Horoscope: ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ
Team Udayavani, Sep 2, 2024, 7:46 AM IST
ಮೇಷ: ಹೊಸ ಸಪ್ತಾಹದ ಮೊದಲ ದಿನ ಅದೃಷ್ಟವನ್ನು ತರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ಉದ್ಯಮದ ನೌಕರರಿಗೆ ವಿಶೇಷ ಅನುಕೂಲತೆಗಳು. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ.
ವೃಷಭ: ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ.. ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ. ಸರಕಾರಿ ಯೋಜನೆಗಳ ಸೌಲಭ್ಯಗಳ ಬದಲು ಆತ್ಮನಿರ್ಭರತೆಗೆ ಪ್ರಾಶಸ್ತ್ಯ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ.
ಮಿಥುನ: ಧೈರ್ಯ, ಸಾಹಸ, ಪ್ರಾಮಾಣಿಕತೆಗೆ ಜಯ. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ ನೆರವು ಪ್ರಾಪ್ತಿ. ವಸ್ತ್ರ , ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯಾಪಾರಿಗಳ ಮನೆಯಲ್ಲಿ ಸಂತೋಷದ ವಾತಾವರಣ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.
ಕರ್ಕಾಟಕ: ಸಮಗ್ರ ಪ್ರಗತಿಯತ್ತ ದಾಪುಗಾಲು. ಉದ್ಯೋಗದಲ್ಲಿ ಕ್ರಮಶ: ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ. ಆಸ್ತಿ ಪಾಲು ಮಾತುಕತೆಯಲ್ಲಿ ಭಾಗಿ.
ಸಿಂಹ: ಹಿಂದಡಿಯಿಡದೆ ಮುನ್ನಡೆಯುವ ಪ್ರವೃತ್ತಿಗೆ ಜಯ. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಹುದ್ದೆ . ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ..
ಕನ್ಯಾ: ಸ್ಥಿರ ಉದ್ಯೋಗದ ಯೋಗ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಸಣ್ಣ ಪ್ರಯಾಣ ಸಂಭವ.
ತುಲಾ: ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಗುರುಸ್ಥಾನ ದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ಹಿತಶತ್ರುಗಳ ಪರಾಭವ. ದೇವತಾ ಸಾನ್ನಿಧ್ಯ ದರ್ಶನ. ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳಿಗೆ ಯಶಸ್ಸು. ಮಕ್ಕಳ ಹೊಸ ಉದ್ಯಮ ಯೋಜನೆ ಸಾಕಾರ.
ಧನು: ಕಠಿನ ಮಾರ್ಗದಲ್ಲಿ ಸಂಪಾದನೆ ವೃದ್ಧಿ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ.ಖಾದ್ಯ ಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ.
ಮಕರ: ಉದ್ಯೋಗ ಸ್ಥಾನದಲ್ಲಿ ನವೀಕರಣ ಕಾರ್ಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ. ಅರ್ಹತೆಗೆ ಸರಿಯಾದ ಉದ್ಯೋಗ ಅನ್ವೇಷಣೆ.
ಕುಂಭ: ಕುಗ್ಗದ ಹುರುಪಿನೊಂದಿಗೆ ಹೊಸ ಮಾಸದ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ, ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ.
ಮೀನ: ತಿಂಗಳುಗಳು ಉರುಳಿದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ.ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
New Airstrip: ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣಕ್ಕೆ ಜಮೀನು ತೊಡಕು!
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.