆಯು ನಿಮಗೆ ಕಂಡುಬರಲಿದೆ.
ಮಿಥುನ: ಜೀವನದಲ್ಲಿ ಅತೀ ಸಂತೋಷ, ಸಂಭ್ರಮದ ದಿನವಿದು. ನಿಮ್ಮ ವ್ಯಾಪಾರ, ವ್ಯವಹಾರವು ಅತೀ ಚೆನ್ನಾಗಿ ನಡೆಯುವುದು. ಗೃಹದಲ್ಲಿ ತುಂಬಾ ಅತಿಥಿಗಳು ಬಂದಾರು. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.
ಕರ್ಕ: ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಯಾಗಲಿದೆ. ಆದರೆ ಚಿಂತೆ ಬಿಟ್ಟು ಮುನ್ನಡೆದು ಪ್ರಯತ್ನಪಟ್ಟಲ್ಲಿ ಶ್ರೇಯಸ್ಸು ಖಂಡಿತವಿದೆ. ಮನೆಯಲ್ಲಿ ಹಿರಿಯರ ಮನಸ್ಸನ್ನು ಅರಿತು ನಡೆಯಿರಿ.
ಸಿಂಹ: ನಿಮ್ಮ ಮನಸ್ಸು ಅತೀ ಉದ್ವೇಗ ಹಾಗೂ ಉದ್ವಿಗ್ನತೆಯಿಂದ ಕೂಡಿರುತ್ತದೆ. ಹಾಗೂ ನಿದ್ರೆಯಿಲ್ಲದೆ ಚಿಂತೆಗೊಳಗಾಗುವಿರಿ. ಮನಸ್ಸನ್ನು ಸ್ವತ್ಛವಾಗಿಟ್ಟುಕೊಂಡು ಆಧ್ಯಾತ್ಮದ ಕಡೆ ತಿರುಗಿಸಿಟ್ಟುಕೊಂಡರೆ ಉತ್ತಮ.
ಕನ್ಯಾ: ನಿಮ್ಮ ಮನಸ್ಸು ಬೇಸರದಿಂದ ಭಾರವಾದೀತು. ಆದರೆ ಜೀವನದಲ್ಲಿ ನೀವು ಮುಂದೆ ಸಾಗಲಿದ್ದೀರಿ. ನಿಮ್ಮನ್ನು ಅರಿತು ಬಾಳುವ ಪತ್ನಿ ನಿಮಗೆ ದೊರೆತು ಸಂತಸವಾಗಲಿದೆ. ಪರ ಊರಿಗೆ ಹೊಂದಿಕೊಳ್ಳಿರಿ.
ತುಲಾ: ಆರ್ಥಿಕವಾಗಿ ಅಭಿವೃದ್ಧಿ ಕಂಡು ಬರುವುದು. ಉದ್ಯೋಗರಂಗದಲ್ಲಿ ನಿಮಗೆ ಏರುಪೇರು ಕಂಡು ಬರಲಿದೆ. ಗೃಹದಲ್ಲಿ ಹೊಸ ಹೊಸ ಉಪಕರಣಗಳ ಖರೀದಿ ಇದ್ದೀತು. ಆರೋಗ್ಯದಲ್ಲಿ ಅಭಿವೃದ್ಧಿ ಇದೆ.
ವೃಶ್ಚಿಕ: ಮನೆಯಲ್ಲಿ ಮಂಗಲ ಕಾರ್ಯವು ನಡೆದು ಸಂಭ್ರಮ ತಂದೀತು. ವ್ಯಾಪಾರ, ವ್ಯವಹಾರವು ಅಭಿವೃದ್ಧಿ ರೀತಿಯಲ್ಲಿ ಮುನ್ನಡೆಯುವುದು. ಜಾಗದ ವಿಚಾರದಲ್ಲಿ ಸಹೋದರರೊಳಗೆ ಸಣ್ಣಪುಟ್ಟ ಮನಸ್ತಾಪ ಎದ್ದೀತು.
ಧನು: ಪತ್ನಿಯ ವೃತ್ತಿಯಲ್ಲಿ ಏಳುಬೀಳುಗಳು ಕಂಡು ಬರುವುದು. ಅದನ್ನು ಪರಿಗಣಿಸದೆ ಮುನ್ನಡೆದರೆ ಉತ್ತಮ ಫಲವು ದೊರಕಲಿದೆ. ಸ್ವಲ್ಪ ಎಡರು ತೊಡರುಗಳಿದ್ದರೂ ನಿಸ್ಸಂದೇಹವಾಗಿ ಮುನ್ನಡೆಯಿರಿ.
ಮಕರ: ನಿಮ್ಮ ಆರೋಗ್ಯದ ಬಗ್ಗೆ ನೀವು ಅತೀ ಜಾಗ್ರತೆ ಮಾಡಬೇಕಾಗುವುದು. ಮಕ್ಕಳಿಂದ ತುಂಬಾ ಸಂತೋಷ ದೊರಕಲಿದೆ. ಗೃಹ ನಿರ್ಮಾಣ ಯಾ ಜಾಗದ ಖರೀದಿಯ ಕುರಿತು ಮಾತುಕತೆ ನಡೆಯಲಿದೆ. ಶುಭವಿದೆ.
ಕುಂಭ: ನಿಮ್ಮ ಮನಸ್ಸು ಎಣಿಕೆ ಮಾಡಿದಂತೆ ಎಲ್ಲಾ ಕೆಲಸಗಳು ನಡೆದು ಸಂತಸ ಉಂಟಾಗಲಿದೆ. ಪರ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.
ಮೀನ: ವೈದ್ಯಕೀಯ ರಂಗದವರಿಗೆ ಏಳಿಗೆಯು ಕಂಡುಬರುವುದು. ಭಡ್ತಿಯು ದೊರೆತು ಸಂತೋಷವಾದೀತು. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ಆರೋಗ್ಯವು ಸುಧಾರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.