Horoscope: ಈ ರಾಶಿಯವರ ಉದ್ಯೋಗ, ವ್ಯವಹಾರಗಳಿಗೆ ಎದುರಾಗಿದ್ದ ಅಡಚಣೆ ದೂರವಾಗಲಿದೆ
Team Udayavani, Jul 25, 2024, 7:30 AM IST
ಮೇಷ: ಉದ್ಯೋಗ ಅರಸಿ ಬಂದವರಿಗೆ ಮಾರ್ಗದರ್ಶನ. ಅವಶ್ಯವುಳ್ಳವರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ಬಂಧುವರ್ಗದಲ್ಲಿ ಶುಭಕಾರ್ಯ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ. ಎಲ್ಲ ವ್ಯವಹಾರಗಳಲ್ಲಿ ಮುನ್ನಡೆ.
ವೃಷಭ: ಎಲ್ಲ ರಂಗಗಳಲ್ಲೂ ನಿಮ್ಮ ಪ್ರಭಾವ ಕಾಣಲಿದೆ. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ. ವಸ್ತ್ರ, ಆಭರಣ, ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭ. ಸಂಪಾದನೆಯ. ಹೊಸ ಮಾರ್ಗ ಅನ್ವೇಷಣೆ. ದೇವತಾರಾಧನೆಯಿಂದ ಶುಭಫಲ ನಿರೀಕ್ಷೆ
ಮಿಥುನ: ಇಚ್ಛಾಶಕ್ತಿ ವೃದ್ಧಿಗೆ ತೀವ್ರ ಸಾಧನೆ. ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ. ವಧೂವರಾನ್ವೇಷಿಗಳಿಗೆ ಅನುಕೂಲ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ. ಸತ್ಕಾರ್ಯಕ್ಕೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ.
ಕರ್ಕಾಟಕ: ಹೊಸ ಜವಾಬ್ದಾರಿಗಳ ನಿರ್ವ ಹಣೆಯಲ್ಲಿ ಯಶಸ್ಸು. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಸಾಂತ್ವನ ಹೇಳುವ ಅವಕಾಶ. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ ಒದಗಲಿದೆ. ಸಂಸಾರದಲ್ಲಿ ಸಾಮರಸ್ಯ, ಪ್ರೀತಿ ವೃದ್ಧಿ
ಸಿಂಹ: ಉದ್ಯೋಗ, ವ್ಯವಹಾರಗಳಿಗೆ ಎದುರಾಗಿದ್ದ ಅಡಚಣೆ ದೂರ. ಪತಿ- ಪತ್ನಿಯರಿಂದ ಪರಸ್ಪರ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಮನೆಯಲ್ಲಿ ಸಂತಸದ ವಾತಾವರಣ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ ಸಂಭವ.
ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಸಮಾ ಧಾನ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಅನುರಾಗ ವೃದ್ಧಿ.ವಿದೇಶದಲ್ಲಿರುವ ಮಿತ್ರನ ಆಗಮನ.
ತುಲಾ: ದೈಹಿಕ ಆರೋಗ್ಯ ಸುಧಾರಣೆ. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈವಾಹನ ದುರಸ್ತಿಗೆ ಧನವ್ಯಯ. ಗೃಹೋದ್ಯಮಗಳಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನಗಳಿಗೆ ಸಮಯ ನೀಡಿಕೆ ವಿಹಿತ.
ವೃಶ್ಚಿಕ: ಉದ್ಯೋಗ ರಂಗದಲ್ಲಿ ಅಪರಿಮಿತ ಸಾಧನೆ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿ ಯರಿಗೆ ಸಣ್ಣ ಉದ್ಯಮ ಬೆಳೆಸಲು ಆಸಕ್ತಿ. ಮಕ್ಕಳಿಂದ ಮಹತ್ಸಾಧನೆ ನಿರೀಕ್ಷೆ.
ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ.
ಮಕರ: ಮೃದು ಮಾತಿನಿಂದ ಅನಾ ಯಾಸವಾಗಿ ಕಾರ್ಯಸಾಧನೆ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ನಿರೀಕ್ಷಿತ ಫಲ ಪ್ರಾಪ್ತಿ. ಸಂಸಾರದ ಕೆಲಸಕ್ಕಾಗಿ ಸಣ್ಣ ಪ್ರವಾಸ.
ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋ ಪಯೋಗಿ ಯೋಜನೆಗಳಿಗೆ ನೆರವು, ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳಿಗೆ ಹಿರಿಯರ ಪ್ರೋತ್ಸಾಹ ಲಭ್ಯ.
ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರ ತೊಂದರೆ ನಿವಾರಣೆ. ಉದ್ಯೋಗ ಬದಲಾವಣೆಗೆ ಪ್ರಯತ್ನ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.