ಮಂಗಳವಾರದ ರಾಶಿ ಫಲ : ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸತ್ಕಾರ್ಯಕ್ಕೆ ಧನವ್ಯಯ
Team Udayavani, Nov 1, 2022, 7:23 AM IST
ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸತ್ಕಾರ್ಯಕ್ಕೆ ಧನವ್ಯಯ. ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ, ದೂರ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಅಧಿಕ ಶ್ರಮ ಎದುರಾದೀತು. ದಂಪತಿಗಳಲ್ಲಿ ಪರಸ್ಪರ ಸಹಕಾರ.
ವೃಷಭ: ಜವಾಬ್ದಾರಿಯುತ ನಡೆಯಿಂದ ಸ್ಥಾನಮಾನಗಳಿಂದ ಗುರುತಿಸುವಿಕೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರೈಸಿದ ನೆಮ್ಮದಿ. ಸಂಶೋಧನಾ ಪ್ರವೃತ್ತಿ. ಪರರೊಂದಿಗೆ ವ್ಯವಹರಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದೀರ್ಘ ಪ್ರಯಾಣ. ಪರರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಿಕೆ. ಅಧಿಕ ಪರಿಶ್ರಮ. ಗುರುಹಿರಿಯರೊಂದಿಗೆ ಸಮಾಧಾನದಿಂದ ವರ್ತಿಸುವುದರಿಂದ ಮನ್ನಣೆ. ನಿರೀಕ್ಷೆಗೂ ಮೀರದ ಲಾಭ.
ಕರ್ಕ: ಆರೋಗ್ಯ ವೃದ್ಧಿ. ನಿರೀಕ್ಷಿಸಿದಂತೆ ಸುಖ. ಸಂದರ್ಭಕ್ಕೆ ಸರಿಯಾಗಿ ಪರಾಕ್ರಮ ಪ್ರದರ್ಶನ. ಚಂಚಲತೆ. ಅತೀ ಬುದ್ಧಿವಂತಿಕೆ ತೋರ್ಪಡಿಸಿ ಜನಪದರಿಂದ ಗೌರವ ಆದರ ಲಭ್ಯ. ಧಾರ್ಮಿಕ ಕಾರ್ಯಗಳಲ್ಲಿ ಏಕಾಗ್ರತೆಗೆ ಆದ್ಯತೆ ನೀಡುವುದರಿಂದ ಉಲ್ಲಾಸ.
ಸಿಂಹ: ಸ್ಥಿರ ಬುದ್ಧಿ. ಸ್ಪಷ್ಟತೆಗಳಿಂದ ಕೂಡಿದ ಕಾರ್ಯವೈಖರಿ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕ ವಿಚಾರದಲ್ಲಿ ನಿರೀಕ್ಷಿಸಿದಷ್ಟು ಸಿಗಲಾರದು. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ ಅಡಚಣೆ ತೋರೀತು. ಸಾಂಸಾರಿಕ ಸುಖಕ್ಕೆ ಹೆಚ್ಚಿದ ಶ್ರಮ.
ಕನ್ಯಾ: ಆರೋಗ್ಯ ಗಮನಿಸಿ. ಸ್ವತ್ಛತೆಗೆ ಆದ್ಯತೆ ನೀಡಿ. ಅನಗತ್ಯ ಗೊಂದಲಗಳಿಗೆ ಒಳಗಾಗ ದಂತೆ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ.
ತುಲಾ: ಉದ್ಯೋಗ ವ್ಯವಹಾರದಲ್ಲಿ ಗಣನೀಯ ವೃದ್ಧಿ. ಕೀರ್ತಿ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ, ವ್ಯವಹಾರಗಳ ವಿಚಾರದಲ್ಲಿ ಪ್ರಗತಿ. ಗುರು ಹಿರಿಯರಿಂದ ಮನಃ ಸಂತೋಷ .
ವೃಶ್ಚಿಕ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕ ವ್ಯವಹಾರದವರು ಚರ್ಚೆಗೆ ಅವಕಾಶ ನೀಡದೇ ಇದ್ದರೆ ಅಭಿವೃದ್ಧಿಗೆ ಅವಕಾಶಗಳು ದೊರಕುವುದು. ಎಲ್ಲಾ ವಿಚಾರಗಳಲ್ಲೂ ಜಾಗ್ರತೆಯ ನಡೆ ಅಗತ್ಯ.
ಧನು: ಪರಿಶ್ರಮ ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಗೌರವ ಆದರಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧ್ಯಯನ ಪ್ರವೃತ್ತರಿಗೆ ಸರ್ವ ವಿಧದ ಸೌಲಭ್ಯ ಲಭ್ಯ. ಆರೋಗ್ಯ ಉತ್ತಮ.
ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಗಣ್ಯರ, ಮೇಲಧಿಕಾರಿಗಳ ಸಹಾಯದಿಂದ ಪ್ರಗತಿ. ದೀರ್ಘ ಹಾಗೂ ಸಣ್ಣ ಪ್ರಯಾಣ ಸಂಭವ. ಆರ್ಥಿಕ ಸ್ಥಿತಿ ವೃದ್ಧಿದಾಯಕ. ಹಿರಿಯ ಪ್ರೋತ್ಸಾಹ ಮಾರ್ಗದರ್ಶನದ ಲಾಭ.
ಕುಂಭ: ಆರೋಗ್ಯ ಉತ್ತಮ. ದೇವತಾನು ಗ್ರಹದಿಂದ ಕೂಡಿದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆ. ಶ್ರೇಯಸ್ಸು ತೋರಿಬರುವುವು. ದೂರದ ವ್ಯವಹಾರದಿಂದ ಧನವೃದ್ಧಿ. ಉನ್ನತ ಸ್ಥಾನ ಲಭ್ಯ. ಗೃಹದಲ್ಲಿ ಸಂತಸದ ವಾತಾವರಣ.
ಮೀನ: ಹೆಚ್ಚಿದ ಜವಾಬ್ದಾರಿ. ದೇಹಕ್ಕೆ ಆಯಾಸ ಆಗದಂತೆ ಕರ್ತವ್ಯ ನಿರ್ವಹಿಸಿ. ಆರೋಗ್ಯ ಗಮನಿಸಿಕೊಳ್ಳಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದಂಪತಿಗಳಲ್ಲಿ ಪರಸ್ಪರ ಆನ್ಯೋನ್ಯತೆ. ಮಕ್ಕಳಿಂದ ಸುಖ ಸಂತೋಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.