ಬುಧವಾರದ ರಾಶಿ ಫಲ: ಸಾಲ ಕೊಡುವಾಗ ಪಡೆಯುವಾಗ ಎಚ್ಚರದಿಂದಿರಿ, ಆರೋಗ್ಯದ ಕಡೆ ಗಮನವಿರಲಿ
Team Udayavani, Nov 16, 2022, 7:38 AM IST
ಮೇಷ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ವಿದ್ಯಾರ್ಥಿಗಳಿಗೆ ಜಿಜ್ಞಾಸುಗಳಿಗೆ ಅನುಕೂಲಕರ ಅವಕಾಶಗಳು ಲಭ್ಯ. ಸತ್ಕರ್ಮಕ್ಕಾಗಿ ಧನವ್ಯಯ ಹಾಗೂ ಉತ್ತಮ ಉಳಿತಾಯಕ್ಕಾಗಿ ಕಾರ್ಯಗತ. ಅವಿವಾಹಿತರಿಗೆ ವಿವಾಹ ಭಾಗ್ಯ.
ವೃಷಭ: ಸರಿಯಾದ ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಜನಮನ್ನಣೆ. ಪೂಜ್ಯತೆ ಗೌರವ ಆದರಗಳು ಪ್ರಾಪ್ತಿ. ಅಧಿಕ ಪರಿಶ್ರಮದಿಂದ ಕೂಡಿದ ದಿನ. ದೇಹಾರೋಗ್ಯ ಬಗ್ಗೆ ಉದಾಸೀನತೆ ಸಲ್ಲದು. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ.
ಮಿಥುನ: ಕೆಲಸ ಕಾರ್ಯಗಳಲ್ಲಿ ಸರಿಯಾದ ವಿವೇಚನೆ ಯೋಜನೆ ಅಗತ್ಯ. ಅನಗತ್ಯ ಅಪವಾದಕ್ಕೆ ಗುರಿಯಾಗದಿರಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.
ಕರ್ಕ: ನಿರೀಕ್ಷಿತ ಧನ ಸಂಪತ್ತು ವೃದ್ಧಿ. ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಗೌರವ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಮಾನಸಿಕ ಒತ್ತಡ ಕಂಡುಬಂದೀತು. ಮಕ್ಕಳ ಬಗ್ಗೆ ಚಿಂತೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.
ಸಿಂಹ: ದೀರ್ಘ ಪ್ರಯಾಣ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಪರಿಸ್ಥಿತಿ ಅನುಕೂಲಕರವಾದೀತು. ದಾಂಪತ್ಯ ಸುಖ ಉತ್ತಮ. ಗುರುಹಿರಿಯರ ಮಾರ್ಗದರ್ಶನದಿಂದ ಸಫಲತೆ. ಆಸ್ತಿ ವಿಚಾರಗಳಲ್ಲಿ ನಿಣಯ ನಡೆಯುವುದು.
ಕನ್ಯಾ: ಉಪಕಾರ ಮಾಡಲು ಹೋಗಿ ತೊಂದರೆಗೊಳಗಾಗಬೇಡಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ದಾಕ್ಷಿಣ್ಯ ತೊರೆದು ವ್ಯವಹರಿಸಿದರೆ ಅಭಿವೃದ್ಧಿ ಕಂಡೀತು. ಹಣಕಾಸಿನ ಆದಾಯ ಮಾರ್ಗ ಸುಗಮ. ನಾನಾ ರೀತಿಯ ಹೂಡಿಕೆ ಸಂಭವ.
ತುಲಾ: ಸಣ್ಣ ಪ್ರಯಾಣ. ಜನ ಸಮೂಹದಲ್ಲಿ ಮಾನ್ಯತೆ ಗೌರವ ಅಧಿಕಾರ ಲಭ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ಸದ್‌ವ್ಯಯ. ಗುರುಹಿರಿಯರ ಸೇವೆಯಿಂದ ಮನಃತೃಪ್ತಿ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಸುದೃಢ. ಕೆಲಸ ಕಾರ್ಯಗಳಲ್ಲಿ ಸಫಲತೆ.
ವೃಶ್ಚಿಕ: ಆರೋಗ್ಯ ಮಧ್ಯಮ. ಸರಿಯಾದ ನಿಯಮ ಪಾಲಿಸುವುದು ಅಗತ್ಯ. ಹಿರಿಯರಿಂದ ಮಕ್ಕಳಿಂದ ಸಂತೋಷದ ವಾರ್ತೆ. ವಿದ್ಯಾರ್ಥಿಗಳಿಗೆ ಸಂದಭೋìಚಿತ ಸಹಾಯ ಒದಗಿ ಬರುವುದು. ಅಧ್ಯಯನದಲ್ಲಿ ಪ್ರಗತಿ ಕಾಣುವುದು.
ಧನು: ಉತ್ತಮ ಆರೋಗ್ಯ. ಆಸ್ತಿ ಸಂಪಾದನೆಯಲ್ಲಿ ತಲ್ಲೀನತೆ. ಸಾಲ ಕೊಡುವಾಗ ಪಡೆಯುವಾಗ ಪೂರ್ವಾಪರ ತಿಳಿದು ನಿರ್ಧರಿಸಿ. ಅನಿರೀಕ್ಷಿತ ಸ್ಥಾನ ಪ್ರಾಪ್ತಿ. ಧಾರ್ಮಿಕ ಕಾರ್ಯಗಲ್ಲಿ ಹೆಚ್ಚಿದ ಜವಾಬ್ದಾರಿ. ಅಧಿಕ ಶ್ರಮ. ದಾಂಪತ್ಯ ಸುಖ ತೃಪ್ತಿದಾಯಕ.
ಮಕರ: ಮಕ್ಕಳ ವಿಚಾರದಲ್ಲಿ ಸುವಾರ್ತೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ ಪ್ರಗತಿ ಕಂಡು ಬರುವುದು. ಅನಾಯಾಸವಾಗಿ ಧನ ಸಂಪಾದನೆ. ಸತ್ಕಾರ್ಯಕ್ಕೆ ಧನವ್ಯಯ. ಮಿತ್ರರಿಂದ ಉತ್ತಮ ಸಹಕಾರ. ಜವಾಬ್ದಾರಿ ಪ್ರದರ್ಶನ. ಸಾಂಸಾರಿಕ ಸುಖ ಉತ್ತಮ.
ಕುಂಭ: ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಲ್ಲಿ ತೊಡಗಿಸಿಕೊಳ್ಳದಿರಿ. ಬುದ್ಧಿವಂತಿಕೆ ತಾಳ್ಮೆ ಸಹನೆಯಿಂದ ವರ್ತಿಸಿ. ನಿಮ್ಮ ಕಾರ್ಯಗಳನ್ನು ಸಫಲಗೊಳಿಸಿಕೊಳ್ಳಿ. ಗುರುಹಿರಿಯರೊಂದಿಗೂ ಮಿತ್ರರೊಂದಿಗೂ ವಿವೇಚನೆಯಿಂದ ವ್ಯವಹರಿಸಿ.
ಮೀನ: ಸುದೃಢ ಆರೋಗ್ಯ. ಉತ್ತಮ ಸ್ಥಾನ ಮಾನ ಗೌರವಾದಿ ಲಭ್ಯ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಯಶಸ್ಸುಗಳಿಸಿದುದರಿಂದ ಮನಃ ಸಂತೋಷ. ದೂರದ ಮೂಲದಿಂದ ಹಣಕಾಸು ವೃದ್ಧಿ. ನಾನಾರೀತಿಯ ಹೂಡಿಕೆ ಸಂಭವ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮಿತ್ರರಿಂದ ಸೂಕ್ತ ಪ್ರೋತ್ಸಾಹ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.