ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 17, 2022, 7:13 AM IST
ಮೇಷ: ಹೆಚ್ಚಿದ ಪರಿಶ್ರಮ. ಹಠ ಮಾಡದೇ ತಾಳ್ಮೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ವ್ಯವಹಾರಗಳಿಂದ ಅಧಿಕ ವರಮಾನ. ಗುರು ಹಿರಿಯರ ಮೇಲಧಿಕಾರಿಗಳ ಮಾರ್ಗದರ್ಶನ ಪಾಲಿಸುವುದರಿಂದ ಯಶಸ್ಸು ಲಭಿಸೀತು.
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಯಶಸ್ಸು ಲಭಿಸಿದ ಮನತೃಪ್ತಿ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ದೀರ್ಘ ಪ್ರಯಾಣ ಸಂಭವ.
ಮಿಥುನ: ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ದಂಪತಿಗಳು ಪಾಲು ದಾರರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ನಿರೀಕ್ಷಿತ ಧನಾಗಮನ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ.
ಕರ್ಕ: ಉತ್ತಮ ಸ್ಥಾನಮಾನಕ್ಕಾಗಿ ಪ್ರಯತ್ನ. ಅಧ್ಯಯನದಲ್ಲಿ ತತ್ಪರತೆ. ಕುಟುಂಬಿಕರಲ್ಲಿ ತಾಳ್ಮೆ, ಸಹನೆಯಿಂದ ವರ್ತಿಸಿ. ಪರ ಕಾರ್ಯದಲ್ಲಿ ಆಸಕ್ತಿ. ಹಣಕಾಸಿನ ವಿಚಾರದಲ್ಲಿ ಕೃಪಣತೆ ಮಾಡದಿರಿ. ಸಾಂಸಾರಿಕ ಸುಖ ಮಧ್ಯಮ.
ಸಿಂಹ: ಹಿರಿಯರಿಂದ ಸಂತೋಷ. ಗೃಹ ವಾಹನಾದಿ ವಿಚಾರದಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಣಯದಿಂದ ನಷ್ಟ ಸಂಭವ.
ಕನ್ಯಾ: ದೈರ್ಯ ಸಾಹಸ ಪರಾಕ್ರಮದಿಂದ ಕೂಡಿದ ಕಾರ್ಯವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ. ಹಾಗೂ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ.
ತುಲಾ: ದೇವತಾ ಕಾರ್ಯಗಳಲ್ಲಿ ತತ್ಪರತೆ. ಭಾಗ್ಯ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಕೀರ್ತಿ ಸ್ಥಾನ ಸುಖಾದಿ ಪ್ರಾಪ್ತಿ. ಸಾಂಸಾರಿಕ ಸುಖ ವೃದ್ಧಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ನೂತನ ಬಂಧು ಮಿತ್ರರ ಸಹಕಾರ.
ವೃಶ್ಚಿಕ: ಬಹು ಐಶ್ವರ್ಯ ಸಿಗುವ ಸಂಭವ. ರಾಜಕೀಯ ಸರಕಾರೀ ಕಾರ್ಯಗಳಲ್ಲಿ ಮುನ್ನಡೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸಿದರಿಂದ ತೃಪ್ತಿ. ದೀರ್ಘ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕರಿಗಳ ಸಹಕಾರ ಲಭ್ಯ.
ಧನು: ಉತ್ತಮ ಆರೋಗ್ಯ. ತಾಳ್ಮೆ ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ ಯಶಸ್ಸು ಲಭಿಸಿದ್ದರಿಂದ ಸಂತೋಷ. ನಿರಂತರ ಧನಾರ್ಜನೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಹೆಚ್ಚಿದ ಸ್ಥಾನಮಾನ. ದಾಂಪತ್ಯ ತೃಪ್ತಿಕರ.
ಮಕರ: ತಂದೆ ತಾಯಿಯಿಂದ ಸುಖ ಪ್ರಾಪ್ತಿ. ಬಂಧು ಮಿತ್ರರ ಆಗಮನದಿಂದ ಗೃಹದಲ್ಲಿ ಸಂತಸದ ವಾತಾವರಣ. ಭೋಜನಾದಿ ಸಂಭ್ರಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ದಾಂಪತ್ಯ ತೃಪ್ತಿಕರ. ಪಾಲುದಾರಿಕಾ ವ್ಯವಹಾರದಲ್ಲಿ ಹೆಚ್ಚಿದ ಪ್ರಗತಿ.
ಕುಂಭ: ನೂತನ ಮಿತ್ರರ ಭೇಟಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ. ದೂರದ ವ್ಯವಹಾರದಲ್ಲಿ ಹೆಚ್ಚಿದ ವರಮಾನ. ಪಾಲುದಾರಿಕಾ ಕ್ಷೇತ್ರದಲ್ಲಿ ಗೌರವ ವೃದ್ಧಿ. ಆರೋಗ್ಯದಲ್ಲಿ ಉತ್ತಮ ಬದಲಾವಣೆ. ಗೃಹದಲ್ಲಿ ನೆಮ್ಮದಿ ವಾತಾವರಣ.
ಮೀನ: ದೂರ ಪ್ರಯಾಣ. ಜನಪರ ಸಹಕಾರ ಸಹಾಯದಿಂದ ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿದ್ಯಾರ್ಥಿಗಳಿಗೆ ಸರ್ವ ಸೌಲಭ್ಯ ಪ್ರಾಪ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.