ಬುಧವಾರದ ರಾಶಿ ಫಲ: ಅಧಿಕ ಧನ ಸಂಪಾದನೆಯ ಅಪೇಕ್ಷೆ, ಸಾಹಸ ಪ್ರವೃತ್ತಿ ಮಾಡದಿರಿ
Team Udayavani, Nov 23, 2022, 7:30 AM IST
ಮೇಷ: ಅಧಿಕ ಜನಸಂಪರ್ಕ. ಸಾಂಸಾರಿಕ ಸುಖದಲ್ಲಿ ತಲ್ಲೀನತೆ. ನಾನಾ ರೀತಿಯ ಮನೋರಂಜನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಸಮಯ. ದೀರ್ಘ ಪ್ರಯಾಣ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ.
ವೃಷಭ: ಅಧಿಕ ಧನ ಸಂಪಾದನೆಯ ಅಪೇಕ್ಷೆ. ಉತ್ತಮ ಜ್ಞಾನ ತಿಳುವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಗುರುಹಿರಿಯರ ಪ್ರೋತ್ಸಾಹದಿಂದ ಕಾರ್ಯ ಸಫಲತೆ.
ಮಿಥುನ: ಆರೋಗ್ಯ ಗಮನಿಸಿ. ಸಾಹಸ ಪ್ರವೃತ್ತಿ ಮಾಡದಿರಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ಸುಖಕರ. ಸಂದರ್ಭಕ್ಕೆ ಸರಿಯಾಗಿ ಪಾಲುಗಾರರ ಸಹಕಾರ ಲಭ್ಯ.
ಕರ್ಕ: ನಕಾರಾತ್ಮಕ ಚಿಂತನೆಗೆ ಆದ್ಯತೆ ನೀಡದಿರಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ಬಂಧುಮಿತ್ರರಿಂದ ಸಹಕಾರ ಲಭಿಸುವುದು. ದಾಂಪತ್ಯ ಸುಖ ವೃದ್ಧಿ. ಕ್ಷಮಾಗುಣಕ್ಕೆ ಆದ್ಯತೆ ನೀಡುವುದರಿಂದ ಜನರಿಂದ ಲಘು ಪ್ರಕಟಣೆ ಲಭಿಸುವುದು.
ಸಿಂಹ: ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾದಾಯ ಲಭಿಸುವುದು. ದಂಪತಿಗಳಲ್ಲಿ ಅನುರಾಗ ವೃದ್ಧಿ. ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಜಾಣತನದ ಪ್ರದರ್ಶನದಿಂದ ಅತೀಸಫಲತೆ.
ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಆಶೀರ್ವಾದ ಬಲದಿಂದ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಆಯಕ್ಕೆ ಸರಿಯಾಗಿ ವ್ಯಯ ಸಂಭವ. ಮಾತಿನಲ್ಲಿ ಜವಾಬ್ದಾರಿ ಹೆಚ್ಚಾಗಿ ಕಂಡೀತು. ಅನಗತ್ಯ ತೊಂದರೆಗೊಳಗಾಗದಿರಿ.
ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಹು ಜನಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ ಮನಃ ತೃಪ್ತಿ. ಭೂಮ್ಯಾದಿ ವಾಹನಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂತಸ.
ಧನು: ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ.
ಮಕರ: ಆರೋಗ್ಯ ಗಮನಿಸಿ. ಹೆಚ್ಚಿನ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧುಮಿತ್ರರ ಸಹಾಯ ಸಹಕಾರ ಲಭಿಸುವುದು.
ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು. ಬಂಧುಮಿತ್ರರಿಗಾಗಿ ಹೆಚ್ಚಿದ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.