ಮಂಗಳವಾರದ ರಾಶಿಫಲ : ಇಂದು ನಿಮ್ಮ ಗ್ರಹಬಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ
Team Udayavani, May 4, 2021, 7:20 AM IST
ಮೇಷ: ಸಾಮಾಜಿಕವಾಗಿ ಅಂತಸ್ತಿನ ನೆಲೆಯಲ್ಲಿ ಬಹು ಎತ್ತರಕ್ಕೆ ನಿಮ್ಮನ್ನು ಏರಿಸಲಿದ್ದಾನೆ. ರಿಯಲ್ ಎಸ್ಟೇಟ್, ಅಟೋಮೊಬೈಲ್ ಹಾಗೂ ಹೊಟೇಲ್ ಉದ್ಯಮದವರಿಗೆ ಮುಟ್ಟಿದ್ದೆಲ್ಲಾ ಉನ್ನತಿಗೆ ತರುವ ಕಾಲವಾಗಿದೆ. ಶುಭವಿದೆ.
ವೃಷಭ: ಸಾಂಸಾರಿಕವಾಗಿ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯ ಚಟುವಟಿಕೆಯ ಸಂಭ್ರಮವಿದ್ದೀತು. ಕಷ್ಟಗಳನ್ನು ಎದುರಿಸುವ ಕಾಲವಾಗಿರುತ್ತದೆ.
ಮಿಥುನ: ಕಷ್ಟಗಳನ್ನು ಎದುರಿಸುವ ಮಂದಿಗೆ ಯಶಸ್ಸಿನ ಕಾಲವಿದು. ಆದರೂ ಹೊಂದಾಣಿಕೆಯು ಅಗತ್ಯವಿದೆ. ಕಾಯಕವೇ ಕೈಲಾಸ ಎಂಬ ನುಡಿಗಟ್ಟು ನಿಮ್ಮ ಪಾಲಿಗೆ ಅರ್ಥಪೂರ್ಣವಾಗಲಿದೆ.
ಕರ್ಕ: ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗ ವಾಗದಂತೆ ಜಾಗೃತರಾಗಬೇಕು. ಹಿತಶತ್ರುಗಳು ನಿಮ್ಮ ಪ್ರಯೋಜನವನ್ನು ಪಡೆಯಲಿದ್ದಾರೆ. ದೈವಾನುಗ್ರಹವು ಉತ್ತಮವಿದ್ದು ಎಲ್ಲ ವಿಚಾರಗಳಲ್ಲಿ ಮುನ್ನಡೆಗೆ ಅವಕಾಶಗಳು ಒದಗಿ ಬರುತ್ತವೆ.
ಸಿಂಹ: ಅನೇಕ ರೀತಿಯಲ್ಲಿ ಕಿರಿಕಿರಿ ತೋರಿಬಂದರೂ ನಿಮ್ಮ ತಾಳ್ಮೆ – ಸಮಾಧಾನ ನಿಮಗೆ ಪೂರಕವಾಗುತ್ತದೆ. ಆರ್ಥಿಕ ವಾಗಿ ಸಮತೋಲನವನ್ನು ಕಾಯ್ದುಕೊಳ್ಳುವ ಪರಿಸ್ಥಿತಿ ನಿಮ್ಮದಾದೀತು. ವಿದ್ಯಾರ್ಥಿಗಳು ಅದೃಷ್ಟಭಾಗ್ಯವನ್ನು ಹೊಂದಲಿದ್ದಾರೆ.
ಕನ್ಯಾ: ಆರ್ಥಿಕವಾಗಿ ಧನಸಂಗ್ರಹ ಉತ್ತಮವಿದ್ದರೂ ಕೈಯಲ್ಲಿ ಹಣ ಉಳಿಯದು. ದೂರ ಸಂಚಾರದ ಒಪ್ಪಂದ ಹೂಡಿಕೆಗಳು ನಿಮಗೆ ಪೂರಕವಾಗಿ ಕಾಣಿಸಿಕೊಂಡರೂ ವಂಚನೆಗೆ ಅವಕಾಶವಾಗದಂತೆ ಜಾಗ್ರತೆ ವಹಿಸಬೇಕು.
ತುಲಾ: ಅವಿವಾಹಿತರಿಗೆ ಯೋಗ್ಯ ಸಂಬಂಧದ ಕಂಕಣಬಲ, ವಿದ್ಯಾರ್ಥಿಗಳಿಗೆ ಅಭ್ಯಾಸದಿಂದ ಉತ್ತಮ ಫಲಿತಾಂಶ ಗೋಚರಕ್ಕೆ ಬರುತ್ತದೆ. ವಾರಾಂತ್ಯ ಶುಭವಾರ್ತೆ. ಹೆಚ್ಚಿನ ಗ್ರಹಗಳ ಪ್ರತಿಕೂಲತೆ ಆಗಾಗ ತೋರಿಬಂದು ಮಾನಸಿಕ ಕಿರಿಕಿರಿ.
ವೃಶ್ಚಿಕ: ಹಿತಶತ್ರುಗಳು ವೃತ್ತಿರಂಗದಲ್ಲಿ ಕಿರುಕುಳಕ್ಕೆ ಕಾರಣರಾದಾರು. ಆರೋಗ್ಯ, ದೂರಸಂಚಾರದ ಬಗ್ಗೆ ಜಾಗ್ರತೆ ವಹಿಸಬೇಕು. ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ, ಸಮಾಧಾನ ನೀಡಲಿವೆ.
ಧನು: ಆರ್ಥಿಕವಾಗಿ ನಾನಾ ರೂಪದಲ್ಲಿ ಧನ ಸಂಗ್ರಹ ವಿದ್ದರೂ ಖರ್ಚುವೆಚ್ಚಗಳು ಮಿತಿಮೀರದಂತೆ ಗಮನ ಹರಿಸಿರಿ. ವಿದ್ಯಾರ್ಥಿ ವರ್ಗದವರಿಗೆ ಉದಾಸೀನತೆ ತೋರಿಬಂದರೂ ಮುನ್ನಡೆಗೆ ಅಭ್ಯಾಸ ಬಲ, ಪ್ರಯತ್ನ ಆತ್ಮವಿಶ್ವಾಸ ಪೂರಕವಾಗುತ್ತದೆ.
ಮಕರ: ಗೃಹದಲ್ಲಿ ಸಾಂಸಾರಿಕವಾಗಿ ಹಾಗೂ ಕೌಟುಂಬಿಕವಾಗಿ ಶಾಂತಿ, ಸಮಾಧಾನ, ಸೌಹಾರ್ದ ಗಳೆಲ್ಲ ಸಾಧ್ಯ. ಚಿಕ್ಕಪುಟ್ಟ ಸಮಸ್ಯೆಗಳು ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ, ಉದ್ವೇಗ, ಕೋಪ-ತಾಪಗಳು ಹೆಚ್ಚಲಿವೆ.
ಕುಂಭ: ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕ ಬಂದು ಸಹಾಯ ಹಸ್ತ ದೊರೆಯುವುದು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭವಿದ್ದು. ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯವಿದೆ.
ಮೀನ: ನಿಮ್ಮ ಜೀವನಗತಿಯಲ್ಲಿ ಇದು ಉದ್ವೇಗದ ಕಾಲ ಸಮಾಧಾನಚಿತ್ತದಿಂದ ಮುಂದುವರಿಯಬೇಕಾದೀತು. ಹಾಗೇ ವೃತ್ತಿರಂಗದಲ್ಲಿ ತುಂಬ ವೆಚ್ಚ ಹಾಗೂ ಅನಗತ್ಯ ಕೆಲಸಗಳು ನಡೆದು, ನಿಮ್ಮ ಸಮಯ ಮಿತಿಮೀರಿ ವ್ಯಯವಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.