Horoscope: ಈ ರಾಶಿಯವರಿಗೆ ಹಳೆಯ ಸಾಲ ಅನಿರೀಕ್ಷಿತವಾಗಿ ಕೈಗೆ ಬಂದ ಆನಂದ
Team Udayavani, Apr 8, 2024, 7:26 AM IST
ಮೇಷ: ದಿನವಿಡೀ ಸಂತೋಷದ ಅನುಭವ. ಸಮಗ್ರ ಸುಧಾರಣೆಯ ಬಗ್ಗೆ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ಅನುಭವ. ಹಿರಿಯ ನಾಗರಿಕರಿಗೆ ನೆಮ್ಮದಿ. ವ್ಯವಹಾರ ಸಂಬಂಧ ತಿರುಗಾಟ. ಗೃಹಿಣಿಯರಿಗೆ ಉಲ್ಲಾಸ.
ವೃಷಭ: ವಧೂ- ವರಾನ್ವೇಷಿಗಳಿಗೆ ಶುಭವಾರ್ತೆ. ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ವ್ಯಾಪಾರಿಗಳು, ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರಿಗೆ ಕೆಲಸ ಮುಗಿಸುವ ತರಾತುರಿ.
ಮಿಥುನ: ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಸ್ವತಂತ್ರ ವ್ಯವಹಾರದ ಯೋಚನೆ ಬಿಟ್ಟು ಬಿಡಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗಂಥ ಅಧ್ಯಯನದಲ್ಲಿ ಆಸಕ್ತಿ.
ಕರ್ಕಾಟಕ: ಮಿಶ್ರಫಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ನ್ಯಾಯಾಲಯ ವ್ಯವಹಾರದಲ್ಲಿ ವಿಳಂಬ.
ಸಿಂಹ: ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಅನುಭವ. ಹಳೆಯ ಸಾಲ ಅನಿರೀಕ್ಷಿತವಾಗಿ ಕೈಗೆ ಬಂದ ಆನಂದ. ಅಧಿಕಾರಿಗಳ ಸಕಾಲಿಕ ಸ್ಪಂದನದಿಂದ ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ದಾಂಪತ್ಯ ಸುಖ ಉತ್ತಮ.
ಕನ್ಯಾ: ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ.
ತುಲಾ: ದೇವತಾ ಕಾರ್ಯದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ. ಪರಿಸರ ಸ್ವತ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೃಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ ಹೊಂದುವಿರಿ. ವಸ್ತ್ರಾಭರಣ ಖರೀದಿ ಸಂಭವ.ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ.
ಧನು: ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ ನಿರೀಕ್ಷೆ. ಉಳಿತಾಯ ಯೋಜ ನೆಗಳ ಏಜೆಂಟರಿಗೆ ಆದಾಯ ವೃದ್ಧಿ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ. ಗೃಹಿಣಿಯರ ಸ್ವೋ ದ್ಯೋಗ ಯೋಜನೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆ.
ಮಕರ: ಆದಾಯ ವೃದ್ಧಿಯ ಪ್ರಯ ತ್ನವು ಫಲಿಸುವ ಕಾಲ ಸನ್ನಿಹಿತ. ಕಾರ್ಯ ರಂಗದಲ್ಲಿ ಸಹನೆಗೆ ದಕ್ಷತೆಯಷ್ಟೇ ಪ್ರಾಧಾನ್ಯ. ಮಕ್ಕಳ ಭವಿಷ್ಯ ಚಿಂತನೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶಸ್ತ್ರವೈದ್ಯರಿಗೆ ಕೀರ್ತಿ.
ಕುಂಭ: ಸೇವಾಕಾರ್ಯಗಳಿಂದ ಜನ ಪ್ರಿಯತೆ ವೃದ್ಧಿ ಉದ್ಯೋಗದಲ್ಲಿ ಪದೋ ನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ಸ್ಥಿರಾಸ್ತಿ ಖರೀದಿ ಪ್ರಯತ್ನದಲ್ಲಿ ಮುನ್ನಡೆ.
ಮೀನ: ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ಪರಿಣತರೊಬ್ಬರ ಹಠಾತ್ ಭೇಟಿಯಿಂದ ಲಾಭ. ಹಿರಿಯ ಬಂಧುಗಳಿಗೆ ನೆರವಾಗುವ ಸಂದರ್ಭ. ಎಲ್ಲರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ
Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.