![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 4, 2024, 7:33 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ. ಉದ್ಯಮದಲ್ಲಿ ಉಭಯ ಪಕ್ಷಗಳಿಗೂ ಹುಮ್ಮಸ್ಸು. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ.
ವೃಷಭ: ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ನೀರಾವರಿಗೆ ಪರ್ಯಾಯ ವ್ಯವಸ್ಥೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಮತ್ತೆ ಪ್ರಯತ್ನ. ಮಾತಿನಲ್ಲಿ ಮೃದುತ್ವ ಇರಲಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.
ಮಿಥುನ: ಪಟ್ಟುಹಿಡಿದ ಪ್ರಯತ್ನದಿಂದ ಯಶಸ್ಸು. ಉದ್ಯೋಗದಲ್ಲಿ ಕಾರ್ಯ ಸಾಮರ್ಥ್ಯ ಪ್ರದರ್ಶನ. ಉದ್ಯಮ ಅಭಿವೃದ್ಧಿಗೆ ತಾತ್ಕಾಲಿಕ ತಡೆ. ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ.
ಕರ್ಕಾಟಕ: ಕಾಲಕಳೆದಂತೆ ಉದ್ಯೋಗದಲ್ಲಿ ಉನ್ನತಿ. ಅಕಸ್ಮಾತ್ ಧನಾಗಮ ಯೋಗ.ಕೃಷ್ಯುತ್ಪನ್ನ ಮಾರಾಟದಿಂದ ತೃಪ್ತಿಕರ ಲಾಭ. ಧಾರ್ಮಿಕ ಕ್ರಿಯೆಯಿಂದ ಇಷ್ಟಾರ್ಥ ಸಿದ್ಧಿ. ಎಲ್ಲರಿಗೂ ಉತ್ತಮ ಆರೋಗ್ಯ.
ಸಿಂಹ: ಕಾರ್ಯರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಶಕ್ತಿಯ ಬಳಕೆ. ಉದ್ಯೋಗ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಮನ್ನಣೆ. ಎಲ್ಲೆಯಿಲ್ಲದ ಉದ್ಯಮದ ಪ್ರಗತಿ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ.
ಕನ್ಯಾ: ವೃತ್ತಿಯಲ್ಲಿ ಸ್ಥಿರವಾಗಿ ಸ್ಥಾಪನೆ. ಸಹೋ ದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಸಣ್ಣ ಉದ್ಯಮಿ ಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಕನ್ಯೆಯ ಶರ್ತದಿಂದ ವಿವಾಹ ಪ್ರಯತ್ನ ಭಂಗ.
ತುಲಾ: ನಿಸ್ಸಂಕೋಚ ನಡವಳಿಕೆಯಿಂದ ಗೌರವ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ವ್ಯವಹಾರ ಸಂಬಂಧ ಪೂರ್ವದ ಕಡೆಗೆ ಸಣ್ಣ ಪ್ರಯಾಣ ಸಂಭವ.
ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಅನಿಶ್ಚಿತ ಪರಿಸ್ಥಿತಿ. ಉದ್ಯಮಿಗಳಿಗೆ ಎದುರಾಳಿಗಳಿಂದ ಸಹಜ ಪೈಪೋಟಿ. ಸರಕಾರಿ ಅಧಿಕಾರಿಗಳಿಗೆ ದುಷ್ಟ ರಾಜಕಾರಣಿಗಳ ಕಾಟ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ.
ಧನು: ನೇರ ಮಾರ್ಗದಲ್ಲಿ ಸಂಪಾದನೆ. ಸಹಕಾರಿಗಳಿಂದ ಸಂಪೂರ್ಣ ಸಹಕಾರ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆಯಲ್ಲಿ ಪ್ರಗತಿ. ಮಹಿಳೆಯರ ನೇತೃತ್ವದ ಖಾದ್ಯವಸ್ತು ಘಟಕಕ್ಕೆ ಅಭೂತಪೂರ್ವ ಲಾಭ.
ಮಕರ: ಉದ್ಯೋಗ ಸ್ಥಾನದಲ್ಲಿ ಸಕಾಲದಲ್ಲಿ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಪ್ರಾಪ್ತ ವಯಸ್ಕ ಹುಡುಗರಿಗೆ ವಿವಾಹ ಯೋಗ.
ಕುಂಭ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ.
ಮೀನ: ಸಪ್ತಾಹದ ಆರಂಭದಲ್ಲೇ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನ ಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕೃಷಿಭೂಮಿ ಕೊಳ್ಳಲು ಪ್ರಯತ್ನ. ಉದ್ಯೋಗ ಅರಸುತ್ತಿರುವವರಿಗೆ ಮಾರ್ಗದರ್ಶನ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.