Horoscope: ಈ ರಾಶಿಯವರಿಂದು ಒಳ್ಳೆಯ ಘಟನೆಗಳ ಸರಮಾಲೆಯನ್ನು ನೋಡಲಿದ್ದಾರೆ
Team Udayavani, Dec 24, 2023, 7:29 AM IST
ಮೇಷ: ಮನಸ್ಸನ್ನು ಹಗುರ ವಾಗಿಟ್ಟಕೊಂಡು ವಿರಾಮದ ಆನಂದವನ್ನು ಅನುಭವಿಸಿ. ಹೆಚ್ಚಿನ ನೌಕರ ವರ್ಗದವರಿಗೆ ನೆಮ್ಮದಿ. ಸಹೋದ್ಯೋಗಿಗಳಿಂದ ಕುಟುಂಬ ಸಹಿತ ಸದ್ಭಾವನೆಯ ಭೇಟಿ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ.
ವೃಷಭ: ಮರುದಿನದ ನಿಯೋಜಿತ ಕಾರ್ಯಗಳಿಗೆ ಸಜ್ಜಾಗುವ ಸಮಯ. ಸಹೋದ್ಯೋಗಿ ಗೆಳೆಯರೊಂದಿಗೆ ಮಿಲನ. ಕೃಷಿ ಕ್ಷೇತ್ರದಲ್ಲಿ ಹೊಸ ಬೆಳೆಗಳ ಪ್ರಯೋಗ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಕುಟುಂಬ ಸಹಿತ ಪ್ರಾಕೃತಿಕ ತಾಣಕ್ಕೆ ಭೇಟಿ.
ಮಿಥುನ: ಎಲ್ಲ ವರ್ಗದವರಿಗೂ ಸಮಾಧಾನದ ದಿನ. ಉದ್ಯಮಿಗಳಿಗೆ ನೆಮ್ಮದಿ ತರುವ ಸಮಾಚಾರ. ದೂರದ ಬಂಧುಗಳು ಮತ್ತು ಹಳೆಯ ಮಿತ್ರ ರೊಂದಿಗೆ ಭೇಟಿ. ವಸ್ತ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.
ಕರ್ಕ: ವ್ಯಕ್ತಿತ್ವ ವಿಕಸನ ಹಾಗೂ ಸಮಗ್ರ ಅಭಿವೃದ್ಧಿಯ ಕುರಿತು ವಿಸ್ತೃತ ಚಿಂತನೆ. ಕಿರಿಯ ಬಂಧುವಿನ ವಿದ್ಯಾರ್ಜನೆಗೆ ಸಹಾಯ. ಉದ್ಯೋಗದಲ್ಲಿ ಪದೋ ನ್ನತಿಯ ಸೂಚನೆ. ಉದ್ಯಮದ ಹೊಸ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಸಿಂಹ: ಉದ್ಯೋಗ, ಉದ್ಯಮದ ಹೊಣೆಗಾರಿಕೆಗಳಿಗೆ ತಾತ್ಕಾಲಿಕ ವಿರಾಮ. ಹತ್ತಿರದ ಪ್ರವಾಸಿ ಧಾಮಕ್ಕೆ ಭೇಟಿ. ನಿರ್ಮಾಣ ವೃತ್ತಿಯ ವರಿಗೆ ಕಾರ್ಯದ ಒತ್ತಡ. ಉದ್ಯೋ ಗಾಸಕ್ತರಿಗೆ ಅವಕಾಶಗಳು ಗೋಚರ. ವಿವಾಹ ಸಮಸ್ಯೆ ನಿವಾರಣೆಗೆ ಪ್ರಯತ್ನ.
ಕನ್ಯಾ: ಹೊಸ ಉದ್ಯಮ ಆರಂಭಿಸುವ ಕುರಿತು ಸಮಾಲೋಚನೆ. ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ಗಣ್ಯರ ವಲಯ ದಲ್ಲಿ ಚರ್ಚೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ.
ತುಲಾ: ಹತಾಶೆಯಿಂದ ಕೈಬಿಟ್ಟಿದ್ದ ಯೋಜನೆಗಳಿಗೆ ಮತ್ತೆ ಜೀವ ತುಂಬುವ ಪ್ರಯತ್ನ ಆರಂಭ. ಸ್ವಂತ ಆರೋಗ್ಯದ ಬಗೆಗೆ ಕಾಳಜಿ ಇರಲಿ. ಬಾಲ್ಯದ ಒಡನಾಡಿಗಳ ಅನಿರೀಕ್ಷಿತ ಭೇಟಿ. ಮಹಿಳೆಯರ ಗೃಹೋತ್ಪನ್ನ ಘಟಕಕ್ಕೆ ಸಂದರ್ಶನ.
ವೃಶ್ಚಿಕ: ಒಳ್ಳೆಯ ಘಟನೆ ಗಳು ಸರಮಾಲೆಯನ್ನು ನೋಡುವಿರಿ. ಪಾಠೇತರ ಚಟು ವಟಿಕೆಗಳಲ್ಲಿ ಮಕ್ಕಳ ಸಾಧನೆಗೆ ಸರ್ವತ್ರ ಪ್ರಶಂಸೆ. ಕೃಷಿಕ್ಷೇತ್ರಕ್ಕೆ ಕಿರಿಯರಿಗೆ ಹಿತಾನುಭವ. ಪಾಲುದಾರಿಕೆಯಲ್ಲಿ ಸಣ್ಣ ಪ್ರಮಾಣದ ಹೈನೋದ್ಯಮ ಆರಂಭ.
ಧನು: ತಾತ್ಕಾಲಿಕ ಹಿನ್ನಡೆ ಗಳಿಂದ ಮುಕ್ತರಾದ ಅನುಭವ. ಸಹೋದ್ಯೋಗಿ ಮಿತ್ರರೊಂದಿಗೆ ಕೃಷಿಕ್ಷೇತ್ರಕ್ಕೆ ಭೇಟಿ. ಸಮಾಜದ ಏಳಿಗೆ. ಪರಿಸರ ಸ್ವಚ್ಛತೆಯ ಕಾರ್ಯಗಳಲ್ಲಿ ಆಸಕ್ತಿ. ದೇವತಾನುಗ್ರಹ ಉತ್ತಮ. ಕೃಷಿ ಸಂಬಂಧಿ ಉದ್ಯಮ ಪ್ರಗತಿ.
ಮಕರ: ಕಾರ್ಯರಂಗದಲ್ಲಿ ಕೊನೆಯಿಲ್ಲದ ಒತ್ತಡ. ಮಕ್ಕಳಿಗೆ ಪಾಠೇತರ ಚಟುವ ಟಿಕೆಗಳಲ್ಲಿ ಒಳ್ಳೆಯ ಹೆಸರು. ಧಾರ್ಮಿಕ ಚಟುವಟಿಗಳಲ್ಲಿ ಆಸಕ್ತಿ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಅವಕಾಶ.
ಕುಂಭ: ಬಿಡುವಿಲ್ಲದ ಕಾರ್ಯ ಗಳ ನಡುವೆ ಪುಟ್ಟ ಮನೋರಂಜನೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು ಆಹ್ವಾನ. ಬಂಧುಗಳ ಮನೆಯಲ್ಲಿ ಧಾರ್ಮಿಕ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ.
ಮೀನ: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ಪೂರ್ಣ ವಿರಾಮ ಇರದು. ಅರ್ಧದಲ್ಲಿ ನಿಂತ ಕಾರ್ಯಗಳನ್ನು ಪುನರಾರಂಭಿಸಲು ನಿರ್ಧಾರ. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಕೀರ್ತಿ ವರ್ಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.