Daily Horoscope: ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ
Team Udayavani, Dec 18, 2023, 7:35 AM IST
ಮೇಷ: ಸಪ್ತಾಹದ ಆರಂಭದಲ್ಲಿ ಹಲವು ಶುಭಸೂಚನೆಗಳು. ಉದ್ಯೋಗ ಸ್ಥಾನದಲ್ಲಿ ಕೆಲಸಗಳ ವಿಕೇಂದ್ರೀಕರಣ. ಉದ್ಯಮದ ಮುನ್ನಡೆಗೆದುರಾದ ಅಡ್ಡಿಗಳು ದೂರ. ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ. ಆರೋಗ್ಯ ಉತ್ತಮ.
ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ. ಸರಕಾರಿ ನೌಕರರಿಗೆ ವರ್ಗಾವಣೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಗೃಹೋದ್ಯಮದ ಉತ್ಪನ್ನಗಳಿಂದ ಆದಾಯ ವೃದ್ಧಿ.
ಮಿಥುನ: ವಿದ್ಯೆಗೆ ತಕ್ಕ ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ತರುವ ಯೋಜನೆ ಗಳು. ಸರಕಾರಿ ನೌಕರರಿಗೆ ಅಪೇಕ್ಷಾನುಸಾರ ವರ್ಗಾವಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ವಿದ್ಯಾರ್ಜನೆ ಆಸಕ್ತಿ ಸುಧಾರಣೆಗೆ ಪ್ರಯತ್ನ.
ಕರ್ಕಾಟಕ: ಆವಶ್ಯಕತೆಯಿರುವ ಬಂಧುಗಳಿಗೆ ಧನಸಹಾಯ.ಉದ್ಯೋಗದಲ್ಲಿ ವೇತನ ಏರಿಕೆ.ಉದ್ಯಮದ ನೌಕರ ವರ್ಗಕ್ಕೆ ಮಾಲಕರ ಪ್ರೋತ್ಸಾಹದ ನಡೆಯಿಂದ ಹರ್ಷ. ಹೊಸ ನೌಕರರ ಸೇರ್ಪಡೆ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗಳ ಪುನರಾರಂಭ. ಮೇಲಧಿಕಾರಿಗಳಿಗೆ ತೃಪ್ತಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ಏರಿಕೆ. ಯಂತ್ರಗಳ ಬಿಡಿ ಭಾಗ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಹಿರಿಯರ ಸಹಿತ ಎಲ್ಲರ ಆರೋಗ್ಯ ಉತ್ತಮ.
ಕನ್ಯಾ: ಸಂಕಲ್ಪ ಶಕ್ತಿಯೊಡಗೂಡಿದ ಕ್ರಿಯಾಶೀಲತೆಗೆ ಯಾವ ಬಾಧೆಯೂ ತಟ್ಟಲಾರದು. ಉದ್ಯೋಗದಲ್ಲಿ ಕಾರ್ಯವ್ಯಾಪ್ತಿ ವಿಸ್ತರಣೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ.
ತುಲಾ: ಹೆಚ್ಚಿದ ಮನೋಬಲ ದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಹೊಂದಾಣಿಕೆ. ಹಿರಿಯರ ಆರೋಗ್ಯದಲ್ಲಿ ಗಣನೀಯ ಸುಧಾರಣೆ. ಹಿಂದಿನ ಸಹಪಾಠಿಗಳ ಭೇಟಿ.
ವೃಶ್ಚಿಕ: ಸಂತೋಷ ಪಡಬೇಕಾದ ಅನಿರೀಕ್ಷಿತ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಮೆಚ್ಚುಗೆ ಪ್ರಕಟನೆ. ಗೃಹೋದ್ಯಮದ ಉತ್ಪನ್ನದಿಂದ ಆಕರ್ಷಿತರಾದ ಗ್ರಾಹಕರು. ಮಕ್ಕಳ ಉದ್ಯಮಕ್ಕೆ ಅಭೂತ ಪೂರ್ವ ಯಶಸ್ಸು. ಕೃಷಿಕ್ಷೇತ್ರಕ್ಕೆ ಕಾಲಿಡಲು ಕಿರಿಯರಿಗೆ ಪ್ರೋತ್ಸಾಹ.
ಧನು: ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನ ದಲ್ಲಿ ಬದಿಗೆ ಸರಿದ ಸವಾಲು ಗಳು. ಸಮಾಜದ ಏಳಿಗೆಯ ಕಾರ್ಯ ಕ್ರಮಗಳಲ್ಲಿ ಭಾಗಿ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳಲ್ಲಿ ಆಸಕ್ತಿ. ಸಂಗಾತಿಯ ಆರೋಗ್ಯದ ಕುರಿತು ಆತಂಕ ನಿವಾರಣೆ.
ಮಕರ: ಮನೋನಿಯಂತ್ರಣ ದಿಂದ ಪರಿಸ್ಥಿತಿಯ ಸ್ವರೂಪ ಬದಲಾವಣೆ. ವೃತ್ತಿ ಸ್ಥಾನ ದಲ್ಲಿ ಸಹಜವಾದ ಒತ್ತಡಗಳು. ಸಂಸಾರದ ಜವಾಬ್ದಾರಿ ನಿರ್ವಹಣೆಗಾಗಿ ಹೆಚ್ಚುವರಿ ಆದಾಯ ಹೊಂದುವ ಪ್ರಯತ್ನ. ಕರಕುಶಲ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ.
ಕುಂಭ: ಉದ್ಯೋಗದಲ್ಲಿ ನಿತ್ಯ ಬಂದೆರಗುವ ಹೊಸ ಹೊಣೆ ಗಾರಿಕೆಗಳು. ಊರಿನಲ್ಲಿರುವ ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ಯೋದ್ಯೋಗ ಯೋಜನೆಗಳು ಯಶಸ್ವಿ.
ಮೀನ: ಮಂದಗತಿಯ ನಡೆಯ ಅವಧಿ ಮುಗಿದು ಪ್ರಗತಿಗೆ ವೇಗ ವರ್ಧನೆ. ವೃತ್ತಿಪರರಿಂದ ನಿರೀಕ್ಷೆ ಮೀರಿದ ಸಹಕಾರ. ಸರಕಾರಿ ಇಲಾಖೆ ಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ಕುಟುಂಬದ ಹಿರಿಯರ ಕ್ಷೇಮದಲ್ಲಿ ಆಸಕ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.