ಶುಕ್ರವಾರದ ರಾಶಿಫಲ: ಯಾರಿಗೆ ಶುಭ- ಯಾರಿಗೆ ಲಾಭ?
Team Udayavani, May 28, 2021, 7:18 AM IST
28-05-2021
ಮೇಷ: ಕೌಟುಂಬಿಕ ಜೀವನದಲ್ಲಿ ಏರಿಳಿತಗಳ ಅನುಭವ ತಂದು ಕೊಡಲಿದೆ. ಹಾಗೇ ಹೆಚ್ಚಿನ ಉಸ್ತುವಾರಿಯ ಅಗತ್ಯವಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯದತ್ತ ಮನುಸ್ಸು ಹೆಚ್ಚು ವಾಲುವುದು. ಶುಭವಿದೆ.
ವೃಷಭ: ಆರ್ಥಿಕವಾಗಿ ಸಂಗ್ರಹವು ಕರಗಿ ಹೋಗಲಿದೆ. ಸ್ತ್ರೀಯರಿಗೆ ಹಲವು ಖರ್ಚುಗಳು ಬರಲಿವೆ. ನೂತನ ದಂಪತಿಗಳಿಗೆ ಸಿಹಿವಾರ್ತೆ, ಬಂಧುಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ನೆಮ್ಮದಿಗೆ ಭಂಗ ಬಂದೀತು.
ಮಿಥುನ: ಪ್ರಯತ್ನಿಸುವ ಅನೇಕ ಕೆಲಸ ಕಾರ್ಯಗಳಲ್ಲಿ ಸಾಫಲ್ಯ ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತಂದುಕೊಡಲಿದೆ. ಕಣ್ಣೆದುರೇ ನಡೆಯುವ ಮೋಸ, ವಂಚನೆಗಳನ್ನು ಎದುರಿಸುವ ಅಗತ್ಯವಿದೆ.
ಕರ್ಕ: ಸಾಮಾಜಿಕವಾಗಿ ಜನಮನ್ನಣೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಮಿತ್ರ ಸಹವಾಸದಿಂದ ಅಡ್ಡದಾರಿ ಹಿಡಿಯುವ ಪ್ರವೃತ್ತಿ ತೋರಿಬಾರದಂತೆ ಕಾಳಜಿ ವಹಿಸಿರಿ. ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದರೆ ಯಶಸ್ಸು .
ಸಿಂಹ: ಗ್ರಹಗಳ ಪ್ರತಿಕೂಲತೆಯಿಂದ ಆಲಸಿಯಾದವನ ಕಾರ್ಯಕ್ಷಮತೆ ಕ್ಷೀಣಿಸುತ್ತಲೇ ಹೋಗುವುದು ಅವಿವಾಹಿತರಿಗೆ ವೈವಾಹಿಕ ಸಂಬಂಧಿತ ಮಾತುಕತೆಗಳು ಕಂಕಣಬಲದಲ್ಲಿ ಪೂರ್ಣವಾಗಲಿದೆ. ಶುಭವಿದೆ.
ಕನ್ಯಾ: ಐಶಾರಾಮದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಶಿಸ್ತು ಪಾಲಿಸುವಂತೆ ಹೇಳುವ ಪ್ರಸಂಗ ಬರುತ್ತದೆ. ದುಂದುವೆಚ್ಚದ ಮೇಲೆ ಕಡಿವಾಣ ಹಾಕುವುದು.
ತುಲಾ: ಉದ್ಯೋಗಿಗಳು ಕೆಲಸದ ಮಹತ್ವವನ್ನು ತಿಳಿಯುವುದು ಲೇಸು. ಯುವಕ ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು. ಒಂಟಿಯಾದ ಯೋಗ್ಯ ವಯಸ್ಕರಿಗೆ ಮದುವೆಯ ಆಸರೆ ಬೇಕೆನಿಸುವುದು.
ವೃಶ್ಚಿಕ: ಆರ್ಥಿಕವಾಗಿ ಸಂಪನ್ಮೂಲಗಳನ್ನು ಪ್ರಕಟಗೊಳಿಸಲು ಹೆಚ್ಚು ಹೆಚ್ಚು ಕಾರ್ಯಗಳನ್ನು ಕೈಗೆತ್ತಿಕೊಳ್ಳ ಬೇಕಾದೀತು. ಹಾಗೂ ಸಮತೋಲನ ಜೀವನವನ್ನು ನಡೆಸಿಕೊಂಡು ಹೋಗಲು ಅಧ್ಯಾತ್ಮಿಕದ ಚಿಂತನೆಯು ಅನಿವಾರ್ಯವಾದೀತು.
ಧನು: ವಿದ್ಯಾರ್ಥಿಗಳ ಓದಿನ ವ್ಯಾಪ್ತಿ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಕಿವಿಗೊಡದಿರುವುದು ಲೇಸು. ನಿಮ್ಮ ಮಕ್ಕಳಿಂದ ನಿಮಗೆ ಗೌರವ ಹೆಚ್ಚಾಗಲಿದೆ. ಯಶಸ್ಸು ಸಿಗಲಿದೆ.
ಮಕರ: ಅವಿವಾಹಿತರ ಅದೃಷ್ಟ ಬಲವು ಖುಲಾಯಿಸಲಿದೆ. ಆತ್ಮೀಯರ ಹಾಗೂ ಕುಟುಂಬ ಸದಸ್ಯರ ಆಗಮನ ಮನೆಯಲ್ಲಿ ಸಂತಸ ತರಲಿದೆ. ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನೂ ನಿಭಾಯಿಸುವ ಛಾತಿ ನಿಮ್ಮಲಿದೆ.
ಕುಂಭ: ನೀರಸವಾದ ನಿರುದ್ಯೋಗಿಗಳ ದೈನಂದಿನ ಬದುಕಿನಲ್ಲಿ ಆಶಾಕಿರಣವು ಮೂಡಿ ಬರಲಿದೆ. ಕಿಟಕಿ ಪ್ರೇಮಿಗಳ ಮದುವೆಯು ಅನಿವಾರ್ಯವಾಗಲಿದೆ. ವಿದ್ಯಾರ್ಥಿಗಳು ದುಶ್ಚಟ ಹಾಗೂ ದುರ್ವ್ಯಸನಗಳಿಂದ ದೂರವಿರಿ.
ಮೀನ: ಮದುವೆ ಮೊದಲಿನ ಪರೀಕ್ಷಾರ್ಥ ಹೊಂದಾಣಿಕೆಗಳು ಅವಿವಾಹಿತರಿಗೆ ಕಂಕಣಬಲಕ್ಕೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ವ್ಯಾಪಾರಸ್ಥರಿಗೆ ಸ್ವಲ್ಪ ಸಮಾಧಾನ ತರಲಿದೆ. ವೃತ್ತಿಯಲ್ಲಿ ಮುನ್ನಡೆಯಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.