ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ
Team Udayavani, Aug 24, 2022, 7:26 AM IST
ಮೇಷ: ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಉತ್ತಮ ಫಲದಾಯಕ ದಿವಸ. ಉದ್ಯೋಗ ವ್ಯವಹಾರಗಳಲ್ಲಿ ಸಮಯ ಸಂದರ್ಭಕ್ಕೆ ಎಲ್ಲ ವಿಧದ ಸಹಾಯ ದೊರಕಿ ಯಶಸ್ಸು ಲಭಿಸಿದ ತೃಪ್ತಿ. ದಂಪತಿಗಳಿಂದ ಪರಸ್ಪರ ಜವಾಬ್ದಾರಿಯುತ ನಡೆ. ಹಿರಿಯರಿಂದ ಸಂತೋಷ.
ವೃಷಭ: ನೂತನ ಮಿತ್ರರ ಸಮಾಗಮದಿಂದ ಹೆಚ್ಚಿದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬ ಕೆಲಸದಿಂದ ಹೆಚ್ಚಿದ ವರಮಾನ. ಸಾಂಸಾರಿಕ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪುರಸ್ಕಾರ. ಉನ್ನತ ಸ್ಥಾನಮಾನ ಲಭ್ಯ.
ಮಿಥುನ: ಗಣ್ಯ ವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯ ಬದಲಾವಣೆ. ಹೆಚ್ಚಿದ ವರಮಾನ. ಸಹೋದ್ಯೋಗಿಗಳಿಂದ ಸಹಕಾರ. ಗುರುಹಿರಿಯರ ಆರೋಗ್ಯ ಗಮನಿಸಿ.
ಕರ್ಕ: ದೂರ ಪ್ರಯಾಣ ಸಂಭವ. ಧಾರ್ಮಿಕ ವಿಚಾರಗಳಲ್ಲಿ ತಲ್ಲೀನತೆ. ಸಾಂಸಾರಿಕ ಸುಖ ವೃದ್ಧಿ. ಸ್ವಪ್ರಯತ್ನದಿಂದ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ: ಆಸ್ತಿ ವಿಚಾರದಲ್ಲಿ ಮುನ್ನಡೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಸಂಭವ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ತೃಪ್ತಿಕರ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ.
ಕನ್ಯಾ: ಸಂತಸದಿಂದ ಕೂಡಿದ ದಿನ. ಎಲ್ಲಾ ವಿಚಾರಗಳಲ್ಲಿ ಅಭಿವೃದ್ಧಿ ಸಂಭವ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ವೃದ್ಧಿ. ಅನಿರೀಕ್ಷಿತ ಧನಾಗಮ.
ತುಲಾ: ಆರೋಗ್ಯ ವೃದ್ಧಿ. ದೈಹಿಕ ಸುಖಕ್ಕೆ ಬೇಕಾಗುವ ವಸ್ತುಗಳ ಸಂಗ್ರಹ. ವಸ್ತ್ರ ಆಭರಣ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ. ಸುಖ ಸಂತೋಷ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.
ವೃಶ್ಚಿಕ: ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವಾದಿ ವೃದ್ಧಿ. ಬಂಧುಜನರೊಂದಿಗೆ ವಿಲಾಸ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಗೃಹದಲ್ಲಿ ಸಂತಸದ ವಾತಾವರಣ.
ಧನು: ಆರೋಗ್ಯ ವೃದ್ಧಿ. ಸತ್ಕರ್ಮ ಸದಾಚಾರತೆ ದೇವತಾ ಕಾರ್ಯಗಲ್ಲಿ ಭಾಗಿಯಾಗಿ ದಾನ ಧರ್ಮ ನಿರತ ಗುರು ಹಿರಿಯರ ಪ್ರೀತಿ ಸಂಪಾದನೆ.ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ. ದಾಂಪತ್ಯ ಜೀವನ ಹೊಂದಾಣಿಕೆಯಿಂದ ತೃಪ್ತಿಕರ. ಮನೆಯಲ್ಲಿ ಸಂಭ್ರಮ.
ಮಕರ: ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ ವ್ಯವಹಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಅನ್ಯರ ಸಹಾಯ ಅಪೇಕ್ಷಿಸದೆ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳಿಂದ ಸಂತೋಷ.
ಕುಂಭ: ನಯವಿನಯದಿಂದ ಕಾರ್ಯ ಪ್ರವೃತ್ತರಾಗಿ. ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ. ಆರೋಗ್ಯ ಬಗ್ಗೆ ಉದಾಸೀನತೆ ಸಲ್ಲದು.
ಮೀನ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ.ದೀರ್ಘ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಒತ್ತಡ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ದೈರ್ಯದಿಂದ ಕೂಡಿದ ಕಾರ್ಯವೈಖರಿ. ಬಂಧು ಬಳಗದವರಿಂದ ಸಂತೋಷ ವೃದ್ಧಿ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ. ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ಉತ್ತಮ ಧನಾಗಮನ. ದಾಂಪತ್ಯ ತೃಪ್ತಿಕರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.