ಇಂದಿನ ಗ್ರಹಬಲ: ಈ ರಾಶಿಯವರಿಂದು ಆದಷ್ಟು ಪ್ರಯಾಣವನ್ನು ಕಡಿಮೆ ಮಾಡಿದರೆ ಉತ್ತಮ!
Team Udayavani, Mar 11, 2021, 7:41 AM IST
11-03-2021
ಮೇಷ: ಆರ್ಥಿಕವಾಗಿ ಧನದಾಯವು ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿ ಸಾಗಲಿವೆ. ಸಾಂಸಾರಿಕವಾಗಿ ಪತ್ನಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಲಿದೆ. ವೃತ್ತಿರಂಗದಲ್ಲಿ ಎಲ್ಲವನ್ನೂ ಪ್ರಶಾಂತವಾಗಿ ಅನುಭವಿಸಿರಿ.
ವೃಷಭ: ಆರೋಗ್ಯಭಾಗ್ಯವು ಸುಧಾರಿಸುತ್ತಾ ಹೋದರೂ ದಿನಕ್ಕೊಂದು ತರಹ ರೀತಿಯಲ್ಲಿ ಕಿರಿಕಿರಿ ಕಂಡುಬಂದೀತು. ರಾಹುವು ಅನೇಕ ರೂಪದಲ್ಲಿ ಕಾಡುವನು. ವೃತ್ತಿನಿರತರಿಗೆ ಆಕಸ್ಮಿಕವಾಗಿ ಮುಂಭಡ್ತಿ ಹಾಗೂ ವರ್ಗಾವಣೆಯನ್ನು ತಂದೀತು.
ಮಿಥುನ: ಆರ್ಥಿಕವಾಗಿ ಧನದಾಯವು ಉತ್ತಮವಿದ್ದು, ವ್ಯಾಪಾರ, ವ್ಯವಹಾರವು ಶ್ರೇಯೋಭಿವೃದ್ಧಿಯತ್ತ ಸಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಿಸಿದರೂ ಚಿಂತೆ ಅನಾವಶ್ಯಕ. ಮನೆಯಲ್ಲಿ ಮಂಗಲ ಕಾರ್ಯದ ಸಂಭ್ರಮವಿದೆ.
ಕರ್ಕ: ಆದಷ್ಟು ಪ್ರಯಾಣವನ್ನು ಕಡಿಮೆ ಮಾಡಿದರೆ ಉತ್ತಮ. ವ್ಯಾಪಾರ, ವ್ಯವಹಾರದಲ್ಲಿ ಈಗ ಹೂಡಿಕೆ ಸರಿಯಲ್ಲ. ನ್ಯಾಯಾಲಯದ ವಿಚಾರದಲ್ಲಿ, ಉತ್ತಮ ಫಲಿತಾಂಶ ಕಂಡುಬರಲಿದೆ. ಎಲ್ಲವನ್ನೂ ಸಮಾನಾಗಿ ಸ್ವೀಕರಿಸಿದರೆ ಸಂತಸವಿದೆ.
ಸಿಂಹ: ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಒದಗಿ ಬಂದು ಕಂಕಣಬಲದ ಯೋಗ ಕೂಡಿಬರುವುದು. ರಾಜಕೀಯದವರಿಗೆ ಏರು, ಇಳಿತ ಇದ್ದದ್ದೇ. ಇಡೀ ದಿನ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಬಿಡುವೇ ಇರದು.
ಕನ್ಯಾ: ಧನ ಸಂಗ್ರಹವು ಉತ್ತಮವಿದ್ದು ನಾನಾ ರೀತಿಯಲ್ಲಿ ಸಂತಸ, ಸಮಾಧಾನ ತುಂಬಿ ತುಳುಕುವ ಜೀವನ ನಿಮ್ಮದು. ಎಲ್ಲಾ ರೀತಿಯಲ್ಲಿ ಕಾರ್ಯಾನುಕೂಲವಾಗುವುದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸುವಿರಿ.
ತುಲಾ: ಮಕ್ಕಳ ವಿದ್ಯೆಯಲ್ಲಿ ಉತ್ತಮ ಯಶಸ್ಸು ಕಂಡು ಬರುವುದು. ಯಾವ ರಂಗದಲ್ಲೂ ಹಣ ಹೂಡಿಕೆ ಈಗ ಬೇಡ. ವ್ಯಾಪಾರ, ವ್ಯವಹಾರದಲ್ಲಿ ಸ್ಪರ್ಧಾತ್ಮಕ ಮನೋಭಾವವು ಕಂಡುಬರುವುದು. ಮನಸ್ಸಿಗೆ ಅಸಮಾಧಾನವಾದೀತು.
ವೃಶ್ಚಿಕ: ಆದಾಯವನ್ನು ಮೀರಿ ಖರ್ಚುವೆಚ್ಚಗಳು ಕಂಡು ಬರಲಿದೆ. ಹಾಗಾಗಿ ಆದಷ್ಟು ಜಾಗ್ರತೆ ಮಾಡಿರಿ. ಗೃಹಿಣಿಗೆ ಸಂಭ್ರಮದ ಸಮಯವಿದು. ವಿಲಾಸೀ ವಸ್ತುಗಳ ಖರೀದಿಯು ಖರ್ಚಿಗೆ ಮಾರ್ಗವಾದೀತು. ಹಲವು ಅಡೆತಡೆ ಎದುರಾಗಲಿದೆ.
ಧನು: ಬೆಳ್ಳಿ, ಚಿನ್ನ ವಸ್ತುಗಳ ಖರೀದಿಯಿಂದ ಮನೆಯಲ್ಲಿ ಸಂಭ್ರಮವಿದ್ದೀತು. ಅವಿವಾಹಿತರಿಗೆ ನೂತನ ಸಂಬಂಧದ ಬಗ್ಗೆ ಮಾತುಕತೆಗಳು ನಡೆಯಲಿವೆ. ಹಿರಿಯರ ಆಶೀರ್ವಾದವು ಸದಾಕಾಲ ನಿಮ್ಮೊಂದಿಗಿರುತ್ತದೆ. ಶುಭವಾರ್ತೆ.
ಮಕರ: ಆರೋಗ್ಯದ ಕೊರತೆಯು ಆಗಾಗ ಕಾಣಿಸಿಕೊಂಡರೂ ಸಾವರಿಸಿಕೊಂಡು ಹೋಗಬಹುದು. ಪುರೋಹಿತ, ಅರ್ಚಕ ವರ್ಗದವರಿಗೆ ದೈವ, ದೇವತಾ, ವೈದಿಕ ವೃತ್ತಿಯವರಿಗೆ ವಿಶೇಷ ಆದಾಯ ತಂದುಕೊಡುವುದು.
ಕುಂಭ: ಬಿಡುವಿಲ್ಲದ ಕಾರ್ಯ ಒತ್ತಡದಿಂದ ಆರೋಗ್ಯ ಹಾನಿಯಾದೀತು. ಸಾಂಸಾರಿಕ ಸಮಸ್ಯೆ ಗಳು ಆಗಾಗ ತಲೆ ಕೆಡಿಸಲಿದೆ. ನೂತನ ವೃತ್ತಿ ಯಾ ಉದ್ಯೋಗ ಲಾಭವು ಕಂಡುಬರಲಿದೆ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾದೀತು.
ಮೀನ: ಪಾಲು ಬಂಡವಾಳದಲ್ಲಿ ಮೋಸಕ್ಕೆ ಈಡಾಗುವಿರಿ. ಜಾಗ್ರತೆ ಇರಲಿ. ದೈಹಿಕವಾಗಿ ಆರೋಗ್ಯದಲ್ಲಿ ಕೊರತೆಯು ಕಾಣಿಸಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಸಾಲ ವಾಪಾಸಾತಿಯಿಂದ ಸಮಾಧಾನವಾಗಲಿದೆ. ಆರೋಗ್ಯ ಉತ್ತಮ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.