Daily horoscope: ಈ ರಾಶಿಯವರಿಗಿಂದು ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡವಿರಲಿದೆ


Team Udayavani, Nov 22, 2023, 7:12 AM IST

Daily horoscope: ಈ ರಾಶಿಯವರಿಗಿಂದು ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡವಿರಲಿದೆ

ಮೇಷ: ಭವಿಷ್ಯದಲ್ಲಿನ  ಸಂಭವ- ಅಸಂಭವ ಗಳ ಅಂದಾಜು ಮಾಡುವಿಕೆ  ಸಲ್ಲದು. ವೃತ್ತಿ ಜೀವನದಲ್ಲಿ ಹೊಣೆಗಾರಿಕೆಯ ಗಾತ್ರ, ಸ್ವರೂಪಗಳಲ್ಲಿ  ವ್ಯತ್ಯಾಸ ಸಹಜ. ಉದ್ಯಮ ಯಶಸ್ವಿಯಾಗಲು ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.

ವೃಷಭ: ಪ್ರತಿಯೊಂದು ನಡೆಗೂ ನಿರ್ದಿಷ್ಟ ಗುರಿ ಇರಲಿ. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ ಗೋಚರ.  ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಕೃಷಿ ಕ್ಷೇತ್ರಕ್ಕೆ ಯುವಜನರನ್ನು ಸೆಳೆಯುವ ಪ್ರಯತ್ನ ಸಫ‌ಲ. ಖಾದಿ, ಗ್ರಾಮೋದ್ಯೋಗ ಯೋಜನೆಗಳ ಅಭಿವೃದ್ಧಿಯಲ್ಲಿ ಆಸಕ್ತಿ.

ಮಿಥುನ: ಆತ್ಮವಿಶ್ವಾಸದಿಂದೊಡಗೂಡಿದ ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಸೂತ್ರ ಎಂಬುದನ್ನು ಮರೆಯದಿರಿ. ಉದ್ಯೋಗದಲ್ಲಿ ಪ್ರತಿಭೆಗೆ ಪ್ರಾಧಾನ್ಯ. ಉದ್ಯಮದ ಕೀರ್ತಿ ಅನಾಯಾಸವಾಗಿ ವೃದ್ಧಿ. ವಸ್ತ್ರ ,  ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕರ್ಕಾಟಕ: ಸರ್ವರ  ಹಿತಸಾಧನೆಯ ಲಕ್ಷ್ಯದೊಂದಿಗೆ ಮುಂದೆ ಸಾಗುವುದು ಯಶಸ್ಸಿನ ಸೂತ್ರ.. ಉದ್ಯೋಗದಲ್ಲಿ ಉನ್ನತ ಹೊಣೆಗಾರಿಕೆ. ಉದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಯತ್ನಕ್ಕೆ ಮುನ್ನಡೆ.

ಸಿಂಹ: ಇದುವರೆಗಿನ ಸಾಧನೆಗಳ ಬಗ್ಗೆ ಅಪಾರ ತೃಪ್ತಿಯಿದ್ದರೂ ಕ್ರಿಯಾಶೀಲತೆಗೆ ಚಾಲನೆ ಅವಶ್ಯ.ಜೊತೆಗಾರರಿಗೆ ಆವಶ್ಯಕತೆಗೆ ತಕ್ಕಂತೆ ಮಾರ್ಗದರ್ಶನ. ಸ್ವಂತ ಉದ್ಯಮದಲ್ಲಿ ನೌಕರರ ಹಿತ ಕಾಯುವ ಮನೋವೃತ್ತಿ ಸಮಾಜದಲ್ಲಿ ಗೌರವ ವೃದ್ಧಿ. ನೂತನ ವಾಹನ ಖರೀದಿಗೆ ನಿರ್ಧಾರ.

ಕನ್ಯಾ: ಉದ್ಯೋಗದಲ್ಲಿ ಸ್ಥಿರವಾಗುವ ಪ್ರಯತ್ನ ಸಫ‌ಲ. ಕಾರ್ಯತತ್ಪರತೆಗೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ.ಲೇವಾದೇವಿ ವ್ಯವಹಾರದಲ್ಲಿ ನಷ್ಟದ ಸಾಧ್ಯತೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ವಿನಿಯೋಗ

ತುಲಾ: ತೋರಿಕೆಯ ಸಮಸ್ಯೆಗಳಿಗೆ ಅಂಜಿ ಪಲಾಯನ ಸೂತ್ರ ಪಠಿಸದಿರಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ.  ಹಿತಶತ್ರುಗಳಿಗೆ ಸೋಲು ಸನ್ನಿಹಿತ.ಗುರುಸ್ಥಾನದಲ್ಲಿರುವ ಹಿರಿಯರು ಅನಿರೀಕ್ಷಿತವಾಗಿ ಮನೆಗೆ ಆಗಮನ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿಯಿಂದ ಮನಸ್ಸಿಗೆ ಸಮಾಧಾನ.

ವೃಶ್ಚಿಕ: ಹವಾಮಾನದ ಏರುಪೇರಿನ ನಡುವೆ ದೇಹಾರೋಗ್ಯ  ಕಾಯ್ದುಕೊಂಡ ಸಾರ್ಥಕ ಭಾವ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ  ಎದುರಾಳಿಗಳ ಪೈಪೋಟಿ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ತಾತ್ಕಾಲಿಕ ಸಮಸ್ಯೆ ನಿವಾರಣೆ.

ಧನು: ದೇವರಲ್ಲಿ ಅಚಲ ವಿಶ್ವಾಸದೊಂದಿಗೆ ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯಸಾಧನೆ. ಸಹೋದ್ಯೋಗಿ ಗಳಿಂದ ಪ್ರೋತ್ಸಾಹ. ಸಣ್ಣ ಉದ್ಯಮ ಘಟಕದ ಸ್ಥಾಪನೆ  ಪ್ರಯತ್ನದಲ್ಲಿ ಮುನ್ನಡೆ. . ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು  ನಿರ್ಧಾರ.

ಮಕರ: ಡೋಲಾಯಮಾನ ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ  ಕಾರ್ಯ ಮುಗಿಸಲು ಸಾಮೂಹಿಕ ಪ್ರಯತ್ನ.  ಸ್ವಂತ ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಪ್ರಾಪ್ತ ವಯಸ್ಕ ಮಕ್ಕಳ ವಿವಾಹಕ್ಕೆ  ಪ್ರಯತ್ನ.

ಕುಂಭ: ಅತಿಯಾದ ಕಾರ್ಯಭಾರದಿಂದ ಕುಗ್ಗದ ದೇಹ ಹಾಗೂ ಮನಸ್ಸು. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಸಾಮಾಜಿಕ ವಲಯದ  ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮರುದಿನದ ಆಯೋಜಿತ ಸೇವಾ ಕಾರ್ಯಗಳಿಗೆ ಸಿದ್ಧತೆ.

ಮೀನ: ಕಾರ್ಯಕ್ರಮಗಳ ಒತ್ತಡದ ನಡುವೆ ಏಕಕಾಲಕ್ಕೆ ಹಲವು ವಿಭಾಗಗಳತ್ತ ಲಕ್ಷ್ಯ ಹರಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ.ಕಾರ್ಯ ನಿರ್ವಹಣೆ ಕೃಷಿ ಆಧಾರಿತ ಉದ್ಯಮ ಘಟಕ  ಸ್ಥಾಪನೆ ಪ್ರಯತ್ನ ಮುನ್ನಡೆ. ಉದ್ಯೋಗ ಅರಸುತ್ತಿರುವವರಿಗೆ   ಸಮರ್ಪಕ ಅವಕಾಶಗಳು ಗೋಚರ. ಸಾಮಾಜಿಕ ಸಮಸ್ಯೆಗಳ ಪರಿಹಾರ ಪ್ರಯತ್ನ

ಟಾಪ್ ನ್ಯೂಸ್

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ

Prabhakar-Joshi

Bantwala: ಹಿರಿಯ ವಿದ್ವಾಂಸರಾದ ಡಾ.ಪ್ರಭಾಕರ ಜೋಶಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ

Sowthadka

Hunger Strike: ಸರಕಾರದ ಹಿಡಿತದಿಂದ ದೇಗುಲ ಮುಕ್ತಗೊಳಿಸಿ, ಸ್ವಾಯತ್ತ ಮಂಡಳಿ ರಚಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

1-horoscope

Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ

Dina Bhavishya

Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

rape

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

CHampai Soren

Jharkhand ಮಾಜಿ ಸಿಎಂ ಚಂಪಯಿ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.