ಈ ರಾಶಿಯವರಿಗಿಂದು ಸುಖ, ಸಂಪತ್ತು ಸಮೃದ್ಧಿಯಿಂದ ನೆಮ್ಮದಿ ದೊರಕಲಿದೆ!
Team Udayavani, Dec 20, 2020, 7:35 AM IST
20-12-2020
ಮೇಷ: ತೀರ್ಥಯಾತ್ರೆಯ ಸಂಭವವಿರುತ್ತದೆ. ಸಾಮಾಜಿಕವಾಗಿ ಗೌರವ ಘನತೆ ಹೆಚ್ಚಲಿದೆ. ಶುಭ ಕಲಾಪಗಳಿಂದ ಮನ ಸಮಾಧಾನ ಹಾಗೂ ಸಂತಸಗೊಳ್ಳಲಿದೆ. ಆರೋಗ್ಯದ ಬಗ್ಗೆ ಅತೀ ಜಾಗ್ರತೆ ಮಾಡಿರಿ.
ವೃಷಭ: ಸೋದರರೊಡನೆ ಲೇವಾದೇವಿಯಲ್ಲಿ ಸ್ವಲ್ಪ ಅಸಮಾಧಾನವಾಗಲಿದೆ. ಕುಟುಂಬ ಕ್ಲೇಶ, ತಂದೆಯ ಆರೋಗ್ಯ ಹಾನಿ ಇತ್ಯಾದಿಗಳಿಂದ ಬೇಸರವಾಗಲಿದೆ. ಕೃಷಿ ಭೂಮಿ ಖರೀದಿಗಾಗಿ ಧನವಿನಿಯೋಗವಾಗಲಿದೆ.
ಮಿಥುನ: ಕಲೆ, ಸಾಹಿತ್ಯ ವಿಭಾಗಗಳಲ್ಲಿ ನಿಮ್ಮನ್ನು ಗುರುತಿಸುವ ಕೆಲಸ ನಡೆಯಲಿದೆ. ಹಿತಬಂಧುಗಳು ನಿಮ್ಮಿಂದ ಸಹಾಯ ನಿರೀಕ್ಷಿಸಬಹುದು. ಅವಿವಾಹಿತರಿಗೆ ದಾಂಪತ್ಯ ಜೀವನದ ಸುಯೋಗ ಕಂಡು ಬರಲಿದೆ.
ಕರ್ಕ: ಸಮೀಪದ ಆದರೂ ಅಪರೂಪದ ಬಂಧು ಸಮಾಗಮದಿಂದ ಹರ್ಷವಾಗಲಿದೆ. ಗೃಹಿಣಿಗೆ ವಾತ ದೋಷದಿಂದ ಸಂಧಿನೋವು, ಉದರದಲ್ಲಿ ವ್ಯತ್ಯಾಸ ಕಂಡುಬರುವುದು. ಸಂಯಮದಿಂದ ಕಾರ್ಯಸಿದ್ಧಿಯಾಗಲಿದೆ.
ಸಿಂಹ: ಧರ್ಮಕಾರ್ಯಗಳಲ್ಲಿ ವಿಘ್ನ ಭಾದೆ ಕಂಡೀತು. ಆದಾಯವೂ ತಡೆಯೊಳಗಾಗಿ ನೆಮ್ಮದಿ ಕೆಡಲಿದೆ. ಕುಟುಂಬ ಕಲಹ, ವೃತ್ತಿಯಲ್ಲಿ ವಂಚನೆ, ವಿವಾದ ಇತ್ಯಾದಿಗಳಿಂದ ಮಾನಸಿಕ ವ್ಯಥೆ ಉಂಟಾಗಲಿದೆ.
ಕನ್ಯಾ: ಚರ್ಮರೋಗ, ವಾತ ಪಿತ್ತ, ಅಪಕೀರ್ತಿ ಇತ್ಯಾದಿಗಳಿಗೂ ಶನಿ ಕಾರಣನಾದಾನು. ಧನಾಗಮನ ವೃದ್ಧಿಯಿಂದ ಮನಸ್ಸು ಹಗುರವಾಗಲಿದೆ. ಮಾತೃಕ್ಲೇಶಕ್ಕೆ ಎಡೆಯಿದೆ. ಪಿತ್ತ ಪ್ರಕೋಪ, ಪತ್ನಿಗೆ ಅನಾರೋಗ್ಯ ಕಂಡುಬಂದೀತು.
ತುಲಾ: ನೀವು ಮಾಡುವ ವ್ಯವಹಾರದಲ್ಲಿ, ಅಭೀಷ್ಟ ಸಿದ್ಧಿಯಾಗಲಿದೆ. ನೂತನ ಕಾರ್ಯಾರಂಭಕ್ಕೆ ಧನ ವಿನಿಯೋಗ ಮಾಡಬೇಡಿರಿ. ಕುಟುಂಬ ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾದೀತು. ಆತ್ಮೀಯರ ಆಗಮನವಿದೆ.
ವೃಶ್ಚಿಕ: ಪ್ರವಾಸ, ಯಾತ್ರಾದಿಗಳಿಂದ ಸಂತೃಪ್ತಿ. ಮನೆಯ ವಿಸ್ತರಣೆಯಾ ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ಸರಕಾರೀ ಇಲಾಖೆಯಿಂದ ಭೀತಿ ಇರುತ್ತದೆ. ದುಡುಕಿ ಮಾಡಿದ ಕಾರ್ಯದಿಂದ ಆಶಾಭಂಗವಾಗಲಿದೆ.
ಧನು: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸ, ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿ ಇದ್ದರೂ ಕಿರಿಕಿರಿಯು ಹೆಚ್ಚಾದೀತು. ಸಹೋದ್ಯೋಗಿಗಳ ಅಸೂಯೆಯ ದೃಷ್ಟಿ ನಿಮ್ಮ ಮೇಲೆ ಇದ್ದೀತು. ಶುಭವಾರ್ತೆಯಿಂದ ಸಂತಸ.
ಮಕರ: ಕಫ ದೋಷ, ಉದರವ್ಯಾಧಿ, ಅಜೀರ್ಣ ಉಪದ್ರವದಿಂದಲೋ ಆರೋಗ್ಯ ಸರಿಯಿರಲಾರದು. ಮಕ್ಕಳ ಅಲಸ್ಯದಿಂದ ವಿದ್ಯೆಯಲ್ಲಿ ಕೊರತೆ ಕಂಡುಬರಲಿದೆ. ಹಿರಿಯರಿಗೆ ಆದಾಯದಲ್ಲಿ ಲಾಭ ಸಿಗಲಿದೆ. ಶುಭವಿದೆ.
ಕುಂಭ: ಮತ್ಸೋದ್ಯಮ, ತರಕಾರೀ ವ್ಯಾಪಾರದಲ್ಲಿ ಪ್ರಗತಿ ಕಡಿಮೆ ಇರುತ್ತದೆ. ಶುಭಮಂಗಲ ಕಾರ್ಯಗಳ ಮುನ್ಸೂಚನೆ ಕಂಡುಬರಲಿದೆ. ತೀರ್ಥಯಾತ್ರೆಯಂತಹ ಪುಣ್ಯಕಾರ್ಯಗಳಿಗೂ ನಿಮಗೆ ಯೋಗವಿದೆ.
ಮೀನ: ಸುಖ, ಸಂಪತ್ತು ಸಮೃದ್ಧಿಯಿಂದ ನೆಮ್ಮದಿ ದೊರಕಲಿದೆ. ಕಫ, ಪಿತ್ತದೋಷದಿಂದ ಆರೋಗ್ಯದಲ್ಲಿ ಏರುಪೇರು ಕಂಡೀತು. ಕಾರ್ಯಸಾಧನೆಯಲ್ಲಿ ಪದೇ ಪದೇ ಪರಕೀಯರ ಪೀಡೆ ಕಂಡುಬಂದೀತು. ಜಾಗ್ರತೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.