ಬುಧವಾರದ ರಾಶಿಫಲ : ಹೇಗಿದೆ ನಿಮ್ಮ ಗ್ರಹಬಲ
Team Udayavani, Oct 20, 2021, 7:50 AM IST
ಮೇಷ: ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರಗಳಲ್ಲಿ ದುಃಖ, ಮೋಸ, ವಂಚನೆ ಚರ್ಚೆ ಇತ್ಯಾದಿಗಳು ಆಗದಂತೆ ಎಚ್ಚರಿಕೆಯ ನಡೆ ಅಗತ್ಯ. ವಿಳಂಬದ ತಾಳ್ಮೆಯ ನಿರ್ಣಯದಿಂದ ಸುಖ ಫಲ ಒದಗೀತು. ಧನ ವೃದ್ಧಿ.
ವೃಷಭ: ವೈಭವದಿಂದ ಕೂಡಿದ ದಿನ. ವಿದ್ಯೆ ವಿನಯ ನಡೆಯಿಂದ ಸ್ಥಾನಮಾನ ವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪತ್ತು ಲಭ್ಯ. ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲೂ ಶ್ರೇಯಸ್ಸು ಕೀರ್ತಿ ಲಭ್ಯ.
ಮಿಥುನ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ನಿರೀಕ್ಷಿತ ಸುಖ ಅನುಭವವಾದೀತು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ಹೆಚ್ಚಿದ ಮನ್ನಣೆ.
ಕರ್ಕ: ಹಠ ಪ್ರವೃತ್ತಿಯಿಂದ ತೊಂದರೆ ಸಾಧ್ಯ. ಅನಗತ್ಯ ವಿಚಾರಗಳಿಗೆ ಕಿವಿಗೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆಸ್ತಿ ವಿಚಾರದಲ್ಲಿ ಮುನ್ನಡೆ ತೋರೀತು. ಪರಿಶ್ರಮದಿಂದ ಉದ್ಯೋಗ ವ್ಯವಹಾರದಲ್ಲಿ ದೇಹಾಯಾಸ.
ಸಿಂಹ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ. ಧನಾರ್ಜನೆ ಮಧ್ಯಮ. ಬಂಧುಮಿತ್ರರ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ.
ಕನ್ಯಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿಸುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಹಿರಿಯರ ಆರೋಗ್ಯ ಸುದೃಢ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ ಸಂತೋಷ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ದೂರದ ಮಿತ್ರರ ಭೇಟಿ. ದೀರ್ಘ ಪ್ರಯಾಣ ಸಂಭವ. ಪರರ ವಿಚಾರವನ್ನು ಆಲಿಸಿ ಆದರೆ ನಿರ್ಣಯ ನಿಮ್ಮದಿರಲಿ. ಸಾಂಸಾರಿಕ ಸುಖ ತೃಪ್ತಿದಾಯಕ.
ವೃಶ್ಚಿಕ: ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ನಿರೀಕ್ಷೆಗೂ ಮೀರಿದ ಧನ ಸಂಪಾದನೆ. ಉತ್ತಮ ವಾಕ್ ಚತುರತೆ ಜನಾದಾರ ಪ್ರಾಪ್ತಿ. ವಿದ್ಯಾರ್ಜನೆಯಲ್ಲಿ ಪ್ರಗತಿ.
ಧನು: ಗೃಹದಲ್ಲಿ ಸಂತಸದ ವಾತಾವರಣ. ಬಂಧುಮಿತ್ರರ ಆಗಮನ. ಮಾತೃ ಸಮಾನರಿಂದ ಪ್ರೋತ್ಸಾಹ. ಉದ್ಯೋ ವ್ಯವಹಾರಗಳಲ್ಲಿ ಹಿರಿಯರ ಪ್ರೋತ್ಸಾಹ ಸಹಕಾರದಿಂದ ಪ್ರಗತಿ. ನಿರೀಕ್ಷಿತ ಧನಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ. ಆರೋಗ್ಯ ಸುದೃಢ.
ಮಕರ: ಆರೋಗ್ಯ ಗಮನಿಸಿ. ಪರಿಶ್ರಮದಿಂದ ಕೂಡಿದ ದೈನಿಕ ದಿನಚರಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ.
ಕುಂಭ: ವಿದ್ಯಾರ್ಜನೆ ಜ್ಞಾನ ಸಂಪಾದನೆಯಲ್ಲಿ ಮಗ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ವರಮಾನ ಪ್ರಾಪ್ತಿ. ಅನ್ಯರ ಮೇಲೆ ಅವಲಂಬಿತರಾಗದೆ ಸ್ವಪ್ರಯತ್ನದಲ್ಲ ಮುನ್ನಡೆಯಿರಿ. ಗೃಹದಲ್ಲಿ ಸಂತಸದ ವಾತಾವರಣ.
ಮೀನ: ಉದ್ಯೋಗ ವ್ಯವಹಾರಗಳಲ್ಲಿ ಕೈಗೊಂಡ ಸಫಲತೆಯಿಂದ ಮಾನಸಿಕ ತೃಪ್ತಿ. ದೇವತಾ ಸ್ಥಳ ಸಂದರ್ಶನ. ಹೆಚ್ಚಿದ ವರಮಾನ. ಗೃಹದಲ್ಲಿ ಸಂತಸದ ವಾತಾವರಣ. ಸಾಂಸಾರಿಕ ಸುಖ ವೃದ್ಧಿ. ಉತ್ತಮ ಸುದೃಢ ಆರೋಗ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.