ಈ ರಾಶಿಯವರಿಗಿಂದು ಸಾಂಸಾರಿಕವಾಗಿ ಆಪ್ತವರ್ಗದೊಳಗೆ ಮನಸ್ತಾಪ ಕಂಡುಬಂದೀತು
Team Udayavani, Mar 14, 2021, 7:45 AM IST
14-02-2021
ಮೇಷ: ಪ್ರಯತ್ನಬಲವಿದ್ದರೂ ವಿಘ್ನದಿಂದಲೇ ನಿಮಗೆ ಯಶಸ್ಸು ಎಂಬುದು ನಿಮ್ಮ ಅನುಭವಕ್ಕೆ ಬರಲಿದೆ. ಆದಾಯಕ್ಕೆ ಆಗಾಗ ಕೊರತೆ ಕಾಣಿಸಿದರೂ ವಿಶೇಷ ಧನಾಗಮನದ ಪ್ರಾಪ್ತಿ ಇದೆ. ಆದರೆ ಮನೆಯಲ್ಲಿ ಕಹಿ.
ವೃಷಭ: ಹೋಟೇಲ್ ಉದ್ಯಮದವರಿಗೆ ಒಳ್ಳೆಯ ಲಾಭ ಕಂಡುಬಂದರೂ ಹಿಂದಿನ ತರಹ ಲಾಭವಿಲ್ಲ. ಆದರೂ ಮುಂದುವರಿಸಿಕೊಂಡು ಹೋಗಿರಿ. ಆಟೋಟದಲ್ಲಿ ಕ್ರೀಡಾಸ್ಪರ್ಧಿಗಳಿಗೆ ಯಶಸ್ಸು ಕಂಡುಬರುವುದು. ಶುಭವಿದೆ.
ಮಿಥುನ: ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾಪ್ರಗತಿ ಸಂತಸ ತಂದೀತು. ಸಾಂಸಾರಿಕವಾಗಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾದೀತು. ಸಣ್ಣ ಸಣ್ಣ ಪ್ರವಾಸಗಳು ಆಗಾಗ ಕೂಡಿಬಂದೀತು. ಪ್ರಯತ್ನ ಬಲವಿರಲಿ.
ಕರ್ಕ: ಸಾಂಸಾರಿಕವಾಗಿ ಆಪ್ತವರ್ಗದೊಳಗೆ ಮನಸ್ತಾಪ ಕಂಡುಬಂದೀತು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಅನಾವಶ್ಯಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಆಗಾಗ ಕಾರ್ಯಸಫಲತೆ ಕಂಡುಬಂದು ಸಂತಸ.
ಸಿಂಹ: ತಾಳ್ಮೆ, ಸಮಾಧಾನ ನಿಮಗೀಗ ಅಗತ್ಯವಿದೆ. ಅತೀ ಉದ್ವೇಗ, ಚಿಂತೆ ನಿಮಗೆ ಒಳ್ಳೆಯದಲ್ಲ. ಚಿಕಿತ್ಸೆ ರಕ್ಷಣೆ ಹಾಗೂ ಕಂದಾಯ ವರಮಾನ ಇಲಾಖೆಯ ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ತೀವ್ರವೆನಿಸಲಿದೆ.
ಕನ್ಯಾ: ಸ್ವತಂತ್ರ ಪ್ರವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾದೆಯು ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಶೈಕ್ಷಣಿಕ ಕ್ಷೇತ್ರ, ನ್ಯಾಯಾಲಯ ವೃತ್ತಿಯವರಿಗೆ ವಿಶೇಷ ಲಾಭದಾಯದ ದಿನವಿದು.
ತುಲಾ: ಕೃಷಿ ಕ್ಷೇತ್ರದಲ್ಲಿ ವಿಶೇಷ ಅಭಿವೃದ್ಧಿಯು ತೋರಿಬರಲಿದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫಲವನ್ನು ನಿರೀಕ್ಷಿಸಬಹುದು. ಮಂಗಲ ಕಾರ್ಯಗಳ ಚಿಂತನೆಯ ಚಟುವಟಿಕೆಗೆ ಯಶಸ್ಸು ಲಭಿಸೀತು. ಶುಭವಿದೆ.
ವೃಶ್ಚಿಕ: ಪ್ರವಾಸಾದಿಗಳಿಂದ ಸಂತಸವಾಗಲಿದೆ. ಮಹಿಳೆಯರಿಗೆ ಸಾಂಸಾರಿಕ ಸುಖವು ನೆಮ್ಮದಿ ತರಲಿದೆ. ಗೃಹೋಪಕರಣಗಳ ಆಗಮನ ಹರುಷ ತರಲಿದೆ. ವೃತ್ತಿಯಲ್ಲಿ ಸುಧಾರಿಸಿಕೊಂಡು ಹೋದರೆ ಉತ್ತಮ.
ಧನು: ಅಗತ್ಯ ಕಾರ್ಯಗಳಲ್ಲಿ ವಿಳಂಬ ತೋರಿಬಂದೀತು. ಞಗೃಹದಲ್ಲಿ ಸುಖ, ಶಾಂತಿ, ಸಮಾಧಾನವಿರುತ್ತದೆ. ಹಲವು ರೀತಿಯಲ್ಲಿ ಖರ್ಚು ವೆಚ್ಚಗಳಿದ್ದರೂ ಆದಾಯ ಮಾರ್ಗವು ಗೋಚರಿಸೀತು. ಆರೋಗ್ಯ ಚೆನ್ನಾಗಿದೆ.
ಮಕರ: ವೃತ್ತಿ ನಿರತರಿಗೆ ಅನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಹೇರಳವಾದೀತು. ಆಗಾಗ ಸರಕಾರಿ ಸಹಾಯದ ವಿಮುಖತೆಯನ್ನು ತೋರಿಸಿಯಾವು. ಕೃಷಿ, ಬೇಸಾಯ ಚಟುವಟಿಕೆಯವರಿಗೆ ಸ್ವಲ್ಪ ಅಲಸ್ಯವು ಕಾಡಲಿದೆ.
ಕುಂಭ: ಅವಿವಾಹಿತರು, ನಿರುದ್ಯೋಗಿಗಳು ಬಂದ ಅವಕಾಶವನ್ನು ಹೊಂದಿಸಿಕೊಳ್ಳಬೇಕಾದೀತು. ಸಾಂಸಾರಿಕ ವಾಗಿ ಪತ್ನಿ , ಮಕ್ಕಳಿಂದ ಸಹಕಾರ ತೋರಿಬಂದರೂ, ಸದಾ ಕಾಲ ಉದ್ವೇಗಕ್ಕೆ ಒಳಗಾಗುವ ಸ್ಥಿತಿ ನಿಮ್ಮದು.
ಮೀನ: ವೃತ್ತಿರಂಗದಲ್ಲಿ ಸ್ಥಾನ, ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ. ಖರ್ಚಿನ ಬಾಬ್ತುಗಳು ಹಲವು. ಬಂಧುಗಳ ಯಾ ಹಿತೈಷಿಗಳ ಯಾ ಹಿರಿಯರ ಸೂಕ್ತ ಮಾರ್ಗದರ್ಶನಕ್ಕೆ ಸಲಹೆಗೆ ಕಿವಿಗೊಡಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.