ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ
Team Udayavani, Nov 17, 2021, 7:39 AM IST
ಮೇಷ: ಪ್ರಜ್ಞೆ ಪ್ರತಿಭೆ ಬುದ್ಧಿವಂತಿಕೆ ಸಂದರ್ಭೋಚಿತ ನಡೆನುಡಿಯಿಂದ ನಾಯಕತ್ವ ಗುಣ ವೃದ್ಧಿ. ಅಧ್ಯಯನ ನಿಮಿತ್ತ ಪ್ರಯಾಣ ಯಶಸ್ಸು ಲಭ್ಯ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಧನ ಸಂಪತ್ತಿನಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ.
ವೃಷಭ: ಉತ್ತಮ ವಾಕ್‌ಚತುರತೆ. ಸಾಹಸದಿಂದ ಕೂಡಿದ ಧನಾರ್ಜನೆ. ಗೃಹ ಆಸ್ತಿ ಕಟ್ಟಡ ವಿಚಾರಗಳಲ್ಲಿ ಧನವ್ಯಯ. ಮಿತ್ರರ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ಸಂಪಾದನೆ.
ಮಿಥುನ: ಆಚಾರ ವಿಚಾರದಲ್ಲಿ ಮಗ್ನತೆ. ಅಧ್ಯಯನ ಅಧ್ಯಾಪನದಲ್ಲಿ ಗಣನೀಯ ಪ್ರಗತಿ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಧನಸಂಪತ್ತು ವೃದ್ಧಿ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಮಹತ್ಕಾರ್ಯ ಸಫಲತೆ.
ಕರ್ಕ: ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಗುರುಹಿರಿಯರ ಆರೋಗ್ಯ ಗಮನಿಸಿ. ಗೃಹ ಸಂಬಂಧೀ ವಿಚಾರಗಳಲ್ಲಿ ಧನವ್ಯಯ. ದಾಂಪತ್ಯ ಸುಖ ವೃದ್ಧಿ. ನೂತನ ಮಿತ್ರರ ಭೇಟಿ.
ಸಿಂಹ: ಭೂಮ್ಯಾರಿ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಗೌರವಾದಿ ವೃದ್ಧಿ. ಮಕ್ಕಳಿಂದ ಸಂತೋಷ ಗುರುಹಿರಿಯರ ಪ್ರೋತ್ಸಾಹ. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಸಲಹೆ ಮಾರ್ಗದರ್ಶನ ನೀಡುವ ಅವಕಾಶ. ದಾಂಪತ್ಯ ಸುಖ ಮಧ್ಯಮ.
ಕನ್ಯಾ: ಉತ್ತಮ ಆಲೋಚನೆಯಿಂದ ಕೂಡಿದ ಮಾತುಗಾರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಗುರುಹಿರಿಯರ ಸಹಾಯ ಸಹಕಾರ ಲಭ್ಯ. ಆರೋಗ್ಯ ವೃದ್ಧಿ. ದಾಂಪತ್ಯ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ತುಲಾ: ಆರೋಗ್ಯ ವೃದ್ಧಿ. ಧನಾಗಮನದ ನಿರೀಕ್ಷೆ ವಿಳಂಬತೆಯಿಂದ ಪ್ರಾಪ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಬಂಧುಮಿತ್ರರ ಜವಾಬ್ದಾರಿ, ಗುರು ಹಿರಿಯರ ಸಹಕಾರ.
ವೃಶ್ಚಿಕ: ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ದಂಪತಿಗಳಲ್ಲಿ ಅನುರಾಗ ಪ್ರೀತಿ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗುರುಹಿರಿಯರ ಪ್ರೀತಿ ಆಶೀರ್ವಾದ ಪ್ರಾಪ್ತಿ.
ಧನು: ಗುರುಹಿರಿಯರ ಬಗ್ಗೆ ಗಮನ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ತೋರಿಬಂದೀತು.
ಮಕರ: ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮ ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖಕರ.
ಕುಂಭ: ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫಲಿತಾಂಶ ಸಂಭವ. ಉತ್ತಮ ಧನಸಂಪತ್ತು ವೃದ್ಧಿ. ವಾಕ್‌ಚತುರತೆಯಿಂದ ಜನಮನ್ನಣೆ. ಬಂಧುಮಿತ್ರರ ಸಹಾಯ ಸಹಕಾರ. ಗೃಹದಲ್ಲಿ ಸಂತಸದ ಸಂಭ್ರಮ.
ಮೀನ: ಹಠಮಾಡದೇ ವಿವೇಕದಿಂದ ಕಾರ್ಯಪ್ರವೃತ್ತರಾಗಿ ಯಶಸ್ಸು ಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ದಾಂಪತ್ಯ ಸುಖಕರ. ಮಕ್ಕಳಿಂದ ತೃಪ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.