Horoscope: ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಆದಾಯ
Team Udayavani, Jan 2, 2024, 7:00 AM IST
ಮೇಷ: ಹೊಸ ವ್ಯಾವಹಾರಿಕ ವರ್ಷದ ಎರಡನೆಯ ದಿನ. ಹೊಸ ವಾತಾವರಣದಲ್ಲಿ ಕಾರ್ಯದ ಸುಖಾನುಭವ. ಅನಿರೀಕ್ಷಿತ ಜವಾಬ್ದಾರಿಗಳ ನಿರ್ವಹಣೆ. ಕೆಲವು ಬಗೆಯ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ. ಆಸ್ತಿ ವಿವಾದ ನ್ಯಾಯಾಲಯದಲ್ಲಿ ಜಯ.
ವೃಷಭ: ಎಚ್ಚರಿಕೆಯಿಂದ ನಡೆಯುವುದು ವಿವೇಕದ ಲಕ್ಷಣವಾಗಿದ್ದರೂ ಪ್ರತಿಯೊಂದರಲ್ಲೂ ಲೆಕ್ಕಾಚಾರ ಸಲ್ಲದು. ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ ಕುಂಠಿತ. ಉದ್ಯೋಗಸ್ಥರಿಗೆ ವೇತನ, ಭತ್ತೆ ಏರಿಕೆ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ.
ಮಿಥುನ: ಅವಕಾಶಗಳ ಆಯ್ಕೆಯಲ್ಲಿ ಗೊಂದಲ ಬೇಡ. ಗೆಳೆಯರೊಂದಿಗೆ ವಿಚಾರ ವಿನಿಮಯ. ಉದ್ಯೋಗದಲ್ಲಿ ಸ್ಥಾನಕ್ಕೆ ಸರಿಯಾದ ಗೌರವ ಹಾಗೂ ಪ್ರತಿಫಲ ಪಾಲುದಾರರೊಂದಿಗೆ ಸಮಾಲೋಚಿಸಿ ಉದ್ಯಮ ವಿಸ್ತರಣೆಗೆ ನಿರ್ಧಾರ.
ಕರ್ಕಾಟಕ: ಸಪ್ತಾಹದ ನಿಯೋಜಿತ ಕಾರ್ಯಗಳ ವೇಗ ವರ್ಧನೆ. ಮಗಳ ವಿವಾಹ ನಿಶ್ಚಯ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಆದಾಯ ವೃದ್ಧಿ. ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಆದಾಯ- ವೆಚ್ಚ ಸಮತೋಲನದ ಸಮಸ್ಯೆ.
ಸಿಂಹ: ನಿಯೋಜಿತ ಕಾರ್ಯಗಳು ಶೀಘ್ರ ಮುಕ್ತಾಯಗೊಂಡು ನೆಮ್ಮದಿ.ಉದ್ಯೋಗಸ್ಥರಿಗೆ ಮಾಮೂಲಿನಂತೆ ಕೆಲಸದ ಒತ್ತಡ. ಉದ್ಯಮದ ಹೊಸ ವಿಭಾಗ ಕಾರ್ಯಾರಂಭ. ಖಾಸಗಿ ಸಾರಿಗೆ ಸಂಸ್ಥೆಗಳ ನಿರ್ವಹಣೆ ವೆಚ್ಚ ಏರಿಕೆ.
ಕನ್ಯಾ: ಪರಿಣತ ಕುಶಲ ಕರ್ಮಿಗಳಿಗೆ ಉದ್ಯೋಗಕ್ಕೆ ಆಹ್ವಾನ. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಹಾಗೂ ದುರಸ್ತಿಗಾರರಿಗೆ ಒಳ್ಳೆಯ ದಿನ. ಸಂಜೆಯ ಹೊತ್ತು ಕುಟುಂಬದ ಸದಸ್ಯರ ಸೌಹಾರ್ದ ಸಮ್ಮಿಲನ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು.
ತುಲಾ: ಕೊಂಚ ಕಾಲದಿಂದ ಹದಗೆಟ್ಟಿದ್ದ ಆರೋಗ್ಯ ಸುಧಾರಣೆ. ಹೊಸ ಹುಮ್ಮಸ್ಸಿನೊಂದಿಗೆ ಉದ್ಯೋಗಕ್ಕೆ ಸೇರ್ಪಡೆ. ಮಾಲಕ – ನೌಕರರ ನಡುವೆ ಸಾಮರಸ್ಯ ವೃದ್ಧಿ. ನ್ಯಾಯಾಲಯದಲ್ಲಿರುವ ವಿವಾದ ಶೀಘ್ರ ತೀರ್ಮಾನದ ಭರವಸೆ.
ವೃಶ್ಚಿಕ: ಸರ್ವ ವಿಧಗಳಲ್ಲಿಯೂ ಸಮಾಧಾನದ ದಿನ. ಉದ್ಯೋಗಸ್ಥಾನದಲ್ಲಿ ಕೆಲವರಿಗೆ ಅಸೂಯೆ. ಉತ್ಪನ್ನಗಳ ಗುಣಮಟ್ಟ ಏರಿಕೆಯಿಂದ ವ್ಯಾಪಾರ ಸುಧಾರಣೆ. ಮಕ್ಕಳ ಉದ್ಯಮ ಅಭಿವೃದ್ಧಿ. ವಿದೇಶದಲ್ಲಿರುವ ಮಕ್ಕಳ ಆಗಮನ.
ಧನು: ಸ್ವಾಭಿಮಾನದ ಬದುಕಿಗೆ ಮಾರಕವಾದ ವಿದ್ಯಮಾನಗಳು. ಉದ್ಯೋಗಸ್ಥ ಪುರುಷರಿಗೆ ಜವಾಬ್ದಾರಿ ಬದಲಾವಣೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಯಂತ್ರೋದ್ಯಮಗಳಿಗೆ ಎದುರಾಗಿದ್ದ ಸಮಸ್ಯೆ ನಿವಾರಣೆ.
ಮಕರ: ಸಾತ್ವಿಕ- ತಾಮಸಿಕ ಶಕ್ತಿಗಳ ನಡುವಿನ ಹೋರಾಟ ನಿರ್ಣಾಯಕ ಹಂತಕ್ಕೆ. ನ್ಯಾಯದ ಪರವಾಗಿ ಹೋರಾಡುವವರ ತೇಜೋವಧೆಗೆ ಹೂಡಿದ ಸಂಚು ವಿಫಲ. ಉದ್ಯೋಗ ಸ್ಥಾನದ ಒತ್ತಡ ಕೊಂಚ ಸಡಿಲಿಕೆ. ವ್ಯಾಪಾರಿಗಳಿಗೆ ಉತ್ತಮ ಆದಾಯ.
ಕುಂಭ: ವಿವಿಧ ಮೂಲಗಳಿಂದ ಹೆಚ್ಚಾದ ಆದಾಯ. ಉದ್ಯೋಗದಲ್ಲಿ ಜವಾಬ್ದಾರಿಗಳ ನಿಯೋಜನೆ. ಹೊಸ ಕಟ್ಟಡದಲ್ಲಿ ವ್ಯವಹಾರ ಆರಂಭ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸರಕಾರಿ ನೌಕರಿ ಸಿಗುವ ಸಾಧ್ಯತೆ. ವ್ಯವಹಾರದ ಸಂಬಂಧ ಹತ್ತಿರದ ಊರಿಗೆ ಪ್ರಯಾಣ.
ಮೀನ: ತ್ವರಿತ ಗತಿಯಲ್ಲಿ ಸಾಗುತ್ತಿರುವ ನಿಯೋಜಿತ ಕಾರ್ಯಗಳು. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ.ಸೇವಾ ರೂಪದ ಕಾರ್ಯಗಳಿಗೆ ಪ್ರಶಂಸೆ. ಖಾದ್ಯ ಪದಾರ್ಥ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ವ್ಯವಹಾರ ವಿಸ್ತರಣೆಗೋಸ್ಕರ ವಾಹನ ಖರೀದಿ. ಉದ್ಯೋಗ ಅರಸುವ ಯುವಜನರಿಗೆ ಮಾರ್ಗದರ್ಶಕರಾಗುವ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.