ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಖರ್ಚುವೆಚ್ಚಗಳ ಬಗ್ಗೆ ಜಾಗ್ರತೆ ಅಗತ್ಯ!
Team Udayavani, Dec 25, 2020, 8:29 AM IST
25-12-2020
ಮೇಷ: ಆಗಾಗ ಮಾನಸಿಕ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿಯನ್ನು ಎದುರಿಸಬೇಕಾದೀತು. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಒದಗಿ ಬಂದರೂ ತಪ್ಪಿ ಹೋದೀತು. ಖರ್ಚುವೆಚ್ಚಗಳ ಬಗ್ಗೆ ಜಾಗ್ರತೆ.
ವೃಷಭ: ಶಾರೀರಿಕ ಆರೋಗ್ಯವನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಿರಿ. ಆರ್ಥಿಕ ಸ್ಥಿತಿಯು ಅಭಿವೃದ್ಧಿಗೊಳ್ಳುತ್ತಲೇ ಹೋಗುತ್ತದೆ. ಸಾರ್ವಜನಿಕವಾಗಿ ಹೆಚ್ಚು ಖ್ಯಾತಿಯನ್ನು ಪಡೆದು ಕೊಳ್ಳುವಿರಿ. ಗೌರವಾದರಗಳು ಲಭಿಸಲಿದೆ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಪ್ರಯತ್ನಬಲ ಹಾಗೂ ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಹಾಗೂ ಮೇಲ್ಪಂಕ್ತಿ ಯನ್ನು ಒದಗಿಸಿಕೊಡಲಿದೆ. ಮಿತ್ರವರ್ಗದವರ ಭೇಟಿಯಿಂದ ಸಂತಸ ವಾಗಲಿದೆ. ರಜಾಮಜ ಸಿಗಲಿದೆ.
ಕರ್ಕ: ವೃತ್ತಿ ಭವಿಷ್ಯವನ್ನು ನೀವೇ ನಿರ್ಧರಿಸುವ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಬದಲಾವಣೆಯ ಸಾಧ್ಯತೆ ಮುನ್ನಡೆಗೆ ನಾಂದಿ ಹಾಕಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ನಿಧಾನ ಗತಿಯಲ್ಲಿ ನಡೆಯಲಿದೆ.
ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹವಾಸ ದೋಷದಿಂದ ನಿರ್ಲಕ್ಷ್ಯ ತಳೆಯುವಂತಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಲೆಕ್ಕಚಾರದಲ್ಲಿ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಕಿರು ಪ್ರಯಾಣದ ಅಗತ್ಯವಿರುತ್ತದೆ.
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ದೊರಕಲಿದೆ. ಸಾಂಸಾರಿಕವಾಗಿ ಆಗಾಗ ಕಿರಿಕಿರಿ ಎನಿಸಿದರೂ ನಂತರ ಸಮಾಧಾನವಾಗಲಿದೆ. ಕೋಪ, ಉದ್ವೇಗ, ಸಿಡುಕನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿರಿ.
ತುಲಾ: ನಿರುದ್ಯೋಗಿಗಳಿಗೆ ಅವಕಾಶಗಳ ಬಗ್ಗೆ ಧನಾತ್ಮಕ ಉತ್ತರ ದೊರೆತು ಸಮಾಧಾನವಾಗಲಿದೆ.ಪ್ರೀತಿ, ಪ್ರೇಮಗಳ ಬಗ್ಗೆ ಹೆಚ್ಚು ತಲೆಬಿಸಿ ಬೇಡ. ಅದರಿಂದ ದೂರವಿದ್ದಷ್ಟು ಉತ್ತಮ. ಖರ್ಚುವೆಚ್ಚಗಳ ಬಗ್ಗೆ ಯೋಚಿಸಿರಿ.
ವೃಶ್ಚಿಕ: ವಿದ್ಯಾರ್ಥಿಗಳು ಸ್ನೇಹಿತವರ್ಗದವರ ಒಳಸಂಚಿಗೆ ಬಲಿಯಾಗಲಿದ್ದಾರೆ. ಜಾಗ್ರತೆ ವಹಿಸುವುದು. ಉದ್ಯೋಗ ಪ್ರಾಪ್ತಿಯಾಗಿ ಹಲವು ದಿನಗಳ ನಿರೀಕ್ಷೆಗೆ ಉತ್ತರ ದೊರೆಯಲಿದೆ. ಹೆಚ್ಚಿನ ಪರಿಶ್ರಮವು ಅಗತ್ಯವಿದೆ.
ಧನು: ಸಾಂಸಾರಿಕವಾಗಿ ಪತ್ನಿಯ ಮಾತಿಗೆ ಉತ್ತಮ ಸ್ಪಂದನೆ ಇರಲಿ. ವಾಹನ ಖರೀದಿ ಯಾ ಬದಲಾವಣೆಯ ಸಂಭವ ತೋರಿಬರಲಿದೆ. ಮಹಿಳೆಯರಿಗೆ ಋಣಾತ್ಮಕ ಚಿಂತೆಗಳು ಅವರಿಸಲಿದೆ. ಆತ್ಮವಿಶ್ವಾಸವಿರಲಿ.
ಮಕರ: ಆರ್ಥಿಕವಾಗಿ ಆದಾಯ ಎಷ್ಟು ಚೆನ್ನಾಗಿದ್ದರೂ ಖರ್ಚುವೆಚ್ಚಗಳು ಅಷ್ಟೇ ಕಂಡು ಬರಲಿದೆ. ಹೊಸ ಉದ್ಯೋಗದ ಅವಕಾಶವು ಒದಗಿ ಬಂದೀತು. ವಿದ್ಯಾರ್ಥಿಗಳಿಗೆ ಆಲಸ್ಯವು ಕಾಡಬಹುದು. ನಿಧಾನಗತಿ ಬಿಡಿರಿ.
ಕುಂಭ: ಅನಾವಶ್ಯಕ ಚಿಂತೆಗಳಿಂದ ಆರೋಗ್ಯದ ಗತಿಯನ್ನು ಕಂಗೆಡಿಸುವಿರಿ. ಹೂಡಿಕೆ, ಒಪ್ಪಂದದ ಬಗ್ಗೆ ತುಂಬಾ ಜಾಗ್ರತೆ ಮಾಡಿರಿ. ಅವಿವಾಹಿತರಿಗೆ ಸಮಸ್ಯೆಗಳು ಕಂಡುಬರಲಿದೆ. ಪ್ರಯತ್ನ ಬಲದ ಅಗತ್ಯವಿರುತ್ತದೆ.
ಮೀನ: ಚಿಂತಿತ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ಪೂರ್ಣವಾಗುತ್ತವೆ. ಸಾಂಸಾರಿಕವಾಗಿ ಮಾತಾಪಿತೃರಿಗೆ ತುಂಬಾ ಚಿಂತೆಯ ಸಮಯವಾಗಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗದ ಅವಕಾಶವು ಕೂಡಿಬಂದು ಸಂತಸ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.