ನಿಮ್ಮ ಇಂದಿನ ಗ್ರಹಬಲ
Team Udayavani, Dec 30, 2020, 7:29 AM IST
30-12-2020
ಮೇಷ: ಆರ್ಥಿಕ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿರಿ. ಆರ್ಥಿಕವಾಗಿ ಏರಿಳಿತ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಅಸಮಾಧಾನವಿದೆ.
ವೃಷಭ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಪ್ರಾಥಮಿಕವಾಗಿ ವೈದ್ಯರ ಸಲಹೆ ಪಡೆಯಿರಿ. ವ್ಯಾಪಾರ, ಉದ್ಯೋಗದಲ್ಲಿ ಹಿನ್ನೆಡೆ ಅನುಭವಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಮುಗ್ಗಟ್ಟು ಏರ್ಪಡಲಿದೆ. ಆತ್ಮವಿಶ್ವಾಸವಿರಲಿ.
ಮಿಥುನ: ಅನುಕೂಲವಾದ ಸಮಯವು ನಿಮ್ಮ ಮುಂದಿದೆ. ನಿಮ್ಮ ತಾಳ್ಮೆಗೆ ಸವಾಲು ಎದುರಾಗಲಿದೆ. ಕೆಲವು ವಿಚಾರದಲ್ಲಿ ಹಿನ್ನಡೆ ಕಂಡುಬಂದರೂ ಕೊನೆಗೆ ಜಯ ನಿಮ್ಮದು. ವ್ಯಾಪಾರ, ವ್ಯವಹಾರದಲ್ಲಿ ಒತ್ತಡ ಕಂಡುಬಂದೀತು.
ಕರ್ಕ: ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡುಬರಲಿದೆ. ಮನೆಯಲ್ಲಿ ಶುಭಕಾರ್ಯಗಳು ಜರಗಲಿದೆ. ಆರೋಗ್ಯವು ಉತ್ತಮವಾಗಿರುವುದು. ಅತಿಯಾದ ಪರಿಶ್ರಮದಿಂದ ಆರ್ಥಿಕ ಅಭಿವೃದ್ಧಿ ಉಂಟಾಗಲಿದೆ.
ಸಿಂಹ: ಪ್ರಯತ್ನ ಮಾಡುವ ಮುನ್ನವೇ ಫಲದ ಚಿಂತೆ ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು ಅತೀಯಾದ ಶ್ರದ್ಧೆಯಿಂದ ಮಾಡಿರಿ. ನಿಮಗೆ ಫಲ ಸಿಗಲಿದೆ. ಕೆಲಸ ಕಾರ್ಯಗಳು ನಿಧಾನವಾಗಿ ಮಂದಗತಿಯಲ್ಲಿ ಸಾಗಲಿದೆ.
ಕನ್ಯಾ: ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣರಾಗುವಿರಿ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಮುಂಜಾಗ್ರತೆ ಅತ್ಯಗತ್ಯವಿದೆ. ಮೈಮರೆತಲ್ಲಿ ಬಹು ಬೆಲೆ ತೆರಬೇಕಾದೀತು. ಆರ್ಥಿಕ ಸ್ಥಿತಿಯು ಪೂರಕವಾಗಿರುವುದಿಲ್ಲ. ಜಾಗ್ರತೆ.
ತುಲಾ: ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ತಣ್ಣಗಾಗಿದ್ದರೆ ಉತ್ತಮ. ವಿನಾಕಾರಣ ಓಡಾಟದಿಂದ ಆಯಾಸವಾಗಲಿದೆ. ಆನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ವ್ಯವಹಾರಗಳು ಅಡ್ಡಿ, ಆತಂಕವಿಲ್ಲದೆ ಮುನ್ನಡೆ ಕಾಣಲಿದೆ.
ವೃಶ್ಚಿಕ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆಯನ್ನು ಕಾಣುವಿರಿ. ಯಶಸ್ಸು ನಿಮಗೆ ದೊರಕಲಿದೆ. ಕುಟುಂಬದಲ್ಲಿ ಸಂತೋಷ ನೆಲೆ ನಿಲ್ಲುವುದು. ವಿಶೇಷ ಲಾಭ ಹೊಂದುವಿರಿ. ಅಪರಿಚಿತರ ಆಗಮನದಿಂದ ತೊಂದರೆ ಇದೆ.
ಧನು: ಸಮಯ ಪೂರಕವಾಗಿರುವುದರಿಂದ ಕೆಲಸ ಕಾರ್ಯದಲ್ಲಿ ಪ್ರಗತಿ ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಪ್ರಗತಿಯ ಹಾದಿ ಸುಗಮವಾಗಿರುತ್ತದೆ. ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದೆ.
ಮಕರ: ಒಂದಲ್ಲಾ ಒಂದು ಕಾರಣದಿಂದ ಒತ್ತಡ ಆವರಿಸುವುದರಿಂದ ಮನಸ್ಸು ಅಶಾಂತಿಯೆಡೆಗೆ ಮುಖ ಮಾಡಲಿದೆ. ನಿಮ್ಮ ಅವಸರ ಬುದ್ಧಿಯೇ ನಿಮಗೆ ಯಾತನೆ ನೀಡಲಿದೆ. ನಿರ್ಲಕ್ಷ್ಯವು ಸಲ್ಲದು. ಸಹನೆ ಇರಲಿ.
ಕುಂಭ: ಸಮಯ ಅಷ್ಟೊಂದು ಉತ್ತಮ ವಲ್ಲದಿದ್ದರೂ ಒತ್ತಡ, ಬಳಲಿಕೆಯು ತುಂಬಾ ಕಂಡುಬರುವುದು. ವಿನಾ ಕಾರಣ ಓಡಾಟವು ಹೆಚ್ಚು ಆಯಾಸವನ್ನು ನೀಡಲಿದೆ. ಸಂತಾನಾಪೇಕ್ಷಿಗಳಿಗೆ ವ್ಯಾಕುಲತೆಯು ಕಾಡಲಿದೆ.
ಮೀನ: ನಿಮ್ಮ ಪ್ರಯತ್ನ ಬಲಕ್ಕೆ ಹಲವರ ಸಹಕಾರದಿಂದ ಫಲ ದೊರಕಲಿದೆ. ಯಾರೊಂದಿಗೂ ಕಾರಣವಿಲ್ಲದೆ ವಾಗ್ವಾದಕ್ಕೆ ಇಳಿಯುವುದು ಅನಗತ್ಯವಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಮುನ್ನಡೆ ಇದ್ದರೂ ಖರ್ಚು ಅಧಿಕ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.