![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 9, 2021, 7:43 AM IST
09-04-2021
ಮೇಷ: ಹಲವು ತರದ ಎಡರುತೊಡರುಗಳು ಕಂಡುಬಂದರೂ ಹಂತಹಂತವಾಗಿ ಅಭಿವೃದ್ಧಿ ಕಂಡು ಬಂದು ನವಚೈತನ್ಯ ಅನುಭವಕ್ಕೆ ಬರುತ್ತದೆ. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನದಿಂದ ಸಂತಸವು ಕಂಡುಬರುವುದು.
ವೃಷಭ: ನೂತನ ಭಾಂದವ್ಯವು ವೃದ್ದಿಯಾಗಿ ನೆಮ್ಮದಿ ತರಲಿದೆ. ಸತ್ಕಾರಾದಿಗಳಿಗೆ ಧನವ್ಯಯ ಕಂಡುಬಂದರೂ ಸಂತೃಪ್ತಿ ದೊರಕುವುದು. ಆಗಾಗ ವ್ಯಯಾಧಿಕ್ಯವಾಗಿ ವ್ಯಾಪಾರಗಳಲ್ಲಿ ಹೂಡಿಕೆಯ ಅಭಿವೃದ್ಧಿ ತರುವುದು. ದಿನಾಂತ್ಯ ಶುಭವಿದೆ.
ಮಿಥುನ: ಹೊಸ ವೃತ್ತಿಯಲ್ಲಿ ಅಲ್ಪಸ್ವಲ್ಪ ಹೂಡಿಕೆ ಮಾಡಿದರೂ ಆದಾಯವು ವರ್ಧಿಸುವುದು. ಮನೆಯವರ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ಶ್ರೀದೇವರ ದರ್ಶನದಿಂದ ಮನಸ್ಸು ಸಮಾಧಾನವಾಗುವುದಲ್ಲದೆ ಮನೋಕಾಮನೆ ಪೂರೈಸಲಿದೆ.
ಕರ್ಕ: ನಿಮ್ಮ ಎಲ್ಲಾ ಕೆಲಸಕಾರ್ಯಗಳು ಪೂರ್ಣತೆಯನ್ನು ಪಡೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆಗಳು ಕಂಡುಬರಲಾರದು. ಆದರೂ ಗೃಹ ದಲ್ಲಿ ಗೃಹಿಣಿಯ ಬೇಡಿಕೆಗೆ ಸ್ಪಂದಿಸಬೇಕಾಗುವುದು. ಆತ್ಮೀಯ ಗೆಳೆಯರೊಂದಿಗೆ ವಿರಸ ಮೂಡಿತು.
ಸಿಂಹ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗವು ದೊರೆತು ಸಮಾಧಾನ ಹೊಂದಬೇಕಾದೀತು. ವೈಯಕ್ತಿಕವಾಗಿ ನಿಮಗೆ ಉದ್ವೇಗ, ಬೇಸರ, ಭಯ ಎಲ್ಲಾ ಮೂಡೀತು. ಆತ್ಮವಿಶ್ವಾಸವನ್ನು ಕಳಕೊಳ್ಳದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿದೆ.
ಕನ್ಯಾ: ಮನೆಯಲ್ಲಿ ಹಿರಿಯರ ಮಾತಿಗೆ ಉದಾಸೀನತೆ ತೋರದೆ ಬೆಲೆ ಕೊಡುವುದನ್ನು ರೂಢಿ ಮಾಡಿಕೊಳ್ಳಿರಿ. ನಿಮ್ಮ ಛಲ, ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿರಿ. ನನ್ನದೇ ಸರಿ ಎಲ್ಲಾ ಹಠ ಒಳ್ಳೆಯದಲ್ಲ . ಆರೋಗ್ಯದಲ್ಲಿ ಅಭಿವೃದ್ಧಿ.
ತುಲಾ: ಕೌಟುಂಬಿಕವಾಗಿ ಆಗಾಗ ಆಕ್ಷೇಪ, ಮನಸ್ತಾಪಗಳಿಂದ ಮನೋವ್ಯಾಕುಲತೆ ಹೆಚ್ಚಾದೀತು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿರಿ. ಪ್ರತಿಯೊಂದಕ್ಕೂ ಸಿಡುಕದಿರಿ. ಆಗಾಗ ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿ.
ವೃಶ್ಚಿಕ: ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿದ್ದಲ್ಲಿ ಉತ್ತಮ ಲಾಭ ಕೈ ಸೇರಲಿದೆ. ಸಹಕಾರ ಮನೋಭಾವಗಳಿಂದ ನೀವು ಕೈಗೊಳ್ಳುವ ಕಾರ್ಯಕಲಾಪಗಳು ಪೂರ್ಣಗೊಳ್ಳಲಿದೆ.
ಧನು: ಉದ್ಯೋಗದಲ್ಲಿ ಮುಂಭಡ್ತಿ, ಬದಲಾವಣೆ, ವರ್ಗಾವಣೆ ಇತ್ಯಾದಿಗಳು ತೋರಿಬಂದೀತು. ಹಾಗೇ ಇಷ್ಟಮಿತ್ರರ ಪ್ರೀತಿ, ವಿಶ್ವಾಸ, ಸಹಕಾರ ಮನೋಭಾವಗಳಿಂದ ನಿಮ್ಮ ಆತ್ಮವಿಶ್ವಾಸ ದ್ವಿಗುಣಗೊಳ್ಳಲಿದೆ. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ.
ಮಕರ: ದೂರ ಪ್ರವಾಸ, ತೀರ್ಥಯಾತ್ರೆ ಯಾ ಕುಟುಂಬ ಯಾತ್ರೆಗಳು ನೆರವೇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ತುಸು ಲಾಭಕರ ಹಾಗೂ ಸಮಾಧಾನ ಮೂಡಲಿದೆ. ಸ್ವಕೀಯರಿಂದ, ಆತ್ಮೀಯರಿಂದ ಸಿಗುವ ನೆರವು ನಿರಂತರ ಕಂಡುಬರುವುದು. ಶುಭವಿದೆ.
ಕುಂಭ: ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭವು ಕಂಡುಬರುವುದು. ಕುಟುಂಬದಲ್ಲಿ ದೇವತಾಕಾರ್ಯಗಳು ಜರಗಲಿದೆ. ಇತರರ ಭಾವನೆಗಳಿಗೆ ಬೇಗನೇ ಸ್ಪಂದಿಸುವ ನಿಮಗೆ ಒಳ್ಳೆಯ ಅವಕಾಶ ದೊರಕಲಿದೆ. ಮುನ್ನಡೆಯಿರಿ.
ಮೀನ: ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭವಿಲ್ಲದಿದ್ದರೂ ನಷ್ಟದ ಸ್ಥಿತಿಯು ಹೊಂದಲಾರದು. ಗೃಹದಲ್ಲಿ ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಲಿದೆ. ಒಳ್ಳೆಯ ಮನೋಭಾವ, ಕಾರ್ಯಭಾಗದಲ್ಲಿ ಉತ್ಸಾಹವು ಕಂಡುಬರುವುದು
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.