![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 9, 2022, 7:28 AM IST
ಮೇಷ: ಆರೋಗ್ಯ ಗಮನಿಸಿ. ನಿರೀಕ್ಷಿತ ಧನಾಗಮ. ಸಂದರ್ಭೋಚಿತ ವಿಚಾರದಿಂದ ಸಹೋದರಾದಿ ಸುಖ. ಗೃಹ ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ದಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಸತ್ಕಾರ್ಯಕ್ಕೆ ಧನ ವ್ಯಯ.
ವೃಷಭ: ಆರೋಗ್ಯ ವೃದ್ಧಿ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಾಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ನಿಪುಣತೆ. ಸ್ಪರ್ಧಾತ್ಮಕ ಮನೋಭಾವ. ಸಾಂಸಾರಿಕ ಸುಖ ಮದ್ಯಮ. ಧರ್ಮಕರ್ಮದಲ್ಲಿ ಶ್ರೇಯಸ್ಸು. ಲೆಕ್ಕಾಚಾರದ ಧನವ್ಯಯ.
ಮಿಥುನ: ಉತ್ತಮ ಸುದೃಢ ಆರೋಗ್ಯ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ವರಮಾನ. ಸಹೋದರಾದಿ ಸುಖ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದ ಮುನ್ನಡೆ. ಅಧ್ಯಯನ ನಿಮಿತ್ತ ಪ್ರಯಾಣ. ದಾಂಪತ್ಯ ತೃಪ್ತಿಕರ. ವ್ಯವಹಾರದಲ್ಲಿ ಉತ್ತಮ ಬದಲಾವಣೆ.
ಕರ್ಕ: ಉತ್ತಮ ಆರೋಗ್ಯ. ಪರಿಶ್ರಮದಿಂದ ಧನಾರ್ಜನೆ. ಸಹೋದರಾದಿ ಸುಖ ಲಭ್ಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಸ್ಪರ್ಧೆಯಲ್ಲಿ ಜಯ. ಸಾಂಸಾರಿಕ ಸುಖ ವೃದ್ಧಿ. ಧಾರ್ಮಿಕ ಆಚರಣೆಯಲ್ಲಿ ತಲ್ಲೀನತೆ. ಸ್ಥಾನ ಪ್ರಾಪ್ತಿ.
ಸಿಂಹ: ಸುಸ್ಥಿರ ಆರೋಗ್ಯ. ಉತ್ತಮ ಧನಾರ್ಜನೆ. ದೈರ್ಯ ಶೌರ್ಯಾದಿ ಪ್ರದರ್ಶನ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸೌಕರ್ಯ ಪ್ರಾಪ್ತಿ. ಹೆಚ್ಚಿದ ಸ್ಪರ್ಧೆ. ದಾಂಪತ್ಯ ತೃಪ್ತಿಕರ. ಧಾರ್ಮಿಕ ಕಾರ್ಯಾಸಕ್ತಿ. ವ್ಯವಹಾರ ಉದ್ಯೋಗದಲ್ಲಿ ಸಂದರ್ಭೋಚಿತ ನಿರ್ಣಯ.
ಕನ್ಯಾ: ಉತ್ತಮ ಆರೋಗ್ಯ. ಹೆಚ್ಚಿದ ವರಮಾನ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಸಹೋದರಾದಿ ಸುಖ ಪ್ರಾಪ್ತಿ. ಆಸ್ತಿ ವಿಚಾರದಲ್ಲ ಹೆಚ್ಚಿದ ಪರಿಶ್ರಮ ಜಾಗೃತೆ ಅಗತ್ಯ. ಅಧ್ಯಯನ ಪ್ರಗತಿದಾಯಕ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಬದಲಾವಣೆ.
ತುಲಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರಗಲ್ಲಿ ಅನಿರೀಕ್ಷಿತ ಪ್ರಗತಿ. ಗೌರವ ಆದರಣ ಸುಖ. ನೂತನ ಮಿತ್ರರ ಸಮಾಗಮ. ಪರಸ್ಪರ ಸಹಕಾರ. ಸಹೋದರಾದಿಗಳಿಂದ ಪ್ರೋತ್ಸಾಹ. ಹೆಚ್ಚಿದ ಧನಲಾಭ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಎಚ್ಚರಿಕೆ.
ವೃಶ್ಚಿಕ: ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪರಾವಲಂಬನೆ ಅನಿವಾರ್ಯವಾದೀತು. ಪಾರದರ್ಶಕತೆಗೆ ಆದ್ಯತೆ ನೀಡಿ. ಧನಾರ್ಜನೆಯಲ್ಲಿ ಪ್ರಗತಿ.
ಧನು: ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ಸುದೃಢ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ ಮೇಲಧಿಕಾರಿಗಳ ಗಣ್ಯರ ಸಹಕಾರ ಪ್ರೋತ್ಸಾಹ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ತೃಪ್ತಿದಾಯಕ.
ಮಕರ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಸಮೂಹದಲ್ಲಿ ಗೌರವ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ಬದಲಾವಣೆ. ಬಂಧುಮಿತ್ರರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ. ಅನ್ಯರ ಮೇಲೆ ಅವಲಂಬಿತರಾಗದೆ ಕಾರ್ಯ ಪ್ರವೃತ್ತರಾಗಿರಿ.
ಕುಂಭ: ಹಣಕಾಸಿನ ವಿಚಾರದಲ್ಲಿ ಅಪೇಕ್ಷಿಸಿದಂತೆ ಉತ್ತಮ ಪ್ರತಿಫಲ. ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಅಧಿಕಾರ ಗೌರವಾದಿ ಪ್ರಾಪ್ತಿ. ಸಹೋದ್ಯೋಗಿಗಳು ಬಂಧುಮಿತ್ರರಿಂದ ಜವಾಬ್ದಾರಿಯುತ ಸಹಕಾರ.
ಮೀನ: ನಿರೀಕ್ಷಿತ ಸ್ಥಾನ ಗೌರವಾದಿ ಸುಖ ಪ್ರಾಪ್ತಿ. ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲಾತಿಗಳೊಂದಿಗೆ ವ್ಯವಹರಿಸಿ. ಸಾಲಬಾದೆಗೆ ಒಳಗಾಗದಂತೆ ಎಚ್ಚರಿಕೆ ಇರಲಿ. ಮಾತಿನಲ್ಲಿ ದಾಕ್ಷಿಣ್ಯತೆ ತೋರದಿರಿ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಅತ್ಯಧಿಕ ಪರಿಶ್ರಮ ಸಂಭವ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.