Daily horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ
Team Udayavani, Feb 19, 2024, 7:00 AM IST
ಮೇಷ: ಅರಿವಿಗೆ ಬಂದಿರುವ ವಿಷಯಗಳಲ್ಲಿ ಪ್ರೌಢಿಮೆ ಹೊಂದುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಎಳೆಯರಿಗೆ ಮಾರ್ಗದರ್ಶನ ಮುಂದುವರಿಕೆ. ಪೂರಕ ಆದಾಯದ ಮೂಲ ಅನ್ವೇಷಣೆ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು.
ವೃಷಭ: ಆರಂಭಿಸಿರುವ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಬಂಧುಗಳ ಕಡೆಯಿಂದ ಶುಭ ವಾರ್ತೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ.
ಮಿಥುನ: ಸಾಹಿತ್ಯಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ. ಉದ್ಯೋಗಸ್ಥರಿಗೆ ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ. ಕೃಷಿಭೂಮಿ ಖರೀದಿ ಪ್ರಕ್ರಿಯೆ ಆರಂಭ. ಪರಿಸರ ರಕ್ಷಣೆಯಲ್ಲಿ ಆಸಕ್ತಿ.
ಕರ್ಕಾಟಕ: ಸಂತೃಪ್ತಿಯ ಮನೋಭಾವವನ್ನು ಬೆಳೆಸಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ.ಸ್ವಂತ ಉದ್ಯಮ ತ್ವರಿತ ಗತಿಯಲ್ಲಿ ಪ್ರಗತಿ. ವ್ಯಾಪಾರಿಗಳಿಗೆ ಅಸೂಯಾಪರ ಶತ್ರುಗಳ ಬಾಧೆ. ಸ್ವಪ್ರಯತ್ನದಿಂದ ಆರೋಗ್ಯವೃದ್ಧಿ.
ಸಿಂಹ: ಕರ್ತವ್ಯ ಪ್ರಜ್ಞೆಗೆ ಪ್ರಾಧಾನ್ಯ ನೀಡುವುದರಿಂದ ವಿಜಯದ ಭರವಸೆ. ಉದ್ಯೋಗ ಸ್ಥಾನದಲ್ಲಿ ವಿಶೇಷ ಮನ್ನಣೆ. ಉದ್ಯಮದ ಪ್ರಗತಿಯ ವೇಗವರ್ಧನೆ ಆರಂಭ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ.
ಕನ್ಯಾ: ಸ್ವಂತದ ಏಳಿಗೆಯ ದಿನಗಳ ಆರಂಭ. ಉದ್ಯೋಗದಲ್ಲಿ ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿರುವುದರಿಂದ ಹಿತ. ಸಣ್ಣ ಪ್ರಮಾಣದ ಕೃಷಿಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕಾರ.
ತುಲಾ: ದಂಪತಿಗಳ ನಡುವೆ ಅನುರಾಗ ವೃದ್ಧಿ. ಉದ್ಯೋಗದಲ್ಲಿ ಜ್ಞಾನ ಮತ್ತು ಪ್ರತಿಭೆಗೆ ಮನ್ನಣೆ. ದೇವತಾ ಪ್ರಾರ್ಥನೆಯಿಂದ ಅನುಕೂಲ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳಿಗೆ ಸಂಗೀತ ಕಲಿಕೆಯಲ್ಲಿ ಆಸಕ್ತಿ. ಬಂಗಾರದ ಅಂಗಡಿಗೆ ಭೇಟಿ.
ವೃಶ್ಚಿಕ: ಹವಾಮಾನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಕೊಂಚ ಹಿನ್ನಡೆ. ಉದ್ಯೋಗ ನಿರ್ವಹಣೆ ಮಂದಗತಿಯಲ್ಲಿ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಆತಂಕ. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ ಸುಯೋಗ.
ಧನು: ಜೀವನದಲ್ಲಿ ಒಳ್ಳೆಯ ಕಾಲ ಆರಂಭ. ಸಹೋದ್ಯೋಗಿಗಳಿಂದ ಪ್ರೀತಿ, ಗೌರವದ ವರ್ತನೆ. ಸ್ವಂತದ ಚಿಕ್ಕ ಉದ್ಯಮದ ಬೆಳವಣಿಗೆ ಮುಂದುವರಿಕೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಅವಕಾಶ . ಗೋಚರ. ಗೃಹಿಣಿಯರ ಸೊÌàದ್ಯೋಗ ಯೋಜನೆ ಗಳ ಪ್ರಗತಿ.
ಮಕರ: ಅಹಿತಕರ ಅನುಭವಗಳಿಂದ ವಿಚಲಿತರಾಗದಿರಿ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ.
ಕುಂಭ: ಹೆಚ್ಚು ಕಡಿಮೆ ಮಿಶ್ರಫಲಗಳ ದಿನ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು. ಸಂಸಾರದ ಜವಾಬ್ದಾರಿ ನಿರ್ವಹಣೆ ಸುಗಮ. ಕೃಷಿಯಲ್ಲಿ ಹೊಸ ಪ್ರಯೋಗ. ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು.
ಮೀನ: ವಿಶೇಷ ಭಗವದನುಗ್ರಹದ ಅನುಭವ. ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ ವ್ಯಕ್ತಿಗಳಿಂದ ಸಕಾಲದಲ್ಲಿ ಸಹಾಯ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನ.ಉಪಕೃತರಿಂದ ಹರ್ಷ ಪ್ರಕಟನೆ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.